ಮೀನು ಹಿಡಿಯುವ ದೋಣಿಯಲ್ಲಿ 3,000 ಕೋಟಿ ರೂ. ಬೆಲೆಯ ಡ್ರಗ್ಸ್ ಪತ್ತೆ

blank

ನವದೆಹಲಿ : ಭಾರತೀಯ ನೌಕಾ ಪಡೆಯ ಅಧಿಕಾರಿಗಳು ಅರೇಬಿಯನ್ ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದಾಗ ಮೀನು ಹಿಡಿಯುವ ದೋಣಿಯೊಂದರಿಗಂದ ಸುಮಾರು 3,000 ಕೋಟಿ ರೂ. ಬೆಲೆಯ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಹೆಚ್ಚಿನ ತನಿಖೆಗಾಗಿ ದೋಣಿ ಮತ್ತು ಅದರ ಸಿಬ್ಬಂದಿಯನ್ನು ಕೊಚ್ಚಿಗೆ ಕರೆದೊಯ್ಯಲಾಗಿದೆ. ಈ ದೋಣಿಯು ಭಾರತಕ್ಕೆ ಸೇರಿದ್ದಲ್ಲ ಎಂದು ಮೂಲಗಳು ತಿಳಿಸಿವೆ.

ಪರಿವೀಕ್ಷಣೆಯಲ್ಲಿದ್ದಾಗ ಅರಬ್ಬಿ ಸಮುದ್ರದಲ್ಲಿ ಅನುಮಾನಾಸ್ಪದ ಚಲನವಲನವನ್ನು ಪ್ರದರ್ಶಿಸುತ್ತಿದ್ದ ದೋಣಿಯೊಂದನ್ನು ಐಎನ್​ಎಸ್​ ಸುವರ್ಣ ಪತ್ತೆ ಹಚ್ಚಿತು. ನೌಕಾ ಪಡೆಯ ಸಿಬ್ಬಂದಿ ಅದನ್ನು ಪರಿಶೀಲನೆ ಮಾಡಿದಾಗ 300 ಕೆಜಿಗೂ ಹೆಚ್ಚು ಡ್ರಗ್ಸ್​ ಸಿಕ್ಕಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಬೆಲೆ 3,000 ಕೋಟಿ ರೂಪಾಯಿ ಇದೆ ಎಂದು ನೌಕಾ ಪಡೆಯು ಹೇಳಿಕೆ ನೀಡಿದೆ.

“ಇದು ಪ್ರಮಾಣ ಮತ್ತು ಬೆಲೆಯ ದೃಷ್ಟಿಯಿಂದ ಮಾತ್ರವಲ್ಲದೆ ಮಕ್ರಾನ್ ಕರಾವಳಿಯಿಂದ ಹೊರಹೊಮ್ಮುವ ಮತ್ತು ಭಾರತೀಯ, ಮಾಲ್ಡೀವಿಯನ್ ಮತ್ತು ಶ್ರೀಲಂಕಾದತ್ತ ಸಾಗುವ ಅಕ್ರಮ ಮಾದಕವಸ್ತುಗಳ ಕಳ್ಳಸಾಗಣೆ ಮಾರ್ಗಗಳನ್ನು ಅಡ್ಡಿಪಡಿಸಿದ ದೃಷ್ಟಿಕೋನದಿಂದ ಕೂಡ ಒಂದು ಪ್ರಮುಖ ಕಾರ್ಯಾಚರಣೆಯಾಗಿದೆ” ಎಂದು ಅಧಿಕಾರಿಗಳು ಹೇಳಿದ್ದಾರೆ. (ಏಜೆನ್ಸೀಸ್)

50:50 ಲಸಿಕೆ ಹಂಚಿಕೆ; ಸರ್ಕಾರಿ ಕೇಂದ್ರಗಳಲ್ಲಿ ಯಥಾಸ್ಥಿತಿ, ಖಾಸಗಿ ಕೇಂದ್ರಗಳಲ್ಲಿ 18 ಮೇಲ್ಪಟ್ಟವರಿಗೆ ಲಸಿಕೆ ಲಭ್ಯ!

‘ದೆಹಲಿ ಪೊಲೀಸರು ಚಕ್ರವರ್ತಿಗಳಂತೆ ವರ್ತಿಸುತ್ತಿದ್ದಾರೆ’ ಎಂದ ದೀಪ್ ಸಿಧು ವಕೀಲ

Share This Article

ಪೂರ್ವಾಭಿಮುಖವಾಗಿ ಕುಳಿತು ಪೂಜೆ ಮಾಡುವುದೇಕೆ?; ಇಲ್ಲಿದೆ ಈ ಮಾತಿನ ಹಿಂದಿನ ಅಸಲಿ ಕಾರಣ | Health Tips

ಪೂಜೆ ಮಾಡುವಾಗ ಹೇಗೆ ನಿಯಮಗಳು ಮತ್ತು ನಿಬಂಧನೆಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಲಾಗುತ್ತದೆಯೋ ಅದೇ ರೀತಿಯಲ್ಲಿ ದಿಕ್ಕನ್ನು ಸಹ ಮನಸ್ಸಿನಲ್ಲಿಟ್ಟುಕೊಳ್ಳುವುದು…

ಊಟದ ಬಳಿಕ ಹೊಟ್ಟೆಯು ಬಲೂನ್‌ನಂತೆ ಊದಿಕೊಳ್ಳುತ್ತದೆಯೇ?; ಸಮಸ್ಯೆಗೆ ಇಲ್ಲಿದೆ ಪರಿಹಾರ | Health Tips

ಇತ್ತೀಚೆಗೆ ಜೀವನಶೈಲಿ ಮತ್ತು ಊಟದಿಂದಾಗಿ ಗ್ಯಾಸ್​​ ಸಮಸ್ಯೆಯು ತುಂಬಾ ಸಾಮಾನ್ಯವಾಗಿದೆ. ಇದು ಅನೇಕ ಕಾರಣಗಳಿಂದ ಉಂಟಾಗಬಹುದು.…

ಕೂದಲು ಉದುರುವ ಸಮಸ್ಯೆ ಪರಿಹಾರಕ್ಕೆ ರಾಮಬಾಣ ಹರಳೆಣ್ಣೆ ಹೇರ್​​ ವಾಶ್​​​; ನಿಮಗಾಗಿ ಹೆಲ್ತಿ ಮಾಹಿತಿ | Health Tips

ನಮ್ಮ ಕೂದಲನ್ನು ಸ್ವಚ್ಛವಾಗಿಡಲು ಮತ್ತು ಕೂದಲು ಉದುರುವುದನ್ನು ತಡೆಯಲು ಏನೆನೋ ಮಾಡುತ್ತೇವೆ. ನಮ್ಮ ಕೂದಲಿನ ಬೆಳವಣಿಗೆಯ…