30 ಮಂದಿಗೆ ಜಾನಪದ ಅಕಾಡೆಮಿ ಪ್ರಶಸ್ತಿ

ಬೀದರ್: ಕರ್ನಾಟಕ ಜಾನಪದ ಅಕಾಡೆಮಿಯ 2018ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ರಾಜ್ಯದ 30 ಹಿರಿಯ ಜಾನಪದ ಕಲಾವಿದರು ಹಾಗೂ ಇಬ್ಬರು ಜಾನಪದ ತಜ್ಞರನ್ನು ಆಯ್ಕೆ ಮಾಡಲಾಗಿದ್ದು, ಡಿ. 27ರಂದು ಬೀದರ್​ನ ರಂಗಮಂದಿರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಜಾನಪದ ಅಕಾಡೆಮಿ ಅಧ್ಯಕ್ಷ ಬಿ. ಟಾಕಪ್ಪ ಕಣ್ಣೂರು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಗೌರವ ಪ್ರಶಸ್ತಿ 25 ಸಾವಿರ ರೂ. ನಗದು, ತಜ್ಞ ಪ್ರಶಸ್ತಿ 50 ಸಾವಿರ ರೂ. ನಗದು, ಸ್ಮರಣಿಕೆ ಒಳಗೊಂಡಿದೆ. 26ರ ಬೆಳಗ್ಗೆ ಜಾನಪದ ಕುರಿತು ವಿಚಾರಸಂಕಿರಣ, 27ರ ಬೆಳಗ್ಗೆ ಮೆರವಣಿಗೆ, ಸಂಜೆ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಹೇಳಿದರು.

