34.90 ಲಕ್ಷ ರೂ. ಉಳಿತಾಯ ಬಜೆಟ್

blank

ಕಾರವಾರ: ಇಲ್ಲಿನ ನಗರಸಭೆಯ 2020-21 ರ ಆಯವ್ಯಯಕ್ಕೆ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಡಾ .ಹರೀಶ ಕುಮಾರ ಮಂಜೂರಾತಿ ನೀಡಿದ್ದಾರೆ.

ಚುನಾವಣೆ ನಡೆದು ಸದಸ್ಯರ ಆಯ್ಕೆಯಾದರೂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಗೊಂದಲದಿಂದ ಇದುವರೆಗೂ ಆಡಳಿತ ಸಮಿತಿ ರಚನೆಯಾಗಿಲ್ಲ. ಇದರಿಂದ ಸತತ ಎರಡನೇ ವರ್ಷ ಆಡಳಿತಾಧಿಕಾರಿಯೇ ಬಜೆಟ್ ಸಿದ್ಧಪಡಿಸಿ ಅನುಮೋದಿಸುವಂತಾಗಿದೆ.

ಬರುವ ಆರ್ಥಿಕ ವರ್ಷಕ್ಕೆ ಒಟ್ಟು 34.90 ಲಕ್ಷ ರೂ. ಉಳಿತಾಯ ಬಜೆಟ್ ಸಿದ್ಧ ಮಾಡಲಾಗಿದೆ. ಸ್ಥಳೀಯ ಆದಾಯ ಹಾಗೂ ಸರ್ಕಾರದ ಅನುದಾನದಿಂದ 38.26 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದ್ದು, 37.91 ಕೋಟಿ ರೂ. ಖರ್ಚು ಮಾಡುವ ಯೋಜನೆ ಹೊಂದಲಾಗಿದೆ.

