Friday, 16th November 2018  

Vijayavani

ಕೋರ್​​ ಕಮಿಟಿ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಫೈಟ್- ಶೋಭಾಗೆ ಸ್ಥಾನ ನೀಡಲು ಹೆಗಡೆ ಜತೆ ಬಿಎಸ್​ವೈ ಪೈಪೋಟಿ        ಮೈಸೂರು ಪಾಲಿಕೆ ಮೇಯರ್​, ಉಪ ಮೇಯರ್​ ಸ್ಥಾನಕ್ಕಿಂದು ಚುನಾವಣೆ: ಮೇಯರ್​ ಗಾದಿಗಾಗಿ ದೋಸ್ತಿಗಳ ಫೈಟ್​        ಅಯ್ಯಪ್ಪನ ದರ್ಶನಕ್ಕಾಗಿ ಕೇರಳದ ಕೊಚ್ಚಿಗೆ ಬಂದಿಳಿದ ಹೋರಾಟಗಾರ್ತಿ ತೃಪ್ತಿ ದೇಸಾಯಿಗೆ ಪ್ರತಿಭಟನೆ ಬಿಸಿ        ಗಜ ಚಂಡಮಾರುತ ಅಬ್ಬರ: ತಮಿಳುನಾಡಿನ ಕರಾವಳಿವಳಿಯಲ್ಲಿ ಜನ ತತ್ತರ, ರಾಜ್ಯದ ದಕ್ಷಿಣ ಒಳನಾಡಿನಲ್ಲೂ ಮಳೆ ಸಾಧ್ಯತೆ        ಕಬ್ಬಿಗೆ ಸಮರ್ಪಕ ಬೆಲೆ ನೀಡುವಂತೆ ಆಗ್ರಹಿಸಿ ಮುಧೋಳದಲ್ಲಿ ರೈತರ ಬೃಹತ್​ ಹೋರಾಟ       
Breaking News

33 ಕ್ಷೇತ್ರಗಳಲ್ಲಿ ರಜನಿ ಹೊಸ ಪಕ್ಷಕ್ಕೆ ಜಯ

Wednesday, 17.01.2018, 3:01 AM       No Comments

ನವದೆಹಲಿ: ಮಾಜಿ ಸಿಎಂ ಜಯ ಲಲಿತಾ ಮೃತರಾಗಿ ಒಂದು ವರ್ಷ, ಎಐಎಡಿಎಂಕೆ ಆಂತರಿಕ ತಿಕ್ಕಾಟ, ಸೂಪರ್​ಸ್ಟಾರ್ ರಜನಿಕಾಂತ್ –

ಕಮಲ್​ಹಾಸನ್ ರಾಜಕೀಯ ಪ್ರವೇಶ ಮತ್ತು ಡಿಎಂಕೆಯಲ್ಲಿ ಸ್ಟಾಲಿನ್ ಅಧಿಪತ್ಯದ ಬೆಳವಣಿಗೆಗಳ ನಡುವೆ ತಮಿಳುನಾಡಿನಲ್ಲಿ ಈಗ ವಿಧಾನಸಭೆ ಚುನಾ ವಣೆ ನಡೆದರೆ ಡಿಎಂಕೆ-ಕಾಂಗ್ರೆಸ್ ಸರ್ಕಾರ ಖಚಿತ ಎಂದು ಸಮೀಕ್ಷೆಯೊಂದು ಭವಿಷ್ಯ ನುಡಿದಿದೆ. ಇಂಡಿಯಾ ಟುಡೆ-ಕಾರ್ವಿ ಇನ್​ಸೈಟ್ಸ್ ನಡೆಸಿರುವ ಚುನಾವಣೆ ಜನಾಭಿಪ್ರಾಯ ಸಮೀಕ್ಷೆಯಲ್ಲಿ ಎಐಎಡಿಎಂಕೆ ಕೇವಲ 68 ಕ್ಷೇತ್ರಗಳಲ್ಲಿ ಜಯಗಳಿಸಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಶೇ. 34 ಮತಗಳಿಕೆಯೊಂದಿಗೆ ಡಿಎಂಕೆ ಮತ್ತು ಮಿತ್ರಪಕ್ಷವಾದ ಕಾಂಗ್ರೆಸ್​ಗೆ 130 ಕ್ಷೇತ್ರಗಳಲ್ಲಿ ಗೆಲುವು ಸಿಗಲಿದೆ. ಸ್ಟಾಲಿನ್​ಗೆ ಸಿಎಂ ಕುರ್ಚಿ ಒಲಿಯುವ ಸಾಧ್ಯತೆ ಇದೆ.

ರಜನಿಗೆ ಭರ್ಜರಿ ಲಾಭ: ಎಐಎಡಿಎಂಕೆ ಆಂತರಿಕ ತಿಕ್ಕಾಟದಿಂದ ಬೇಸತ್ತಿರುವ ಜನರು ಸೂಪರ್​ಸ್ಟಾರ್ ರಜನಿ ಕಡೆಗೆ ಒಲವು ಹೊಂದಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ. ಪರಿಣಾಮ ಚೊಚ್ಚಲ ವಿಧಾನಸಭೆ ಚುನಾವಣೆಯಲ್ಲಿಯೇ ರಜನಿ ಹೊಸ ಪಕ್ಷ 33 ಕ್ಷೇತ್ರಗಳಲ್ಲಿ ಜಯಭೇರಿ ಗಳಿಸಲಿದೆ ಎಂದು ಸಮೀಕ್ಷೆ ಹೇಳಿದೆ. ಕಮಲ್ ಜತೆಗೆ ರಜನಿ ಕೈಜೋಡಿಸಬಾರದು ಎಂದು ಶೇ. 31 ಜನರು ಅಭಿಪ್ರಾಯಪಟ್ಟಿದ್ದಾರೆ.

 

Leave a Reply

Your email address will not be published. Required fields are marked *

Back To Top