Monday, 19th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

35 ಶಾಸಕರ ವಿರುದ್ಧ ಗಂಭೀರ ಕ್ರಿಮಿನಲ್ ಆರೋಪ

Friday, 06.04.2018, 3:02 AM       No Comments

ಬೆಂಗಳೂರು: ರಾಜ್ಯದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆಯಾದ ಒಟ್ಟು ಶಾಸಕರ ಪೈಕಿ 35 ಜನರು 5 ವರ್ಷದವರೆಗೆ ಶಿಕ್ಷೆ ವಿಧಿಸಬಹುದಾದ ಗಂಭೀರ ಅಪರಾಧಗಳ ಆರೋಪ ಹೊತ್ತು ಪ್ರಕರಣ ಎದುರಿಸುತ್ತಿದ್ದಾರೆ.

ಪ್ರಜಾತಂತ್ರ ಸುಧಾರಣೆ ಒಕ್ಕೂಟ(ಎಡಿಆರ್) ವರದಿ ಈ ಮಾಹಿತಿಯನ್ನು ಬಿಚ್ಚಿಟ್ಟಿದೆ. 2013ರ ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳಾಗಲು ಚುನಾವಣೆ ಆಯೋಗಕ್ಕೆ ಸಲ್ಲಿಸಿದ್ದ ಅಫಿಡವಿಟ್​ನ ಆಧಾರದಲ್ಲಿ ಈ ವರದಿ ಸಿದ್ಧಪಡಿಸಲಾಗಿದೆ. ಒಟ್ಟು 68 ಶಾಸಕರು ತಮ್ಮ ವಿರುದ್ಧ ಕ್ರಿಮಿನಲ್ ಆರೋಪಗಳಿವೆ ಎಂದು ತಿಳಿಸಿದ್ದಾರೆ. ಈ ಪೈಕಿ 35 ಶಾಸಕರ ವಿರುದ್ಧ ಗಂಭೀರ ಅಪರಾಧ ಪ್ರಕರಣಗಳಿವೆ.

ರಾಜ್ಯದಲ್ಲಿ 224 ಶಾಸಕರಿದ್ದರೂ, ಅಫಿಡವಿಟ್​ಗಳನ್ನು ಸೂಕ್ತ ರೀತಿಯಲ್ಲಿ ಸ್ಕ್ಯಾನ್ ಮಾಡದ ಸಲುವಾಗಿ 207 ಜನಪ್ರತಿನಿಧಿಗಳ ಮಾಹಿತಿಯನ್ನಷ್ಟೆ ವಿಶ್ಲೇಷಣೆ ಮಾಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಸಾಲದಲ್ಲೂ ನಂ.1

ಅತಿ ಹೆಚ್ಚು ಆಸ್ತಿ ಹೊಂದಿರುವ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಪ್ರಿಯ ಕೃಷ್ಣ, ಸಾಲದಲ್ಲೂ(777 ಕೋಟಿ ರೂ.) ಮುಂದೆ ಇದ್ದಾರೆ. ನಂತರದಲ್ಲಿ ಡಿ.ಕೆ. ಶಿವಕುಮಾರ್( 105 ಕೋಟಿ ರೂ.), ವಿಜಯನಗರ ಕಾಂಗ್ರೆಸ್ ಶಾಸಕ ಎಂ. ಕೃಷ್ಣಪ್ಪ( 78 ಕೋಟಿ ರೂ.), ಅನಿಲ್ ಲಾಡ್( 73 ಕೋಟಿ ರೂ.), ರಾಮನಗರ ಶಾಸಕ ಎಚ್.ಡಿ. ಕುಮಾರಸ್ವಾಮಿ(66 ಕೋಟಿ ರೂ.) ಸಾಲ ಹೊಂದಿದ್ದಾರೆ.

ಕ್ರಿಮಿನಲ್ ಆರೋಪ ಹೊತ್ತವರು

ಬಿ. ವೈ. ರಾಘವೇಂದ್ರ, ಸಿ. ಪಿ. ಯೋಗೇಶ್ವರ್, ಮಾಂಕಾಳ ಸುಬ್ಬ ವೈದ್ಯ, ಅಶೋಕ್ ಖೇಣಿ, ವಿಜಯಾನಂದ ಕಾಶಪ್ಪನವರ್, ಡಿ. ಸುಧಾಕರ್, ಸತೀಶ್ ಸೈಲ್, ಬಿ.ಎಂ. ನಾಗರಾಜ್, ಯಶವಂತ ಗೌಡ ಪಾಟೀಲ್, ಕೆ.ಬಿ. ಕೋಳಿವಾಡ್, ಎಂ. ಟಿ. ಕೃಷ್ಣಪ್ಪ, ಭೈರತಿ ಬಸವರಾಜು, ಸಿ.ಟಿ. ರವಿ, ದತ್ತಾತ್ರೇಯ ಪಾಟೀಲ ರೇವೂರು, ಸುರೇಶ್ ಕುಮಾರ್, ಸಂಭಾಜಿ ಪಾಟೀಲ್, ಖಮರುಲ್ ಇಸ್ಲಾಂ(ನಿಧನ), ಎಸ್.ಎಸ್. ಮಲ್ಲಿಕಾರ್ಜುನ್, ಅಜಯ್ ಧರ್ಮಸಿಂಗ್, ಸಂಜಯ ಪಾಟೀಲ್, ಉಮಾಶ್ರೀ, ಸಿ. ಬಿ. ಸುರೇಶ್ ಬಾಬು, ಡಿ.ಎನ್. ಜೀವರಾಜ್, ಬಿ.ಝುಡ್ ಜಮೀರ್ ಅಹ್ಮದ್ ಖಾನ್, ಡಾ. ರಫೀಕ್ ಅಹ್ಮದ್, ಮಲ್ಲಿಕಾರ್ಜುನ ಖೂಬಾ, ರುದ್ರಪ್ಪ ಲಮಾಣಿ, ಮುನಿರತ್ನ, ಡಾ. ಶರಣಪ್ರಕಾಶ್ ಪಾಟೀಲ್, ಕೆ.ಎಂ.ಶಿವಲಿಂಗೇಗೌಡ, ಉಮೇಶ್ ಜಾಧವ್, ರಾಜಶೇಖರ ಪಾಟೀಲ್, ಜಿ. ಹಂಪಯ್ಯ, ಆನಂದ ಸಿಂಗ್, ಅರವಿಂದ ಬೆಲ್ಲದ್, ಕಾಗೋಡು ತಿಮ್ಮಪ್ಪ, ಬಿ.ಆರ್. ಪಾಟೀಲ್, ಶಾಮನೂರು ಶಿವಶಂಕರಪ್ಪ, ವೈ.ಎಸ್. ವಿ. ದತ್ತ, ಆರ್. ಅಶೋಕ್, ಬಿ.ಎ. ಮೊಯಿಯುದ್ದೀನ್, ಎಂ.ಕೆ. ಸೋಮಶೇಖರ್, ವಾಸು, ಪ್ರಿಯ ಕೃಷ್ಣ, ಶಿವಾನಂದ ಪಾಟೀಲ್, ಕಿಮ್ಮನೆ ರತ್ನಾಕರ, ಡಿ.ಜಿ. ಶಾಂತನಗೌಡ, ಟಿ.ಎಚ್. ಸುರೇಶ್ ಬಾಬು, ವಿನಯ ಕುಲಕರ್ಣಿ, ಡಿ. ನಾಗರಾಜಯ್ಯ, ಬಿ. ನಾಗೇಂದ್ರ, ವಿ. ಸುನೀಲ್ ಕುಮಾರ್, ಶಿವನಗೌಡ ನಾಯಕ್, ವಿನಯಕುಮಾರ್ ಸೊರಕೆ, ಕೆ.ಆರ್. ರಮೇಶ್ ಕುಮಾರ್, ಸುರೇಶ್ ಗೌಡ, ರಮೇಶ್ ಜಾರಕಿಹೊಳಿ, ಸಿದ್ದು ನ್ಯಾಮಗೌಡ, ಡಿ.ಕೆ.ಶಿವಕುಮಾರ್, ಬಿ.ಜಿ.ಗೋವಿಂದಪ್ಪ, ಡಿ.ಸಿ.ತಮ್ಮಣ್ಣ, ಎಂ.ಕೃಷ್ಣಪ್ಪ, ಕೆ.ಜಿ. ಭೊಪಯ್ಯ, ಎಂ.ಜೆ. ಅಪ್ಪಾಜಿ, ಜೆ.ಟಿ. ಪಾಟೀಲ್, ಎನ್.ಎಚ್. ಕೋನರೆಡ್ಡಿ, ಯು.ಟಿ. ಖಾದರ್, ಅಖಂಡ ಶ್ರೀನಿವಾಸ ಮೂರ್ತಿ.