ಯಾವುದಕ್ಕೆ ಎಷ್ಟು ಮೀಸಲು?: ರಸ್ತೆಗಳ ನಿರ್ಮಾಣ ಹಾಗೂ ನವೀಕರಣಕ್ಕಾಗಿ 1.95 ಕೋಟಿ ರೂ. ರಸ್ತೆ ಬದಿ ಚರಂಡಿ ಹೂಳು ತೆಗೆಯಲು 1.66 ಕೋಟಿ ರೂ., ಮೀನು ಮಾರುಕಟ್ಟೆ ನಿರ್ವಣಕ್ಕೆ 3 ಕೋಟಿ ರೂ., ಕಚೇರಿ ಕಟ್ಟಡ ನಿರ್ಮಾಣ ಹಾಗೂ ವಾಣಿಜ್ಯ ಸಂಕೀರ್ಣ ನಿರ್ವಣಕ್ಕೆ 5 ಕೋಟಿ ರೂ.ಪೌರ ಕಾರ್ವಿುಕರ ಗೃಹಭಾಗ್ಯ ನಿರ್ವಣಕ್ಕೆ 2.5 ಕೋಟಿ ರೂ. ಹಾಗೂ ಸಭಾಭವನ ನಿರ್ವಣಕ್ಕಾಗಿ 20 ಲಕ್ಷ ರೂ., ಸಾರ್ವಜನಿಕ ಶೌಚಗೃಹ ನಿರ್ವಣಕ್ಕೆ 18 ಲಕ್ಷ ರೂ., ಸ್ಮಶಾನ ಅಭಿವೃದ್ಧಿ ಹಾಗೂ ದುರಸ್ತಗಾಗಿ 40 ಲಕ್ಷ ರೂ., ಬೀದಿ ದೀಪಗಳ ಜೋಡಣೆಗಾಗಿ 50 ಲಕ್ಷ ರೂ.ಮತ್ತು ನೀರು ಪೂರೈಕೆ ಹೊಸ ಪೈಪ್​ಲೈನ್ ಅಳವಡಿಕೆ, ದುರಸ್ತಿ ಹಾಗೂ ಟ್ಯಾಂಕರ್ ಮೂಲಕ ನೀರು ಸರಬರಾಜುಗಾಗಿ 1.05 ಕೋಟಿ ರೂ., ಗಾರ್ಡನ್ ಅಭಿವೃದ್ಧಿಗೆ 40 ಲಕ್ಷ ರೂ., ಎಸ್​ಟಿಪಿ ನಿರ್ವಹಣೆಗಾಗಿ 42 ಲಕ್ಷ ರೂ., ಬೀದಿ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಹಾಗೂ ಬಿಡಾಡಿ ದನಗಳನ್ನು ಸಾಗಿಸಲು 7ಲಕ್ಷ ರೂ., ರ್ಪಾಂಗ್ ವ್ಯವಸ್ಥೆ ಹಾಗೂ ರಸ್ತೆಗಳನ್ನು ಸೂಚಿಸುವ ನಾಮಫಲಕಗಳಿಗೆ 15 ಲಕ್ಷ ರೂ., ಸ್ವಚ್ಛ ಭಾರತ್ ಮಿಷನ್​ಗೆ ಸಂಬಂಧಿಸಿದ ಅಭಿವೃದ್ಧಿ ಕಾಮಗಾರಿಗಳಿಗೆ 1 ಕೋಟಿ ರೂ., ವಾಹನ ಖರೀದಿಗಾಗಿ 37 ಲಕ್ಷ ರೂ., ನೈರ್ಮಲ್ಯ ಸಾಮಾಗ್ರಿ ಖರೀದಿಗಾಗಿ 14 ಲಕ್ಷ ರೂ., ಜಲಮಂಡಳಿಯಿಂದ ನೀರು ಖರೀದಿಗಾಗಿ 70, ಸಾರ್ವಜನಿಕ ಶೌಚಗೃಹ ನಿರ್ವಹಣೆಗಾಗಿ 20 ಲಕ್ಷ ರೂ., ಬೀದಿ ದೀಪದ ವಿದ್ಯುತ್ ಬಿಲ್ ಪಾವತಿಗಾಗಿ 4 ಕೋಟಿ, ಹೊರಗುತ್ತಿಗೆ ಪೌರ ಕಾರ್ವಿುಕರ ಹಾಗೂ ವಾಹನ ಚಾಲಕರ ಪೂರೈಕೆಗಾಗಿ 1.44 ಕೋಟಿ ರೂ., ನಗರ ವ್ಯಾಪ್ತಿಯಡಿ ಗಿಡ ನೆಡುವುದಕ್ಕಾಗಿ 10 ಲಕ್ಷ ರೂ., ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಇತರೆ ಬಡ ಜನರ ಹಾಗೂ ಅಂಗವಿಕಲರ ಕಲ್ಯಾಣ ಕಾರ್ಯಕ್ರಮಗಳಿಗಾಗಿ 1.16 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.

