ಕಳೆದ ಮೂರು ವರ್ಷದಲ್ಲಿ 328 ಸರ್ಕಾರಿ ನೌಕರರು ಆತ್ಮಹತ್ಯೆ!

ಮೈಸೂರು: ಕೆಲಸದ ಒತ್ತಡ, ವೈಯಕ್ತಿಕ ಸಮಸ್ಯೆ ಸೇರಿದಂತೆ ನಾನಾ ಕಾರಣಗಳಿಂದಾಗಿ ಕಳೆದ ಮೂರು ವರ್ಷದಲ್ಲಿ 328 ಸರ್ಕಾರಿ ಅಧಿಕಾರಿ, ಸಿಬ್ಬಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
2021ರಲ್ಲಿ ಮೂರಂಕಿ 115 ಇದ್ದ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ 2022ರಲ್ಲಿ ಎರಡಂಕಿ 96ಕ್ಕೆ ಇಳಿದಿದೆ. ಆದರೆ 2023ರಲ್ಲಿ ಮತ್ತೆ ಈ ಸಂಖ್ಯೆ ಮೂರಂಕಿ 117 ತಲುಪಿರುವುದು ಆತಂಕಕ್ಕೆ ಕಾರಣವಾಗಿದೆ.
ಆತ್ಮಹತ್ಯೆಗೆ ಶರಣಾದವರ ಸರ್ಕಾರಿ ನೌಕರರ ಪಟ್ಟಿಯಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಅಲ್ಲದೇ ಎರಡನೇ ದೊಡ್ಡ ನಗರಗಳ ಪಟ್ಟಿಯ ಮೈಸೂರು, ಬೆಳಗಾವಿ, ಹುಬ್ಬಳ್ಳಿ, ಧಾರವಾಡದಲ್ಲಿ ತಲಾ 16 ಮಂದಿ, ಗದಗ, ಕಲಬುರ್ಗಿ, ಹಾಸನ, ತುಮಕೂರು ಮತ್ತು ಕರ್ನಾಟಕ ರೈಲ್ವೆ ವಿಭಾಗದಲ್ಲಿ ತಲಾ 12 ಸರ್ಕಾರಿ ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಾಗಲಕೋಟೆ ಮತ್ತು ಉತ್ತರ ಕನ್ನಡದಲ್ಲಿ ತಲಾ 11, ಬೆಂಗಳೂರು ನಗರ ಜಿಲ್ಲೆ ಮತ್ತು ಉಡುಪಿಯಲ್ಲಿ ತಲಾ 10 ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇತರೆ ಜಿಲ್ಲೆಗಳಲ್ಲಿ ಈ ಪ್ರಮಾಣ ಒಂದಂಕಿಯಷ್ಟಿದೆ.
ಅತಿಯಾದ ಕೆಲಸದ ಒತ್ತಡ, ಅಧಿಕಾರಿಗಳಿಂದ ಅವಮಾನ, ಹೇಳಿದ್ದ ಕೆಲಸ ಮಾಡಲೇಬೇಕಾದ ಅಸಹಾಯಕತೆ, ಭ್ರಷ್ಟಾಚಾರದಲ್ಲಿ ಅನಿವಾರ್ಯವಾಗಿ ಸಿಲುಕುವುದು, ತುರ್ತು ಸಂದರ್ಭಗಳಲ್ಲಿ ರಜೆ ದೊರಕದಿರುವುದು, ಅಲ್ಲದೇ ಕುಡಿತ, ಕೌಟುಂಬಿಕ ಕಲಹದಂಥ ವೈಯಕ್ತಿಕ ಕಾರಣಗಳೂ ಆತ್ಮಹತ್ಯೆಗೆ ಕಾರಣ ಎನ್ನಲಾಗುತ್ತಿದೆ.
ರಾಜ್ಯದಲ್ಲಿ 2021ರಿಂದ 2023ರ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಪಟ್ಟಿಯಲ್ಲಿ 54 ಪೊಲೀಸ್ ಸಿಬ್ಬಂದಿಯೂ ಸೇರಿದ್ದಾರೆ. 2021ರಲ್ಲಿ 17, 2022ರಲ್ಲಿ 13 ಹಾಗೂ 2023ರಲ್ಲಿ 24 ಪೊಲೀಸರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬೆಂಗಳೂರು ನಗರದಲ್ಲಿ 13 ಪೊಲೀಸರು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಮೈಸೂರಲ್ಲಿ 5, ಚಾಮರಾಜ ನಗರದಲ್ಲಿ 4, ಬೀದರ್, ಗದಗ, ಮಂಗಳೂರು ನಗರದಲ್ಲಿ ತಲಾ 3, ಕಲಬುರ್ಗಿ ನಗರ, ಶಿವಮೊಗ್ಗ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ತಲಾ ಇಬ್ಬರು, ಉಳಿದ ಜಿಲ್ಲೆಗಳಲ್ಲಿ ತಲಾ ಒಬ್ಬ ಪೊಲೀಸರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೊಂದವರಿಗೆ ಧೈರ್ಯ ತುಂಬಿ, ರಕ್ಷಣೆ ನೀಡಬೇಕಾದ ಪೊಲೀಸರು ಆತ್ಮಹತ್ಯೆ ಮಾಡಿಕೊಂಡಿರುವುದು ಸರ್ಕಾರ ಗಂಭೀರವಾಗಿ ಚಿಂತಿಸಬೇಕಾದ ವಿಷಯವಾಗಿದೆ.
ಆತ್ಮಹತ್ಯೆ ಮಾಡಿಕೊಂಡವರಲ್ಲಿ ಕೆಳ ಹಂತದ ಗುಮಾಸ್ತರು, ಅಕೌಂಟೆಂಟ್ ರೀತಿಯ ಅಧೀನ ಸಿಬ್ಬಂದಿಯೇ ಹೆಚ್ಚು ಎಂಬುದನ್ನು ಗಮನಾರ್ಹ. ಈ ನಿಟ್ಟಿನಲ್ಲಿ ಸರ್ಕಾರ ತನಿಖೆ ನಡೆಸಿ ವರದಿ ತರಿಸಿಕೊಂಡು ಸಿಬ್ಬಂದಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಮಾಹಿತಿ ಸಮಗ್ರಹಿಸಿರುವ ಒಡನಾಡಿ ನಿರ್ದೇಶಕ ಪರಶುರಾಮ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Share This Article

