More

    ಜೆಎನ್​ಯು ಹಿಂಸಾಚಾರ| ಯೂನಿಟಿ ಅಗೇನಿಸ್ಟ್​ ಲೆಫ್ಟ್ ಎಂಬ ವಾಟ್ಸ್​ಆ್ಯಪ್ ಗ್ರೂಪ್​ನ 37 ಜನರೂ ದಾಳಿಯಲ್ಲಿ ಭಾಗಿ: ದೆಹಲಿ ಪೊಲೀಸ್​

    ನವದೆಹಲಿ: ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಜನವರಿ 5ರಂದು ನಡೆದ ಹಿಂಸಾಚಾರ, ದಾಳಿಯಲ್ಲಿ ಯೂನಿಟಿ ಅಗೇನಿಸ್ಟ್​ ಲೆಫ್ಟ್ ಎಂಬ ವಾಟ್ಸ್​ಆ್ಯಪ್ ಗ್ರೂಪ್​ನ 37 ಜನರೂ ಭಾಗಿಯಾಗಿದ್ದಾರೆ. ಅವರನ್ನು ಗುರುತಿಸಲಾಗಿದೆ ಎಂದು ಪ್ರಕರಣಧ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರು ತಿಳಿಸಿದ್ದಾರೆ.

    ಈ ಪ್ರಕರಣದ ತನಿಖೆಗೆ ನಿಯೋಜಿತವಾಗಿರುವ ವಿಶೇಷ ತನಿಖಾ ತಂಡ (ಎಸ್​ಐಟಿ) ಯೂನಿಟಿ ಅಗೇನಿಸ್ಟ್​ ಲೆಫ್ಟ್ ಎಂಬ ವಾಟ್ಸ್​ಆ್ಯಪ್ ಗ್ರೂಪ್​ ಅನ್ನು ಪತ್ತೆಹೆಚ್ಚಿದ್ದು, ಅದರಲ್ಲಿರುವ 60 ಸದಸ್ಯರ ಪೈಕಿ 37 ಜನ ದಾಳಿಯಲ್ಲಿ ಭಾಗಿಯಾಗಿರುವುದನ್ನು ಖಚಿತಪಡಿಸಿಕೊಂಡಿದೆ. ಪೊಲೀಸ್ ಮಾಹಿತಿ ಪ್ರಕಾರ, ಈ ಗ್ರೂಪನ್ನು ಎಡಪಕ್ಷಗಳನ್ನು ಟಾರ್ಗೆಟ್ ಮಾಡಲು ಜನವರಿ 5ರಂದೇ ರಚಿಸಲಾಗಿದೆ.


    ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಗುರುತಿಸಲಾಗಿರುವ ಒಂಭತ್ತು ಜನರ ಭಾವಚಿತ್ರಗಳನ್ನು ಇದಕ್ಕೂ ಮೊದಲು ದೆಹಲಿ ಪೊಲೀಸರು ಬಿಡುಗಡೆ ಮಾಡಿದ್ದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts