16 C
Bangalore
Saturday, December 7, 2019

ಬೇಡಿಕೆ ಈಡೇರಿಕೆಗಾಗಿ ತ್ರಿವಳಿ ಪ್ರತಿಭಟನೆ

Latest News

ಎಲ್ಲ ಸಮುದಾಯಗಳ ನಾಯಕ ಬಾಬಾಸಾಹೇಬ್

ಚಿಕ್ಕಬಳ್ಳಾಪುರ: ಪುತ್ಥಳಿಗೆ ಮಾಲಾರ್ಪಣೆ, ಉಪನ್ಯಾಸ ಸೇರಿ ವಿವಿಧ ಕಾರ್ಯಕ್ರಮಗಳೊಂದಿಗೆ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ ಬಿ.ಆರ್.ಅಂಬೇಡ್ಕರ್‌ರವರ ಪರಿನಿಬ್ಬಾಣ ದಿನ ಶುಕ್ರವಾರ ನಡೆಯಿತು....

ಮತಯಂತ್ರಕ್ಕೆ ಪೊಲೀಸ್ ಸರ್ಪಗಾವಲು

ಹಾವೇರಿ: ಜಿಲ್ಲೆಯ ರಾಣೆಬೆನ್ನೂರ ಹಾಗೂ ಹಿರೇಕೆರೂರ ವಿಧಾನಸಭಾ ಕ್ಷೇತ್ರಗಳ ಮತಯಂತ್ರಗಳನ್ನು ತಾಲೂಕಿನ ದೇವಗಿರಿಯಲ್ಲಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್​ನ ಸ್ಟ್ರಾಂಗ್ ರೂಂನಲ್ಲಿ ಪೊಲೀಸ್ ಸರ್ಪ...

ಅಳಿದುಳಿದ ಉಳ್ಳಾಗಡ್ಡಿಗೂ ಡಿಮಾಂಡ್

ರಾಣೆಬೆನ್ನೂರ: ಕಳೆದ ಒಂದು ತಿಂಗಳ ಹಿಂದೆ ಸಂಪೂರ್ಣ ಬೆಲೆ ಕಳೆದುಕೊಂಡಿದ್ದ ಉಳ್ಳಾಗಡ್ಡಿ ಬೆಳೆಗೆ ಇದೀಗ ಭಾರಿ ಡಿಮಾಂಡ್ ಬಂದಿದೆ. ದರದಲ್ಲಿ ಕೂಡ ಭಾರಿ...

ಸಿಸಿಐನಿಂದ ಹತ್ತಿ ಖರೀದಿ ಶುರು

ಲಕ್ಷ್ಮೇಶ್ವರ: ಒಂದು ವಾರದಿಂದ ಮೋಡ ಕವಿದ ವಾತಾವರಣ ಮತ್ತು ತುಂತುರು ಮಳೆಯಿಂದಾಗಿ ಭಾರತೀಯ ಹತ್ತಿ ನಿಗಮ (ಸಿಸಿಐ)ದವರು ಬೆಂಬಲ ಬೆಲೆಯಡಿ ಹತ್ತಿ...

ಕೆಲಗೇರಿ ಕೆರೆ ಸಂರಕ್ಷಣೆಗೆ ಕ್ರಮ

ಧಾರವಾಡ: ನಗರದ ಇತಿಹಾಸ ಮತ್ತು ನೈಸರ್ಗಿಕ ಪರಂಪರೆ ಪ್ರತಿನಿಧಿಸುವ ಕೆಲಗೇರಿ ಮತ್ತು ಸಾಧನಕೇರಿ ಕೆರೆಗಳನ್ನು ಸಂರಕ್ಷಿಸಿ ಅಬಿವೃದ್ಧಿಪಡಿಸಲಾಗುತ್ತದೆ. ಕೆರೆಗಳ ಸೌಂದಯೀಕರಣಗೊಳಿಸಿ ಪ್ರವಾಸಿತಾಣಗಳಾಗಿ ರೂಪಿಸಲು...

