More

    ಕೇಜ್ರಿವಾಲ್ 10 ಗ್ಯಾರಂಟಿ ಕಾರ್ಡ್ ಬಿಡುಗಡೆ: ದೆಹಲಿ ಚುನಾವಣೆಗೆ ಆಪ್ ಭರಪೂರ ಭರವಸೆ, ಇಂದು ಕೇಜ್ರಿವಾಲ್ ನಾಮಪತ್ರ

    ನವದೆಹಲಿ: ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ, ಮಹಿಳೆಯರ ಸುರಕ್ಷತೆಗೆ ಮೊಹಲ್ಲಾ ಮಾರ್ಷಲ್, ದಿನವಿಡೀ ಕುಡಿಯುವ ನೀರಿನ ಪೂರೈಕೆ, 200 ಯೂನಿಟ್ ಉಚಿತ್ ವಿದ್ಯುತ್, ಶೇ. 300 ವಾಯು ಮಾಲಿನ್ಯ ತಗ್ಗಿಸುವಿಕೆ ಇನ್ನಿತರ ಭರವಸೆಗಳನ್ನು ಒಳಗೊಂಡ ‘ಕೇಜ್ರಿವಾಲ್ 10 ಗ್ಯಾರಂಟಿ ಕಾರ್ಡ್’ಅನ್ನು ಆಮ್ ಆದ್ಮಿ ಪಕ್ಷ (ಆಪ್) ಭಾನುವಾರ ಬಿಡುಗಡೆ ಮಾಡಿದೆ.

    ಫೆಬ್ರವರಿ 8ರಂದು ನಡೆಯುವ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಪ್ ಮರುಆಯ್ಕೆ ಮಾಡಿದರೆ ಜನತೆಗೆ ಹಲವು ಅನುಕೂಲಗಳನ್ನು ಮಾಡಿಕೊಡುವುದಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭರವಸೆ ನೀಡಿದ್ದಾರೆ.

    ‘ಕೇಜ್ರಿವಾಲ್​ರ 10 ಗ್ಯಾರಂಟಿಗಳು’ ಶೀರ್ಷಿಕೆಯ ಕಾರ್ಡ್ ಬಿಡುಗಡೆ ಮಾಡಿದ ಕೇಜ್ರಿವಾಲ್, ಉಚಿತ ಆರೋಗ್ಯ ಸೌಲಭ್ಯಗಳನ್ನು ಮುಂದುವರಿಸುವ ಹಾಗೂ ಮುಂದಿನ ಐದು ವರ್ಷಗಳಲ್ಲಿ ರಾಜಧಾನಿಯಲ್ಲಿ ಎರಡು ಕೋಟಿ ಸಸಿ ನೆಡುವ ಬಗ್ಗೆಯೂ ಆಶ್ವಾಸನೆ ನೀಡಿದ್ದಾರೆ. ಸಾರ್ವತ್ರಿಕ ಸಾರಿಗೆಗೆ 11 ಸಾವಿರ ಹೆಚ್ಚುವರಿ ಬಸ್, ಮೆಟ್ರೊ ಮಾರ್ಗ ವಿಸ್ತರಣೆ, ಪ್ರತಿ ಮಗುವಿಗೂ ವಿಶ್ವ ದರ್ಜೆ ಉಚಿತ ಶಿಕ್ಷಣ ನೀಡಿಕೆ, ಕೊಳೆಗೇರಿಗಳ ಎಲ್ಲ ನಿವಾಸಿಗಳಿಗೆ ವಸತಿ, ಸ್ಚಚ್ಛ ಯಮುನಾ ತಮ್ಮ ಪಕ್ಷದ ಗುರಿ ಎಂದು ಹೇಳಿದ್ದಾರೆ.

    ‘ಇದು ನಮ್ಮ ಚುನಾವಣೆ ಪ್ರಣಾಳಿಕೆಯಲ್ಲ. ಅದಕ್ಕಿಂತಲೂ ಎರಡು ಹೆಜ್ಜೆ ಮುಂದಿನದು. ದೆಹಲಿಯ ಜನರನ್ನು ಬಾಧಿಸುವ ಅನೇಕ ವಿಚಾರಗಳಿವೆ. ಪ್ರಣಾಳಿಕೆಯಲ್ಲಿ ಎಲ್ಲ ವಿವರಗಳಿರುತ್ತವೆ’.

    | ಅರವಿಂದ್ ಕೇಜ್ರಿವಾಲ್ ದೆಹಲಿ ಮುಖ್ಯಮಂತ್ರಿ

    ಶೀಘ್ರದಲ್ಲೇ ಪ್ರಣಾಳಿಕೆ

    ಇದು ಗ್ಯಾರಂಟಿ ಕಾರ್ಡ್ ಅಷ್ಟೆ. ಚುನಾವಣಾ ಪ್ರಣಾಳಿಕೆಯಲ್ಲ. ವಾರದೊಪ್ಪೊತ್ತಿನೊಳಗೆ ಆಪ್​ನ ಸಮಗ್ರ ಪ್ರಣಾಳಿಕೆ ಬಿಡುಗಡೆ ಮಾಡುವುದಾಗಿ ಕೇಜ್ರಿವಾಲ್ ತಿಳಿಸಿದ್ದಾರೆ. ವಿದ್ಯಾರ್ಥಿಗಳು, ಶಿಕ್ಷಕರು ಮತ್ತಿತರ ವಿಭಾಗಗಳಿಗೆ ನಿರ್ದಿಷ್ಟವಾದ ಕಾರ್ಯಕ್ರಮಗಳು ಪ್ರಣಾಳಿಕೆಯಲ್ಲಿ ಇರುತ್ತವೆ ಎಂದಿದ್ದಾರೆ.

    ಕ್ಲೀನ್ ಸ್ವೀಪ್ ಗುರಿ

    2015ರ ಅಸೆಂಬ್ಲಿ ಚುನಾವಣೆಯಲ್ಲಿ 70 ಸ್ಥಾನಗಳ ಪೈಕಿ 67ರಲ್ಲಿ ಗೆದ್ದು ಇತರೆಲ್ಲ ಪಕ್ಷಗಳನ್ನೂ ಧೂಳೀಪಟ ಮಾಡಿದ್ದ ಆಪ್​ಗೆ ಈ ಬಾರಿ ಎಲ್ಲ 70 ಸ್ಥಾನಗಳಲ್ಲಿ ಗೆಲ್ಲುವ ಗುರಿಯಿದೆ. 70 ಕ್ಷೇತ್ರಗಳಿಗೂ ಟಿಕೆಟ್ ಹಂಚಿಕೆ ಮಾಡಿದ್ದು, 46 ಹಾಲಿ ಶಾಸಕರು, ಉಳಿದ 24 ಹೊಸ ಮುಖಗಳಿಗೆ ಆಪ್ ಮಣೆಹಾಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts