ಸೀತಕ್ಕ ಎಂದೇ ಪ್ರಸಿದ್ಧಿಯಾದ ಶಾಸಕಿಯ ಬೆಂಗಾವಲು ವಾಹನ ಡಿಕ್ಕಿಯಾಗಿ 3 ವರ್ಷದ ಮಗು ಸಾವು!

ಹೈದರಾಬಾದ್‌: ಸೀತಕ್ಕ ಎಂದೇ ಪ್ರಸಿದ್ಧಿಯಾದ ಮುಲುಗು ಕ್ಷೇತ್ರದ ಶಾಸಕಿ ಧನಸರಿ ಅನಸೂಯ ಅವರ ಬೆಂಗಾವಲು ಪಡೆ ವಾಹನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ 3 ವರ್ಷದ ಮಗು ಮೃತಪಟ್ಟಿದೆ.

ತೆಲಂಗಾಣದ ಏತುರುನಗರಂ ಮಂಡಲ್ ಪ್ರದೇಶದ ಜೇಡಿವಗಿ ಕೋಯಾದಲ್ಲಿ ಅಪಘಾತ ನಡೆದಿದ್ದು, ಪಕಾವಪುರ ಸಮೀಪದ ಗೋತಿ ಗುಡೇಮ್‌ನ ಶ್ರಾವಂತಿ ಎಂದು ಬಾಲಕಿಯನ್ನು ಗುರುತಿಸಲಾಗಿದೆ.

ತಾಯಿ ವಿಜಯಾ ಮತ್ತು ಅಂಕಲ್‌ ಕೆ ಅರುಣ್‌ ಅವರ ಜತೆ ಬೈಕ್‌ನಲ್ಲಿ ಶ್ರಾವಂತಿ ಪ್ರಯಾಣಿಸುತ್ತಿದ್ದಳು. ಪಕವಾಪುರದ ಅಂಗನವಾಡಿ ಕೇಂದ್ರಕ್ಕೆ ಶ್ರಾವಂತಿಯನ್ನು ಬಿಟ್ಟು ಬರಲೆಂದು ತೆರಳಿದ್ದಾಗ ದ್ವಿಚಕ್ರವಾಹನಕ್ಕೆ ಶಾಸಕಿಯ ಬೆಂಗಾವಲು ಪಡೆ ವಾಹನ ಡಿಕ್ಕಿ ಹೊಡೆದಿದೆ. ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ಶ್ರಾವಂತಿ ಕೆಲವೇ ಕ್ಷಣದಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ತಾಯಿ ಮತ್ತು ಅಂಕಲ್‌ಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತದ ವೇಳೆ ಶಾಸಕಿ ಮಲ್ಲೂರಿಗೆ ಹೋಗುತ್ತಿದ್ದರು. ಸ್ಥಳೀಯ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. (ಏಜೆನ್ಸೀಸ್)

Leave a Reply

Your email address will not be published. Required fields are marked *