ಹಾಸನ: ಪಿಯು ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಯಲ್ಲಿ ಎಸ್‌ಸಿ, ಎಸ್‌ಟಿ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳ ಶೈಕ್ಷಣಿಕ ಅಂಕ ಅರ್ಹತೆಯನ್ನು ಶೇ.55ಕ್ಕೆ ಏರಿಸಿರುವುದನ್ನು ವಿರೋಧಿಸಿ ಒಬಿಸಿ/ಎಸ್‌ಸಿ ಮತ್ತು ಎಸ್‌ಟಿ ಮೀಸಲಾತಿ ಸಂರಕ್ಷಣಾ ಸಮಿತಿ ವತಿಯಿಂದ ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಹೇಮಾವತಿ ಪ್ರತಿಮೆಯಿಂದ ಎನ್.ಆರ್.ವೃತ್ತ ಮಾರ್ಗವಾಗಿ ಮೆರವಣಿಗೆ ಮೂಲಕ ಬಂದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಮನವಿ ಸಲ್ಲಿಸಿದರು

ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ಶೇ.55 ಅಂಕ ನಿಗದಿಪಡಿಸಿದ್ದು ಅಂಗವಿಕಲ ಹಾಗೂ ಹಿಂದುಳಿದ ವರ್ಗಗಳಿಗೂ ಅದೇ ಮಾನದಂಡ ಅನುಸರಿಸುತ್ತಿರುವುದು ಖಂಡನೀಯ. ನೇಮಕಾತಿ ಅರ್ಹತೆಯ ಅಂಕವನ್ನು ಶೇ. 55 ರಿಂದ 50ಕ್ಕೆ ಇಳಿಸುವಂತೆ ಅನೇಕ ಬಾರಿ ಮನವಿ ಮಾಡಿದ ಪರಿಣಾಮ ಶೇ. 50ಕ್ಕೆ ಇಳಿಸಲಾಗಿತ್ತು. ಆದರೆ ಈಗ ಮೊದಲಿನಂತೆ ಶೇ. 55ಕ್ಕೆ ಏರಿಸಿರುವುದು ಖಂಡನೀಯ ಎಂದರು.

ಯುಜಿಸಿ ಅಂತಹ ಸ್ವಾಯತ್ತ ಸಂಸ್ಥೆಯೆ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಕನಿಷ್ಠ ಶೈಕ್ಷಣಿಕ ಅರ್ಹತೆಯನ್ನು ಶೇ. 50 ಎಂದು ನಿಗದಿಪಡಿಸಿದೆ. ಮೂರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ನೇಮಕಾತಿ ಪ್ರಕ್ರಿಯೆಯನ್ನು ಬೇಗ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.

ಒಬಿಸಿ, ಎಸ್‌ಸಿ ಮತ್ತು ಎಸ್‌ಟಿ ಮೀಸಲಾತಿ ಸಂರಕ್ಷಣಾ ಸಮಿತಿ ಗೌರವಾಧ್ಯಕ್ಷ ಕೆ.ಕೆ. ರುದ್ರಯ್ಯ, ಉಪಾಧ್ಯಕ್ಷ ರಂಗಸ್ವಾಮಿ, ಖಜಾಂಚಿ ಮಲ್ಲಯ್ಯ, ಸಂಚಾಲಕ ಎಂ.ಎಸ್. ಯೋಗೇಶ್, ಮಾನವ ಹಕ್ಕುಗಳ ವೇದಿಕೆಯ ಆರ್. ಮರಿಜೋಸೆಫ್, ಆರ್‌ಪಿಐ ಸತೀಶ್, ನಾಗರಾಜ್ ಹೆತ್ತೂರು ಹಾಗೂ ಇತರರು ಇದ್ದರು.

