ಸುಮಲತಾ ಅಂಬರೀಷ್​ಗೆ ಮತ ಗಳಿಕೆಗೆ ಅಡ್ಡಗಾಲು: ಮಂಡ್ಯದಲ್ಲಿ ಸುಮಲತಾ ಹೆಸರಿನ ಮೂವರು ಕಣಕ್ಕೆ

ಮಂಡ್ಯ: ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸುಮಲತಾ ಅಂಬರೀಷ್​ ಅವರ ವಿರುದ್ಧ ಸುಮಲತಾ ಎಂಬ ಹೆಸರಿನ ಮೂವರು ಮಹಿಳೆಯರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.

ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದ ಮಂಗಳವಾರ ಕನಕಪುರದ ರಂಗನಾಥ ಬಡಾವಣೆಯ ದರ್ಶನ್ ಎಂಬವರು ಪತ್ನಿ ಟಿ.ಸುಮಲತಾ (ಹಾಲಿ ಬೆಂಗಳೂರು ಸಾಧನ ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕಿ), ಕೆ.ಆರ್.ಪೇಟೆ ತಾಲೂಕಿನ ಸಂತೆಬಾಚಹಳ್ಳಿ ಬಳಿಯ ಗೊರವಿ ಗ್ರಾಮದ ಮಂಜೇಗೌಡರ ಪತ್ನಿ ಸುಮಲತಾ, ಶ್ರೀರಂಗಪಟ್ಟಣ ತಾಲೂಕಿನ ಟಿ.ಎಂ.ಹೊಸೂರು ಗ್ರಾಮದ ಸಿದ್ದೇಗೌಡರ ಪತ್ನಿ ಸುಮಲತಾ ನಾಮಪತ್ರ ಸಲ್ಲಿಸಿದ್ದಾರೆ.

ಮತದಾರರಲ್ಲಿ ಗೊಂದಲ ಸೃಷ್ಟಿ ಮಾಡಿ, ಸುಮಲತಾ ಅಂಬರೀಷ್​ ಅವರಿಗೆ ಚಲಾವಣೆಯಾಗುವ ಮತಗಳನ್ನು ಚೆದುರಿಸಲು ಈ ವಿಧದಲ್ಲಿ ತಂತ್ರ ಹೆಣೆಯಲಾಗಿದೆ. ಇದರಿಂದ ಸುಮಲತಾ ಅಂಬರೀಷ್​ ಅವರಿಗೆ ಹೊಸ ತಲೆ ನೋವು ಸೃಷ್ಟಿಯಾಗಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

4 Replies to “ಸುಮಲತಾ ಅಂಬರೀಷ್​ಗೆ ಮತ ಗಳಿಕೆಗೆ ಅಡ್ಡಗಾಲು: ಮಂಡ್ಯದಲ್ಲಿ ಸುಮಲತಾ ಹೆಸರಿನ ಮೂವರು ಕಣಕ್ಕೆ”

  1. first of all are educated those who are trying to confuse the voters na they are big fools people vote by seeing name+symbol ok

  2. ಇದು ಎಂಥಾ ಲೋಕವಯ್ಯಾ ?! ದೊಡ್ಡೋರು ಹೇಳೋ ಹಾಗೆ ಯುದ್ಧದಲ್ಲಿ ಮತ್ತು ಪ್ರೇಮದಲ್ಲಿ ಎಲ್ಲವೂ ಸರಿಯಿರಬಹುದು, ಕಾದು ನೋಡೋಣ. – ಗುಂಜಮಂಜ (Gunjmanja)

  3. Observed that People are in race, not for truth or ethics or jenunity. Friends please vote person after thinking for longer plan because shorter plan for shorter life.

  4. ಕಳಪೆ ರಾಜಕಾರಣ. ಆದರೆ ಈಗ ಭಾವ ಚಿತ್ರ ಸಹಾ ಡಿಸ್ಪ್ಲೆ ಮಾಡುತ್ತಾರೆ, ಹಾಗಾಗಿ ಮೋಸ ಮಾಡೋದು ಕಷ್ಠ.

Comments are closed.