ಸೆಲ್ಫಿ ಎಡವಟ್ಟು: ಒಂದು ರೈಲಿನಿಂದ ತಪ್ಪಿಸಿಕೊಳ್ಳಲು ಹೋಗಿ ಮತ್ತೊಂದು ರೈಲು ಡಿಕ್ಕಿಯಾಗಿ ಮೂವರು ಸಾವು

ನವದೆಹಲಿ: ರೈಲ್ವೆ ಟ್ರಾಕ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿದ್ದ ಮೂವರು ಹದಿಹರೆಯದವರು ಸಾವಿಗೀಡಾಗಿರುವ ಘಟನೆ ಹರಿಯಾಣದ ಪಾಣಿಪತ್‌ನಲ್ಲಿ ನಡೆದಿದೆ.

ಮತ್ತೊಬ್ಬ ಘಟನೆಗೂ ಮುನ್ನ ಮತ್ತೊಂದು ಕಡೆಗೆ ಜಂಪ್‌ ಮಾಡುವ ಮೂಲಕ ಅಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಸಂತ್ರಸ್ತರು ಸೆಲ್ಫಿ ತೆಗೆದುಕೊಳ್ಳುವಲ್ಲಿ ಬಿಜಿಯಾಗಿದ್ದರು. ಈ ವೇಳೆ ರೈಲು ಬರುವುದನ್ನು ಗಮನಿಸಿ ಪಕ್ಕದ ಹಳಿಗೆ ಎಗರಿದ್ದಾರೆ. ಆದರೆ ಆ ಹಳಿಯಲ್ಲಿ ಬರುತ್ತಿದ್ದ ರೈಲನ್ನು ಗಮನಿಸದೆ ಎಗರಿದ್ದರಿಂದಾಗಿ ರೈಲು ಡಿಕ್ಕಿಯಾಗಿ ಮೃತಪಟ್ಟಿದ್ದಾರೆ. ಮತ್ತೋರ್ವ ಇನ್ನೊಂದು ಕಡೆಗೆ ಜಿಗಿದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಎಎಫ್‌ಪಿ ಎಂ ಎಸ್‌ ದಾಬಸ್‌ ತಿಳಿಸಿದ್ದಾರೆ.

ಪಾಣಿಪತ್‌ಗೆ ಮದುವೆಗೆಂದು ಬಂದಿದ್ದ ತಂಡದಲ್ಲಿ ಸಾವಿಗೀಡಾದ ಇಬ್ಬರು 19 ವರ್ಷದವರಾದರೆ ಮತ್ತೋರ್ವ 18 ವರ್ಷದವನಾಗಿದ್ದ.

ಯುವಜನರನ್ನು ತಜ್ಞರು ಎಚ್ಚರಿಸುತ್ತಲೇ ಇದ್ದರೂ ಕೂಡ ಸಾಮಾಜಿಕ ಜಾಲತಾಣದ ಗೀಳಿಗೆ ಬೀಳುವ ಯುವಕರು ಧೈರ್ಯಶಾಲಿ ಮತ್ತು ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿ ಕ್ಲಿಕ್ಕಿಸಿದ್ದೇವೆ ಎಂದು ಬಿಂಬಿಸಲು ಪೋಸ್ಟ್‌ ಮಾಡುತ್ತಿರುತ್ತಾರೆ.

ಆಲ್‌ ಇಂಡಿಯಾ ಇನ್ಸ್‌ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸಸ್‌ ಕೈಗೊಂಡ ಸಂಶೋಧನೆಯಲ್ಲಿ ಇಡೀ ವಿಶ್ವಾದ್ಯಂತ 2011 ಮತ್ತು 2017ರ ಅವಧಿಯಲ್ಲಿ ಸುಮಾರು 259 ಜನರು ಸೆಲ್ಫಿ ತೆಗೆದುಕೊಳ್ಳುವಾಗ ಮೃತಪಟ್ಟಿದ್ದಾರೆ ಎಂದು ಅಧ್ಯಯನ ತಿಳಿಸಿದೆ. ಈ ಪ್ರಮಾಣವು ಭಾರತದಲ್ಲಿ ಜಾಸ್ತಿಯಿದ್ದು, ನಂತರ ರಷ್ಯಾ, ಅಮೆರಿಕ ಮತ್ತು ಪಾಕಿಸ್ತಾನ ಸ್ಥಾನ ಪಡೆದುಕೊಂಡಿವೆ. (ಏಜೆನ್ಸೀಸ್)

Leave a Reply

Your email address will not be published. Required fields are marked *