ಸರ್ಕಾರಿ ಭೂಮಿ ರಕ್ಷಣೆಗೆ ಆಗ್ರಹ:ಗ್ರಾಮದ ಆಂಜನೇಯ ಸ್ವಾಮಿ ದೇವಾಲಯಕ್ಕೆ ಮೀಸಲಿಟ್ಟಿರುವ ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿ ಕಬಳಿಸಲು ಯತ್ನಿಸುತ್ತಿದ್ದು ಆತನ ವಿರುದ್ಧ ಕ್ರಮ ಜರುಗಿಸಿ ಭೂಮಿ ರಕ್ಷಿಸಬೇಕು ಎಂದು ಆಗ್ರಹಿಸಿ ಚನ್ನರಾಯಪಟ್ಟಣ ತಾಲೂಕು ಬಿ. ಹೊನ್ನೇನಹಳ್ಳಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಗ್ರಾಮದ ಸರ್ವೇ ನಂ. 30ರ 9 ಗುಂಟೆ, 31ರಲ್ಲಿನ 3.14 ಎಕರೆ, ಸರ್ವೇ ನಂ. 25ರಲ್ಲಿನ 14 ಗುಂಟೆ ಜಮೀನನ್ನು ಭೂನ್ಯಾಯ ಮಂಡಳಿ ಹಾಗೂ ಜಿಲ್ಲಾಧಿಕಾರಿ ಅಧಿಕೃತ ಜ್ಞಾಪನಾಪತ್ರದ ಅನ್ವಯ ಆಂಜನೇಯ ಸ್ವಾಮಿ ದೇವಾಲಯ, ಅಂಗನವಾಡಿ ಕೇಂದ್ರ, ಸಮುದಾಯ ಭವನ ಹಾಗೂ ಆಶ್ರಯ ಯೋಜನೆಗಳಿಗೆ ಮೀಸಲಿಡಲಾಗಿದೆ. ಆದರೆ, ಗ್ರಾಮದ ಮುಖಂಡರೊಬ್ಬರು ಈ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವುದು ಮಾತ್ರವಲ್ಲದೆ ದೇವಸ್ಥಾನ ನಾಶಕ್ಕೆ ಮುಂದಾಗಿದ್ದಾರೆ. ಜಿಲ್ಲಾಡಳಿತ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ನಾಲ್ಕು ಎಕರೆ ಜಮೀನನ್ನು ಗ್ರಾಮದ ಒಳಿತಿಗೆ ಮೀಸಲಿಡಬೇಕು ಎಂದು ಆಗ್ರಹಿಸಿದರು.

ಗ್ರಾಮಸ್ಥರಾದ ಶಂಕರೇಗೌಡ, ಎಚ್.ಎಂ.ಲೋಕೇಶ್, ಜಯಮ್ಮ, ಶಾಂತಮ್ಮ, ಸಾವಿತ್ರಮ್ಮ ಹಾಗೂ ಇತರರು ಇದ್ದರು.

ವರ್ಗಾವಣೆ ನೀತಿಗೆ ಖಂಡನೆ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ವರ್ಗಾವಣೆ ಪ್ರಕ್ರಿಯೆಯಲ್ಲಿ ಭಾರಿ ಅವ್ಯವಹಾರ ನಡೆದಿದ್ದು, 2016ರಲ್ಲಿ ನಡೆದ ವರ್ಗಾವಣೆಯನ್ನು ಇದುವರೆಗೆ ಪೂರ್ಣಗೊಳಿಸಿಲ್ಲ ಎಂದು ಆರೋಪಿಸಿ ನಗರದ ಕೆಎಸ್‌ಆರ್‌ಟಿಸಿ ವಿಭಾಗೀಯ ಕಚೇರಿ ಎದುರು ಕೆಎಸ್‌ಆರ್‌ಟಿಸಿ ಸ್ಟಾಫ್ ಆ್ಯಂಡ್ ವರ್ಕ್‌ರ್ಸ್ ಫೆಡರೇಷನ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

