More

  ದಾಖಲೆಗಳಿಲ್ಲದ 30.50 ಲಕ್ಷ ರೂ. ಪತ್ತೆ

  ಕಾಸರಗೋಡು: ನಗರ ಠಾಣೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಮತ್ತೆ ಅನಧಿಕೃತ ಸಾಗಾಟದ ಹಣ ಪತ್ತೆಹಚ್ಚಲಾಗಿದೆ. ವಿದ್ಯಾನಗರ ಸನಿಹದ ನೆಲ್ಕಳದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ದಾಖಲೆಗಳಿಲ್ಲದ 30.50 ಲಕ್ಷ ರೂ. ಕಾಳಧನ ವಶಪಡಿಸಿಕೊಂಡು ಚೆಮ್ನಾಡ್ ನಿವಾಸಿ ಹಬೀಬ್ ಎಂಬಾತನನ್ನು ಬಂಧಿಸಿದ್ದಾರೆ.

  ಡಿವೈಎಸ್‌ಪಿ ಸುಧಾಕರನ್ ನೇತೃತ್ವದ ನಗರ ಠಾಣೆ ಇನ್‌ಸ್ಪೆಕ್ಟರ್ ಅಜಿತ್‌ಕುಮಾರ್ ನೇತೃತ್ವದ ಪೊಲೀಸರ ತಂಡ ನೆಲ್ಕಳದಲ್ಲಿ ಸ್ಕೂಟರ್ ತಡೆದು ತಪಾಸಣೆ ನಡೆಸಿದಾಗ ಹಣ ಪತ್ತೆಯಾಗಿದೆ. ಕಳೆದ 15 ದಿನದೊಳಗೆ ಕಾಳಧನ ಪತ್ತೆಹಚ್ಚಿದ ಮೂರನೇ ಪ್ರಕರಣ ಇದಾಗಿದೆ. ಮೇ 17ರಂದು ಚಂದ್ರಗಿರಿ ರಸ್ತೆಯಲ್ಲಿ ಬೈಕಲ್ಲಿ ಸಾಗಿಸುತ್ತಿದ್ದ 30 ಲಕ್ಷ ರೂ. ಪತ್ತೆ ಹಚ್ಚಿ, ಚೇರೂರು ನಿವಾಸಿ ಎಂ.ಕೆ ಅಬ್ದುಲ್ ಖಾದರ್ ಹಾಗೂ ಮಹಸೂಪ್ ಎಂಬವರನ್ನು ಬಂಧಿಸಲಾಗಿತ್ತು. ಅದೇ ದಿನ ಕೋಟೆಕಣಿ ರಸ್ತೆಯಲ್ಲಿ ಬೈಕ್‌ನಲ್ಲಿ ಸಾಗಿಸುತ್ತಿದ್ದ 18.80 ಲಕ್ಷ ರೂ. ಪತ್ತೆ ಹಚ್ಚಿ ನಾಯಮರ್‌ಮೂಲೆ ನಿವಾಸಿ ಎಂ.ಕೆ ರಹಮಾನ್ ಎಂಬಾತನನ್ನು ಬಂಧಿಸಲಾಗಿತ್ತು.

  See also  ಸೋತ ಅಭ್ಯರ್ಥಿಯ ಹೆಸರಲ್ಲಿ ಅನುದಾನ ಬಿಡುಗಡೆ ಮಾಡಬಾರದು ಎಂದ ಮಾಜಿ ಸಿಎಂ ಸಿದ್ದರಾಮಯ್ಯ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts