30 ಕೋಟಿ ರೂ. ವೆಚ್ಚದ ಡುಪ್ಲೆಕ್ಸ್ ಮನೆ ಖರೀದಿಸಿದ ಪೃಥ್ವಿರಾಜ್

ಮಾಲಿವುಡ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಯಶಸ್ಸಿನ ಅಲೆಯಲ್ಲಿದ್ದಾರೆ. ಅವರ ನಟನೆಯ ‘ಸಲಾರ್-1 ಸೀಜ್‌ೈರ್’, ‘ದ ಗೋಟ್ ಲೈಫ್​- ಆಡುಜೀವಿತಂ’, ‘ಗುರುವಾಯೂರು ಅಂಬನದಾಯಿಲ್’ ಮೂರು ಸಿನಿಮಾಗಳು ದೊಡ್ಡ ಮಟ್ಟದ ಯಶಸ್ಸು ಗಳಿಸಿದ್ದು, ಪೃಥ್ವಿರಾಜ್ ಕರಿಯರ್‌ಅನ್ನು ಮತ್ತಷ್ಟು ಗಟ್ಟಿಗೊಳಿಸಿವೆ. ಇದೇ ಖುಷಿಯಲ್ಲಿರುವ ಪೃಥ್ವಿರಾಜ್, ಮುಂಬೈನ ಬಾಂದ್ರಾದಲ್ಲಿ 30.6 ಕೋಟಿ ರೂಪಾಯಿ ವೆಚ್ಚದ ಐಷಾರಾಮಿ ಡುಪ್ಲೆಕ್ಸ್ ಮನೆ ಖರೀದಿಸಿದ್ದಾರೆ. ಬಾಂದ್ರಾದ ಪಾಲಿಹಿಲ್‌ನಲ್ಲಿರುವ ಈ ಅಪಾರ್ಟ್‌ಮೆಂಟ್ ಒಟ್ಟು 2,970 ಚದರಡಿ ವಿಸ್ತೀರ್ಣ ಹೊಂದಿದೆ. ಈ ಹೊಸ ಮನೆಗಾಗಿ ಪೃಥ್ವಿರಾಜ್ 1.84 ಕೋಟಿ ರೂಪಾಯಿ ಮುದ್ರಾಂಕ ಶುಲ್ಕ ಹಾಗೂ 30 ಸಾವಿರ ರೂ. ನೋಂದಣಿ ಶುಲ್ಕ ನೀಡಿ ಸೆ.12ರಂದು ನೋಂದಣಿ ಮಾಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಅಂದಹಾಗೆ ನಟ ಪೃಥ್ವಿರಾಜ್ ಸುಕುಮಾರನ್ ಮುಂಬೈನಲ್ಲಿ ಖರೀದಿಸುತ್ತಿರುವ ಎರಡನೇ ಮನೆ ಇದು. ಈ ಹಿಂದೆ ಇದೇ ವ್ಯಾಪ್ತಿಯಲ್ಲಿ ಅಂದಾಜು 17 ಕೋಟಿ ರೂ. ಮೌಲ್ಯದ ಐಷಾರಾಮಿ ್ಲ್ಯಾಟ್ ಖರೀದಿಸಿದ್ದರು. ಇದೀಗ ಬಾಂದ್ರಾದಲ್ಲಿ ಹೊಸ ಮನೆ ಖರೀದಿಸಿರುವ ಪೃಥ್ವಿರಾಜ್, ರಣವೀರ್ ಸಿಂಗ್, ತೃಪ್ತಿ ದಿಮ್ರಿ, ಅಥಿಯಾ ಶೆಟ್ಟಿ ಸೇರಿ ಹಲವು ಬಾಲಿವುಡ್ ತಾರೆಯರ ನೆರೆಹೊರೆಯವರಾಗಿದ್ದಾರೆ. ಸದ್ಯ ಅವರು ಮಲಯಾಳಂನ ‘ವಿಲಾಯತ್ ಬುದ್ಧ’, ‘ಎಲ್ 2 ಎಂಪುರಾನ್’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. –ಏಜೆನ್ಸೀಸ್

Share This Article

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…

ಹಾವು ಕಚ್ಚಿದಾಗ ಮಾಡುವ ಈ ಒಂದು ತಪ್ಪಿನಿಂದ ಪ್ರಾಣ ಹೋಗುತ್ತೆ ಎಚ್ಚರ! ಈ ರೀತಿ ಮಾಡೋದನ್ನು ತಪ್ಪಿಸಿ | Snakes

ಕೊಲ್ಲಂ: ಹಾವುಗಳು ( Snakes ) ಕಚ್ಚಿದ ಸಂದರ್ಭದಲ್ಲಿ ಯಾವ ಹಾವು ಕಚ್ಚಿತ್ತು ಎಂಬುದನ್ನು ತಿಳಿದುಕೊಳ್ಳಲು…