2016ರ ಜುಲೈ 25, 26 ಹಾಗೂ 27 ರಂದು ಮುಷ್ಕರ ನಡೆದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಅಂತರ ನಿಗಮಗಳ ವರ್ಗಾವಣೆಗಳ ಕುರಿತ ನಮ್ಮ ನಿರ್ಧಾರಕ್ಕೆ ಒಪ್ಪಿತ್ತು. ಈ ಪ್ರಕ್ರಿಯೆ ನಡೆದು 26 ತಿಂಗಳು ಕಳೆದರೂ ಇನ್ನು ಕೂಡ ವರ್ಗಾವಣೆಯಾದವರನ್ನು ಅವರವರ ಸ್ಥಳಗಳಿಗೆ ಕಳುಹಿಸಿಲ್ಲ. ಸಾರಿಗೆ ನಿಗಮ ಬಂದ ನಂತರ ಒಂದೇ ಬಾರಿಗೆ ನಾಲ್ಕು ಸಾವಿರ ನೌಕರರ ವರ್ಗಾವಣೆಯಾಗಿಲ್ಲ. 2009 ರಿಂದ 2016ರ ವರೆಗೆ ಹೈಕೋರ್ಟ್‌ನ ಆದೇಶ ಮುಂದಿಟ್ಟುಕೊಂಡು ನೌಕರರಿಗೆ ಸರ್ಕಾರ ತೊಂದರೆ ನೀಡಿತು. ಈ ತಾರತಮ್ಯದ ವಿರುದ್ಧ ನಿರಂತರ ಹೋರಾಟ ಮಾಡಿದ ಪರಿಣಾಮ ವರ್ಗಾವಣೆ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು ಎಂದು ಸರ್ಕಾರ ಹೇಳಿಕೊಂಡು ಬಂದಿತು. ಆದರೆ ಆ ಕೆಲಸ ಮಾತ್ರ ಆಮೆಗತಿಯಲ್ಲಿ ಸಾಗುತ್ತಿದೆ ಎಂದು ಅವಲತ್ತುಕೊಂಡರು.

ವರ್ಗಾವಣೆಯಾಗಿರುವ ಬಹಳಷ್ಟು ನೌಕರರು ಈಗಾಗಲೇ ತಮ್ಮ ಕುಟುಂಬದವರನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಿದ್ದು, ಸ್ಥಳ ನಿಯುಕ್ತಿಯಾಗದೆ ತೊಂದರೆ ಅನುಭವಿಸುವಂತಾಗಿದೆ. ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರು, ‘ನನ್ನೊಡನೆ ಚರ್ಚಿಸಿ ನಂತರ ವರ್ಗಾವಣೆ ಆದೇಶ ಹೊರಡಿಸಬೇಕಾಗಿದೆ’ ಎಂಬ ಹೇಳಿಕೆ ನೀಡಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸಚಿವರು, ಶಾಸಕರು ಪ್ರತಿನಿತ್ಯ ಸಾರಿಗೆ ಇಲಾಖೆಗೆ ವರ್ಗಾವಣೆ ಬಗ್ಗೆ ಶಿಫಾರಸು ಪತ್ರಗಳನ್ನು ನೀಡುತ್ತಿದ್ದಾರೆ. ನೌಕರರ ವರ್ಗಾವಣೆಗಳು ನೀತಿ, ನಿಯಮ ಪ್ರಕಾರ ನಡೆಯಬೇಕೆ ಹೊರತು ಪ್ರಭಾವಿಗಳ ಶಿಫಾರಸ್ಸು ಮೂಲಕ ಅಲ್ಲ ಎಂದರು.

ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಹಣಕಾಸಿನ ಪರಿಸ್ಥಿತಿ ಗಂಭೀರವಾಗಿದೆ. ಬಿಎಂಟಿಸಿ ಮತ್ತು ವಾಯವ್ಯ ಸಾರಿಗೆ ನಿಗಮಗಳಲ್ಲಿ 400 ಕೋಟಿ ರೂ. ವೇತನ ಬಾಕಿ ಇದೆ. ನೌಕರರ ಭವಿಷ್ಯ ನಿಧಿ, ಆರೋಗ್ಯ ಸೌಲಭ್ಯ, ಜೀವವಿಮೆ ಪ್ರಿಮಿಯಂ, ವೈದ್ಯಕೀಯ ವೆಚ್ಚಗಳ ಮರು ಪಾವತಿ ಪಾರದರ್ಶಕವಾಗಿ ನಡೆಯದೆ ಆತಂಕ ಸೃಷ್ಟಿಸಿದೆ. ಆದ್ದರಿಂದ ಈ ಎಲ್ಲ ಸಮಸ್ಯೆಗಳನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗಂಭೀರವಾಗಿ ಪರಿಗಣಿಸಿ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.