ಕಾಂಗ್ರೆಸ್ ಬಿಜೆಪಿ ಮುಂದೆ

ಕಾಂಗ್ರೆಸ್​ನ 114 ಶಾಸಕರಲ್ಲಿ 36 ಜನರ ವಿರುದ್ಧ ಕ್ರಿಮಿನಲ್ ಆರೋಪಗಳಿವೆ. ಈ ಪೈಕಿ 17 ಶಾಸಕರು ಗಂಭೀರ ಆರೋಪ ಎದುರಿಸುತ್ತಿದ್ದಾರೆ. ಬಿಜೆಪಿಯ 40 ಶಾಸಕರಲ್ಲಿ 13 ಜನರು ಕ್ರಿಮಿನಲ್ ಆರೋಪ ಹೊತ್ತಿದ್ದರೆ ಈ ಪೈಕಿ 8 ಜನರು ಗಂಭೀರ ಆರೋಪ ಎದುರಿಸುತ್ತಿ ದ್ದಾರೆ. ಜೆಡಿಎಸ್​ನ 11 ಶಾಸಕರು ಸಾಮಾನ್ಯ, ಐವರು ಗಂಭೀರ ಆರೋಪ ಎದುರಿಸುತ್ತಿರುವುದಾಗಿ ತಿಳಿಸಿದ್ದಾರೆ. ಗಂಭೀರ ಅಪರಾಧಗಳು ಜಾಮೀನು ರಹಿತವಾಗಿದ್ದು, 5 ವರ್ಷದವರೆಗೆ ಶಿಕ್ಷೆ ವಿಧಿಸಬಹುದೆಂದು ವರದಿ ಹೇಳಿದೆ.

 ಪ್ರಿಯಕೃಷ್ಣ ಆಸ್ತಿ 910 ಕೋಟಿ!

108 ಶಾಸಕರು ಕೋಟ್ಯಧಿಪತಿಗಳು

ರಾಜ್ಯದ ಶೇ.52 ಶಾಸಕರ ಆಸ್ತಿ 5 ಕೋಟಿ ರೂ.ಗಿಂತ ಹೆಚ್ಚಿದೆ. 5 ಕೋಟಿ ರೂ.ಗಿಂತ ಹೆಚ್ಚಿನ 108 ಶಾಸಕರಿದ್ದು, ಶೇ.25(52) ಶಾಸಕರು 2 ಕೋಟಿ ರೂ.ನಿಂದ 5 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಶೇ.22 ಶಾಸಕರು(45) 50 ಲಕ್ಷ ರೂ.ನಿಂದ 2 ಕೋಟಿ ರೂ. ಆಸ್ತಿ ಹೊಂದಿದ್ದಾರೆ.

ರಾಜ್ಯದಲ್ಲೆ ಅತಿ ಶ್ರೀಮಂತ ಶಾಸಕರಾಗಿ ಬೆಂಗಳೂರಿನ ಗೋವಿಂದರಾಜ ನಗರದ ಕಾಂಗ್ರೆಸ್ ಶಾಸಕ ಪ್ರಿಯ ಕೃಷ್ಣ ಘೋಷಿಸಿಕೊಂಡಿದ್ದು, 910 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ನಂತರದಲ್ಲಿ ಹೊಸಕೋಟೆ ಕಾಂಗ್ರೆಸ್ ಶಾಸಕ ಎಂ.ಟಿ.ಬಿ. ನಾಗರಾಜ್(470 ಕೋಟಿ ರೂ.) ಬಳ್ಳಾರಿ ಕಾಂಗ್ರೆಸ್ ಶಾಸಕ ಅನಿಲ್ ಲಾಡ್(288 ಕೋಟಿ ರೂ.), ಕನಕಪುರದ ಕಾಂಗ್ರೆಸ್ ಶಾಸಕ ಡಿ. ಕೆ. ಶಿವಕುಮಾರ್( 251 ಕೋಟಿ ರೂ.,) ಕಲಘಟಗಿ ಕಾಂಗ್ರೆಸ್ ಶಾಸಕ ಸಂತೋಷ್ ಲಾಡ್( 186 ಕೋಟಿ ರೂ.) ಇದ್ದಾರೆ.

ಜಗಳೂರಿನ ಕಾಂಗ್ರೆಸ್ ಶಾಸಕ ಎಚ್.ಪಿ. ರಾಜೇಶ್ 7 ಲಕ್ಷ ರೂ. ಆಸ್ತಿ ಘೋಷಿಸಿಕೊಂಡಿದ್ದು, ಅತಿ ಕಡಿಮೆ ಆಸ್ತಿ ಹೊಂದಿದ್ದಾರೆ.

Leave a Reply

Your email address will not be published. Required fields are marked *

Back To Top