30ಕ್ಕೆ ಸ್ವಯಂವರ ಪಾರ್ವತಿ ಯಾಗ: ವಿವಾಹಕ್ಕೆ ತೊಡಕಾಗಿರುವ ದೋಷ ನಿವಾರಣೆ ಸಂಕಲ್ಪ

ಕೋಲಾರ: ಈ ಬಾರಿ ಸ್ವಯಂವರ ಪಾರ್ವತಿ ಯಾಗವನ್ನು ಕೆಜಿಎಫ್ ತಾಲೂಕಿನ ಕಮ್ಮಸಂದ್ರದ ಕೋಟಿಲಿಂಗ ಕ್ಷೇತ್ರದಲ್ಲಿ ಮೇ 30 ರಂದು ಆಯೋಜಿಸಿದ್ದು, ವ್ಯಾಪಕ ಸ್ಪಂದನೆ ವ್ಯಕ್ತವಾಗುತ್ತಿದೆ.

ವಿಜಯವಾಣಿ, ದಿಗ್ವಿಜಯ 247 ನ್ಯೂಸ್ ಮತ್ತು ಕನ್ನಡ ಮ್ಯಾಟ್ರಿಮೋನಿ ಯಿಂದ ಹಮ್ಮಿ ಕೊಂಡಿರುವ ಯಾಗವು ಬೆಳಗ್ಗೆ 9 ಗಂಟೆಗೆ ಆರಂಭವಾಗಲಿದೆ. ಪಾರ್ವತಿ ಮತ್ತು ಪರಮೇಶ್ವರ ಕಳಶ ಸ್ಥಾಪನೆ ಮಾಡಿ, ಭಾವೀ ವಧು ಮತ್ತು ವರರಿಗೆ ಸ್ವಯಂವರ ಮಂತ್ರ ಪಠಣ ಮಾಡಿಸಲಾಗುತ್ತದೆ. ನಂತರ ಅದೇ ಮಂತ್ರ ಉಚ್ಚರಿಸುತ್ತ ಹೋಮ ಮಾಡಿಸಲಾಗುತ್ತದೆ. ವಿವಾಹಕ್ಕೆ ತೊಡಕಾಗಿರುವವರ ದೋಷಗಳೆಲ್ಲ ಅಗ್ನಿಯಲ್ಲಿ ದಹಿಸಿ, ನಿವಾರಣೆಯಾಗಲಿ ಎಂಬುದೇ ಇದರ ಉದ್ದೇಶ. ಬೆಳಗ್ಗೆ 11.30ಕ್ಕೆ ಪೂರ್ಣಾಹುತಿ, ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಲಿದೆ.

ಪಾಲ್ಗೊಳ್ಳಲು ಸಂರ್ಪಸಿ

ಭಾವಿ ವಧು- ವರರು ಹೆಚ್ಚಿನ ವಿವರಕ್ಕೆ ಮೊ: 70928 77888 ಸಂಪರ್ಕಿಸಬಹುದು. ಯಾಗದಲ್ಲಿ ಪಾಲ್ಗೊಳ್ಳುವವರು ಭಾವಚಿತ್ರ ಹಾಗೂ ಜಾತಕವನ್ನು ತರುವಂತೆ ಕೋರಲಾಗಿದೆ.

Leave a Reply

Your email address will not be published. Required fields are marked *