ವರ್ಗಾವಣೆಯಲ್ಲಿ ಅವ್ಯವಹಾರ ನಡೆದಿರುವ ಕುರಿತು ವದಂತಿ ಹರಡಿದ್ದು, ಅಂತರ ನಿಗಮ ವರ್ಗಾವಣೆಯಾದವರನ್ನು ವಿಮುಕ್ತಿ ಮಾಡಬೇಕು. ಬಿಎಂಟಿಸಿ ಮತ್ತು ವಾಯುವ್ಯ ನಿಗಮಗಳಲ್ಲಿ ಕಾರ್ಮಿಕರಿಗೆ ಬರಬೇಕಾದ ಬಾಕಿ ವೇತನ ಪಾವತಿಸಬೇಕು. ಸಾರಿಗೆ ನಿಗಮಗಳಿಗೆ ತೆರಿಗೆ ರಿಯಾಯಿತಿ ಹಾಗೂ ಇತರೆ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕೆಎಸ್‌ಆರ್‌ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಫೆಡರೇಷನ್ ಜಿಲ್ಲಾಧ್ಯಕ್ಷ ಶಿವನಂಜೇಗೌಡ, ಕಾರ್ಯದರ್ಶಿ ರಂಗೇಗೌಡ ಹಾಗೂ ಇತರರು ಇದ್ದರು.

 

Stay connected

278,739FansLike
581FollowersFollow
620,000SubscribersSubscribe

ವಿಡಿಯೋ ನ್ಯೂಸ್

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...

VIDEO| ನನ್ನನ್ನು ಯಾರೂ ಮುಟ್ಟಲಾರರು; ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಹೇಳಿಕೆ

ನವದೆಹಲಿ: "ನನ್ನನ್ನು ಯಾರೂ ಮುಟ್ಟಲಾರರು, ನಿಮಗೊಂದು ಸತ್ಯ ಹೇಳುತ್ತೇನೆ. ನಾನೂ ಪರಮ ಶಿವ, ಅರ್ಥವಾಯ್ತ...?" ಎಂದು ಅತ್ಯಾಚಾರದ ಆರೋಪಿ ನಿತ್ಯಾನಂದ ವಿಡಿಯೋಂದರಲ್ಲಿ ಹೇಳಿದ್ದಾನೆ. ಯಾವ ಕೋರ್ಟ್​ ಕೂಡ ನನ್ನ ಬಗ್ಗೆ ತೀರ್ಪು ನೀಡಲಾರದು. ಯಾರೂ...

VIDEO| ಮದುವೆ ಸಮಾರಂಭದಲ್ಲಿ ಡ್ಯಾನ್ಸ್​ ನಿಲ್ಲಿಸುತ್ತಿದ್ದಂತೆ ಯುವತಿ ಮೇಲೆ ಫೈರಿಂಗ್​:...

ಲಖನೌ: ಮದುವೆ ಸಂಭ್ರಮದಲ್ಲಿ ಡ್ಯಾನ್ಸ್​ ಮಾಡುವುದನ್ನು ನಿಲ್ಲಿಸುತ್ತಿದ್ದಂತೆ ನೃತ್ಯಗಾರ್ತಿಯ ಮುಖಕ್ಕೆ ಫೈರಿಂಗ್​ ಮಾಡಿರುವ ಘಟನೆ ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ಕಳೆದ ವಾರ ನಡೆದಿರುವುದಾಗಿ ವರದಿಯಾಗಿದೆ. ಘಟನೆಯಲ್ಲಿ ಗಾಯಗೊಂಡ ಯುವತಿಯನ್ನು ಕಾನ್ಪುರ ಆಸ್ಪತ್ರೆಗೆ...

VIDEO: ಎನ್​ಕೌಂಟರ್ ನಡೆಸಿದ ಪೊಲೀಸರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ...

ಹೈದರಾಬಾದ್​​: ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಎನ್​ಕೌಂಟರ್​​ನಲ್ಲಿ ಹತ್ಯೆಗೈದ ಪೊಲೀಸರನ್ನು ಹೈದರಾಬಾದ್​​ ಜನತೆ ಹೆಗಲ ಮೇಲೆ ಹೊತ್ತು ಜಯಘೊಷ ಕೂಗಿ ಸಂಭ್ರಮಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಆರೋಪಿಗಳ ಎನ್​ಕೌಂಟರ್​ ಸುದ್ಧಿ...

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...