ಬೇಸಿಗೆಯಲ್ಲಿ ಬೆಳ್ಳುಳ್ಳಿಯನ್ನು ಹೆಚ್ಚು ತಿನ್ನುತ್ತೀರಾ? ಈ ಮಾಹಿತಿ ನಿಮಗಾಗಿ..garlic

garlic: ಬೆಳ್ಳುಳ್ಳಿ ನಮ್ಮ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ.  ಆದರೆ ಬೇಸಿಗೆಯಲ್ಲಿ ಹೆಚ್ಚು ಬೆಳ್ಳುಳ್ಳಿ ತಿಂದರೆ…

ಎಷ್ಟೇ ನೀರು ಕುಡಿದ್ರೂ ನಿಮಗೆ ಪದೇ ಪದೇ ಬಿಕ್ಕಳಿಕೆ ಬರುತ್ತಿದೆಯೇ? ಈ ಮನೆಮದ್ದು ಟ್ರೈ ಮಾಡಿ Hiccups

Hiccups : ಬಿಕ್ಕಳಿಕೆ ಎಲ್ಲರಿಗೂ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆ. ಕೆಲವೊಮ್ಮೆ ಅನಿರೀಕ್ಷಿತವಾಗಿ ಇದು ಪ್ರಾರಂಭವಾಗುತ್ತದೆ ಗಬಗಬನೆ…

18 ತಿಂಗಳ ನಂತರ ಸಿಂಹ ರಾಶಿಗೆ ಕೇತು ಸಂಚಾರ: ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ! Zodiac Signs

Zodiac Signs : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅನೇಕ ಗ್ರಹಗಳು ತಮ್ಮ ರಾಶಿಚಕ್ರ ಚಿಹ್ನೆಗಳನ್ನು ಆಗಾಗ…