ಪ್ರಶಸ್ತಿ ಪುರಸ್ಕೃತರ ವಿವರ: ಸಂಪ್ರದಾಯ ಪದ ಕಲಾಪ್ರಕಾರ- ಯಲ್ಲಮ್ಮ, ಬೆಂಗಳೂರು ನಗರ; ಸೋಬಾನೆ ಪದ- ಮುನಿನರಸಮ್ಮ, ಬೆಂಗಳೂರು ಗ್ರಾ.; ತಮಟೆ ವಾದನ- ಮುನಿ ಚೂಡಯ್ಯ, ರಾಮನಗರ; ಸೂಲಗಿತ್ತಿ- ಬ್ಯಾಟಮ್ಮ, ಕೋಲಾರ; ಚೆಕ್ಕೆ ಭಜನೆ- ನರಸಿಂಹಯ್ಯ, ಚಿಕ್ಕಬಳ್ಳಾಪುರ; ಜುಂಜಪ್ಪನ ಕಾವ್ಯ- ಲಕ್ಷ್ಮಮ್ಮ, ತುಮಕೂರು; ನಾಟಿ ವೈದ್ಯ- ಪುಟ್ಟ ಮಲ್ಲಪ್ಪ ಮಾಳನಾಯಕರ, ದಾವಣಗೆರೆ; ಭಜನೆ ಪದ- ಎಸ್. ರೇವಣಸಿದ್ದಪ್ಪ, ಚಿತ್ರದುರ್ಗ; ಡೊಳ್ಳು ಕುಣಿತ- ಕರಡಿ ಲಕ್ಷ್ಮಣಪ್ಪ, ಶಿವಮೊಗ್ಗ; ಲಂಬಾಣಿ ಹಾಡು ಕುಣಿತ- ಚಂದ್ರಬಾಯಿ ಗುಂಡಾನಾಯಕ, ಹಾಸನ; ಮಂಟೇಸ್ವಾಮಿ ಕಾವ್ಯ- ಮರಿಸಿದ್ದಮ್ಮ, ಚಾಮರಾಜನಗರ; ವೀರಗಾಸೆ ನೃತ್ಯ- ಜಿ.ವಿ. ಕೊಟ್ರೇಶಪ್ಪ, ಚಿಕ್ಕಮಗಳೂರು; ನಗಾರಿ ವಾದನ- ನಾಗರಾಜು, ಮೈಸೂರು; ಕೋಲಾಟ- ಸಿದ್ದಯ್ಯ, ಮಂಡ್ಯ; ಭೂತಾರಾಧನೆ- ಯಮುನಾ, ದಕ್ಷಿಣ ಕನ್ನಡ; ಪಾಡ್ದನ- ಅಮ್ಮಣ್ಣಿ, ಉಡುಪಿ; ದುಡಿಪಾಟ್- ಜಾನಕಿ ತಮ್ಮಯ್ಯ, ಕೊಡಗು; ಸಂಪ್ರದಾಯ ಪದ- ಮಹಾದೇವಿ, ಕಲಬುರಗಿ; ರಿವಾಯತ್ ಪದ- ದಾವಲಸಾಬ್ ಆತ್ತಾರ್, ಕೊಪ್ಪಳ; ಜಾನಪದ ಗೀತೆ- ಶರಣಪ್ಪ ಗೋನಾಳ, ರಾಯಚೂರು; ತತ್ವಪದ ಗಾಯನ- ತುಳಸಮ್ಮ, ಬೀದರ್; ಸೋಬಾನೆ ಪದ- ಸೋವೇನಹಳ್ಳಿ ಬಸಣ್ಣ, ಬಳ್ಳಾರಿ; ದುಂದುಮೆ ಹಾಡು- ಬಿ.ಲಕ್ಷ್ಮಣ ಗುತ್ತೇದಾರ್, ಯಾದಗಿರಿ; ಶಹನಾಯಿ ವಾದನ- ಭರಮಪ್ಪ ರಾಮಪ್ಪ ಭಜಂತ್ರಿ, ಬೆಳಗಾವಿ; ಜಾನಪದ ಗಾಯನ- ಲಕ್ಷ್ಮೀಬಾಯಿ ಕಾಳೆ, ಧಾರವಾಡ; ಸಂಬಾಳ ವಾದನ- ಚಿನ್ನಪ್ಪ ಗಿರಿಮಲ್ಲಪ್ಪ ಪೂಜಾರಿ, ವಿಜಯಪುರ; ಕರಡಿ ಸಾಂಬಾಳ- ಮಲ್ಲಪ್ಪ ಬಾಳಪ್ಪ ಹೂಗಾರ, ಬಾಗಲಕೋಟೆ; ಹಾಲಕ್ಕಿ ಸುಗ್ಗಿಕುಣಿತ- ಖೇಮು ತುಳಸುಗೌಡ, ಉತ್ತರಕನ್ನಡ; ಡೊಳ್ಳಿನ ಪದ- ಬಡವಪ್ಪ ಮಹಾದೇವಪ್ಪ ಆನವಟ್ಟಿ, ಹಾವೇರಿ; ಮದುವೆ ಹಾಡುಗಳು- ಬಸವ್ವ, ಗದಗ.

ತಜ್ಞರ ಪ್ರಶಸ್ತಿ

ಡಾ.ಜೀ.ಶಂ.ಪ. ತಜ್ಞ ಪ್ರಶಸ್ತಿಗೆ ದಾವಣಗೆರೆ ಜಿಲ್ಲೆಯ ಡಾ.ಮಲ್ಲಿಕಾರ್ಜುನ ಕಲಮರಳಿ ಹಾಗೂ ಡಾ.ಬಿ.ಎಸ್. ಗದ್ದಗೀಮಠ ತಜ್ಞ ಪ್ರಶಸ್ತಿಗೆ ಉಡುಪಿ ಜಿಲ್ಲೆಯ ಪಾಲ್ತಾಡಿ ರಾಮಕೃಷ್ಣ ಆಚಾರ್ ಆಯ್ಕೆಯಾಗಿದ್ದಾರೆ.

ಪ್ರಶಸ್ತಿಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಆದ್ಯತೆ ನೀಡಲಾಗಿದ್ದು, ಉತ್ತಮ ಕಲಾವಿದರನ್ನು, ಕಲೆಗಾಗಿ ಬದುಕು ಮುಡುಪಾಗಿಟ್ಟವರನ್ನು ಆಯ್ಕೆ ಮಾಡಲಾಗಿದೆ.

| ಬಿ.ಟಾಕಪ್ಪ ಕಣ್ಣೂರು, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ

Leave a Reply

Your email address will not be published. Required fields are marked *