ವಿಧಾನಸಭೆ ಕಲಾಪಕ್ಕೆ ಅಡ್ಡಿಪಡಿಸಿದ ವಿಪಕ್ಷದ ಮೂವರು ಶಾಸಕರ ಅಮಾನತು

ಅಮರಾವತಿ: ವಿಧಾನಸಭೆ ಕಲಾಪಕ್ಕೆ ಅಡ್ಡಿ ಪಡಿಸಿದ ಆರೋಪದ ಮೇಲೆ ವಿಪಕ್ಷ ತೆಲುಗು ದೇಶಂ ಪಕ್ಷದ ಮೂವರು ಶಾಸಕರನ್ನು ಮಂಗಳವಾರ ಆಂಧ್ರ ಪ್ರದೇಶದ ವಿಧಾನಸಭೆಯಿಂದ ಅಮಾನತು ಮಾಡಲಾಗಿದೆ.

ವಿಧಾನಸಭೆಯಲ್ಲಿ ಟಿಡಿಪಿಯ ಉಪನಾಯಕರಾದ ಕೆ. ಅಚನ್ನೈಡು, ಗೊರಾಂಟ್ಲಾ ಬುಚ್ಚಯ್ಯ ಚೌಧರಿ ಮತ್ತು ನಿಮ್ಮಲ ರಾಮಾನಾಯ್ಡು ಎಂಬ ಮೂವರನ್ನು ಬಜೆಟ್‌ ಅಧಿವೇಶನದಿಂದ ಅಮಾನತುಗೊಳಿಸಲಾಗಿದೆ.

ಬಿಸಿ, ಎಸ್‌ಸಿ, ಎಸ್‌ಟಿ ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮಹಿಳೆಯರಿಗೆ ಪಿಂಚಣಿ ನೀಡುವ ಕುರಿತು ಸರ್ಕಾರದ ಪ್ರತಿಕ್ರಿಯೆ ವಿರುದ್ಧ ಮೂವರು ಶಾಸಕರು ಸ್ಪೀಕರ್‌ ಪೀಠವನ್ನು ಸುತ್ತುವರಿದು ಪ್ರತಿಭಟನೆ ನಡೆಸಿದ ವಿರುದ್ಧ ಸಂಸದೀಯ ವ್ಯವಹಾರಗಳ ಸಚಿವ ಬಗ್ಗನ ರಾಜೇಂದ್ರನಾಥ್‌ ಅವರು ಅಮಾನತು ಮಾಡಲು ನಿಲುವಳಿ ಮಂಡನೆ ಮಾಡಿದ್ದರು.

ಶೂನ್ಯವೇಳೆಯಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಸದಸ್ಯರು 45 ವರ್ಷಕ್ಕಿಂತ ಮೇಲ್ಪಟ್ಟ ಈ ಸಮುದಾಯಗಳ ಮಹಿಳೆಯರಿಗೆ ಪಿಂಚಣಿ ನೀಡುವ ಭರವಸೆಯನ್ನು ಪ್ರಸ್ತಾಪಿಸಿದ ವೇಳೆ ಗದ್ದಲಕ್ಕೆ ಕಾರಣವಾಯಿತು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ವೈ ಎಸ್‌ ಜಗನ್‌ ಮೋಹನ್‌ ರೆಡ್ಡಿ, ಮೊದಲಿಗೆ 45 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಪಿಂಚಣಿ ನೀಡುವ ಕುರಿತು ತಾವು ಭರವಸೆ ನೀಡಿದ್ದರೂ ಕೂಡ ಟಿಡಿಪಿ ಸಲಹೆಯ ಆಧಾರದಲ್ಲಿ ಅದನ್ನು ಮಾರ್ಪಡಿಸಲಾಗಿದೆ. ಅದರಂತೆ ವೈಎಸ್‌ಆರ್‌ ಚೇಯುತ ಯೋಜನೆಯನ್ನು ಪರಿಚಯಿಸುವುದಾಗಿ ನಾವು ಭರವಸೆ ನೀಡಿದ್ದೇವೆ. ಇದರಡಿ ಐದು ವರ್ಷಗಳಲ್ಲಿ ಈ ವರ್ಗದ ಮಹಿಳೆಯರಿಗೆ ತಲಾ 75,000 ರೂ. ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು. ಅಲ್ಲದೆ, ಭರವಸೆ ನೀಡಿದ್ದ ವೇಳೆಯ ವಿಡಿಯೋ ಕ್ಲಿಪ್‌ನ್ನು ಕೂಡ ಪ್ರದರ್ಶಿಸಿದರು.

ಇದರಿಂದ ತೃಪ್ತರಾಗದ ಟಿಡಿಪಿ ಸದಸ್ಯರು ಜಗನ್‌ ಮೋಹನ್‌ ರೆಡ್ಡಿಗೆ ಪ್ರತಿಯಾಗಿ ಹೇಳಿದ್ದ ತಮ್ಮ ವಿಡಿಯೋವನ್ನು ಕೂಡ ಪ್ರದರ್ಶಿಸುವಂತೆ ಕೋರಿದರು. ಇದಕ್ಕೆ ಉಪಸಬಾಪತಿ ಕೋನ ರಘುಪತಿ ಅನುಮತಿ ಸೂಚಿಸದಿಲ್ಲದ ವೇಳೆ ವಿಪಕ್ಷದ ಸದಸ್ಯರು ಪೋಡಿಯಂ ಬಳಿ ತೆರಳಿದರು. ಅಚ್ಚನಾಯ್ಡು ಮತ್ತು ಇತರರು ಸ್ಪೀಕರ್‌ ಕುರ್ಚಿ ಬಳಿ ತೆರಳಿ ಕಲಾಪಕ್ಕೆ ಅಡ್ಡಿಪಡಿಸಿದ್ದರು. (ಏಜೆನ್ಸೀಸ್)

Leave a Reply

Your email address will not be published. Required fields are marked *