ಆದಾಯ: ಕಟ್ಟಡ ಮತ್ತು ಭೂಮಿಯ ಮೇಲಿನ ಕರ 5.20 ಕೋಟಿ ರೂ.ಸಂಗ್ರಹವಾಗಬಹುದು ಎಂದು ಅಂದಾಜಿಸಲಾಗಿದೆ. ವಾಣಿಜ್ಯ ಮಳಿಗೆ ಬಾಡಿಗೆಯಿಂದ 1.15 ಕೋಟಿ, ತರಕಾರಿ ಮತ್ತು ಮೀನು ಮಾರುಕಟ್ಟೆ ಹರಾಜು ಶುಲ್ಕ 40 ಲಕ್ಷ ರೂ., ನೀರು ಸರಬರಾಜು ಹಾಗೂ ಹೊಸ ಕಲೆಕ್ಷನ್ ಶುಲ್ಕ 80 ಲಕ್ಷ ರೂ., ಯುಜಿಡಿ ವಾರ್ಷಿಕ ಶುಲ್ಕ ಹಾಗೂ ಹೊಸ ಕನೆಕ್ಷನ್ 10 ಲಕ್ಷ ರೂ., ಉದ್ದಿಮೆ ಪರವಾನಗಿಯಿಂದ 17 ಲಕ್ಷ ರೂ., ಜಾಹೀರಾತು ಕರ 16.5ಲಕ್ಷ ರೂ., ಆಸ್ತಿ ತೆರಿಗೆ ಮೇಲೆ ಹಾಗೂ ಬಳಕೆದಾರರ ಮೇಲೆ ಘನತ್ಯಾಜ್ಯ, ವಸ್ತು ನಿರ್ವಹಣೆ ಶುಲ್ಕ 50 ಲಕ್ಷ ರೂ., ಬಡ್ಡಿ ಮತ್ತು ದಂಡದಿಂದ ಬರುಬಹುದಾದ ಆಧಾಯ 1.10 ಕೋಟಿ ರೂ., ಸೇವಾ ಹಾಗೂ ಇತರೆ ಶುಲ್ಕ 54.20 ಲಕ್ಷ ರೂ.ಹಾಗೂ ಸರ್ಕಾರದಿಂದ ಬರಬಹುದಾದ ಅನುದಾನ 24.14 ಕೋಟಿ ರೂ. ಎಂದು ನಿರೀಕ್ಷಿಸಲಾಗಿದೆ ಎಂದು ನಗರಸಭೆ ಪ್ರಭಾರ ಪೌರಾಯುಕ್ತ ಆರ್.ಪಿ.ನಾಯ್ಕ ತಿಳಿಸಿದ್ದಾರೆ.

ಈ ಆಯವ್ಯಯದಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಮೂಲ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಹಾಗೂ ಆಡಳಿತಾತ್ಮಕ ವೆಚ್ಚಗಳಿಗಾಗಿ ಹೆಚ್ಚಿನ ಹಣವನ್ನು ಮೀಸಲಿಡಲಾಗಿದೆ. – ಆರ್.ಪಿ.ನಾಯ್ಕ, ಎಇಇ, ಕಾರವಾರ ನಗರಸಭೆ

Share This Article

ಅಧಿಕ ಬಿಪಿ ಇರುವವರು ಯಾವ ಆಹಾರದಿಂದ ದೂರವಿರಬೇಕು ಎಂದು ನಿಮಗೆ ತಿಳಿದಿದೆಯೇ? high blood pressure

high blood pressure: ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಬಿಪಿ ಸಮಸ್ಯೆಯೂ ಒಂದು. ಅಧಿಕ…

ಶಿವನ ಕೃಪೆಗೆ ಪಾತ್ರರಾಗಲು ಈ ಒಂದು ಕೆಲಸ ಮಾಡಬೇಕು! Lord Shiva Worship

Lord Shiva Worship: ಪರಮೇಶ್ವರ ಹಿಂದೂಗಳು ಹೆಚ್ಚು ಪೂಜಿಸುವ ದೇವರುಗಳಲ್ಲಿ ಒಂದಾಗಿದೆ. ಭಗವಂತನನ್ನು ಒಂದೊಂದು ಸ್ಥಳದಲ್ಲಿ…

ಈ ದಿನಾಂಕಗಳಂದು ಜನಿಸಿದ ಮಹಿಳೆಯರು ತಮ್ಮ ಗಂಡನಿಗೆ ಅದೃಷ್ಟ ಹೊತ್ತು ತರುತ್ತಾರೆ! Numerology

Numerology : ಜ್ಯೋತಿಷ್ಯದಲ್ಲಿ ಅನೇಕ ಬಗೆಗಳಿರುವುದು ಎಲ್ಲರಿಗೂ ತಿಳಿದಿದೆ. ಅವುಗಳಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಸಂಖ್ಯೆಗಳು ನಮ್ಮ…