More

    ಮಧುರೈನಲ್ಲಿ ನಡೆದ ಜಲ್ಲಿಕಟ್ಟು ಕ್ರೀಡೆಯಲ್ಲಿ 31 ಜನರಿಗೆ ಗಾಯ; 6 ಮಂದಿ ಆಸ್ಪತ್ರೆಗೆ ದಾಖಲು

    ಮಧುರೈ: ತಮಿಳುನಾಡಿನಲ್ಲಿ ಮಕರಸಂಕ್ರಮಣದ ಪ್ರಯುಕ್ತ ನಡೆದ ಜಲ್ಲಿಕಟ್ಟು ಕ್ರೀಡೆಯ ವೇಳೆ ಸುಮಾರು 31 ಮಂದಿ ಗಾಯಗೊಂಡಿದ್ದಾಗಿ ವರದಿಯಾಗಿದೆ.

    ಇದು ಗೂಳಿಗಳೊಟ್ಟಿಗೆ ಸೆಣೆಸುವ ಅಪಾಯಕಾರಿ ಆಟ. ಈ ಕ್ರೀಡೆಯನ್ನು ನಿಷೇಧಿಸುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದ್ದರೂ ತಮಿಳುನಾಡಿನಲ್ಲಿ ಸಂಪ್ರದಾಯದಂತೆ ಆಚರಣೆಯನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ.

    ಇಂದು ಮಧುರೈನ ಅವಾನಿಯಾಪುರಂನಲ್ಲಿ ನಡೆದ ಕ್ರೀಡೆಯಲ್ಲಿ 31 ಜನ ಗಾಯಗೊಂಡಿದ್ದು, ಅದರಲ್ಲಿ ಆರು ಮಂದಿಯನ್ನು ರಾಜಾಜಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಭಾರಿ ಜಲ್ಲುಕಟ್ಟು ಕ್ರೀಡೆಯಲ್ಲಿ 700 ಎತ್ತುಗಳು ಮತ್ತು 730 ಜನ ಎತ್ತು ಹಿಡಿಯುವವರು ಪಾಲ್ಗೊಳ್ಳುತ್ತಿದ್ದಾರೆ.

    ತಮಿಳುನಾಡಿನಲ್ಲಿ ಆಚರಿಸುವ ನಾಲ್ಕುದಿನಗಳ ಸುಗ್ಗಿ ಹಬ್ಬ ಪೊಂಗಲ್​ನ ಮೂರನೇ ದಿನ ಈ ಜಲ್ಲುಕಟ್ಟು ಕ್ರೀಡೆಯನ್ನು ಆಯೋಜಿಸಲಾಗುತ್ತದೆ. ಕ್ರೀಡೆಯಲ್ಲಿ ಪಾಲ್ಗೊಳ್ಳಲೆಂದೇ ಗೂಳಿಗಳನ್ನು ಸಿದ್ಧಪಡಿಸಲಾಗುತ್ತದೆ.

    ವಿವಿಧ ಹಳ್ಳಿಗಳಲ್ಲಿನ ದೇವಸ್ಥಾನದ ಗೂಳಿಗಳನ್ನು ಜಲ್ಲಿಕಟ್ಟು ನಡೆಯುವ ಸ್ಥಳಕ್ಕೆ ಕರೆದುಕೊಂಡು ಬಂದು ಆಟ ಆಡಲಾಗುತ್ತದೆ.

    ಗೂಳಿಗಳನ್ನು ಮೊದಲು ಆಟದ ಮೈದಾನಕ್ಕೆ ಬಿಡಲಾಗುತ್ತದೆ. ನೆರೆದಿರುವ ಜನರೆಲ್ಲ ಜೋರಾಗಿ ಕೇಕೇ ಹಾಕುತ್ತ, ಹರ್ಷೋದ್ಗಾರ ಮಾಡುತ್ತದೆ. ಆಗ ಗೂಳಿಯೂ ಓಡಲು ಶುರುಮಾಡುತ್ತದೆ. ಆಗ ಕೆಲವು ಯುವಕರು, ಬುಲ್​ ಕ್ಯಾಚರ್ಸ್​ ಬಂದು ಗೂಳಿಯ ಬೆನ್ನಿನ ಉಬ್ಬನ್ನು ಹಿಡಿದು ನಿಯಂತ್ರಿಸಲು ಪ್ರಯತ್ನಿಸುತ್ತಾರೆ. ಇದೊಂದು ಅಪಾಯಕಾರಿ ಆಟ. ಸ್ಪಲ್ಪ ಹೆಚ್ಚುಕಡಿಮೆಯಾದರೂ ಪ್ರಾಣವೇ ಹೋಗಬಹುದು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts