3,600 ರೂ. ಮುಂಗಡ ಹಣ ಕೊಟ್ಟು 3 ಜನ ಲೈಂಗಿಕ ಕಾರ್ಯಕರ್ತೆಯರ ಮೇಲೆ ಮಾಡಿದ್ದು ಹೇಯ ಕೃತ್ಯ!

ನವದೆಹಲಿ: ಮೂವರು ಲೈಂಗಿಕ ಕಾರ್ಯಕರ್ತೆರನ್ನು ಒಂಬತ್ತು ವ್ಯಕ್ತಿಗಳು ಸೇರಿ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ನೋಯಿಡಾದ ಫಾರ್ಮ್‌ ಹೌಸ್‌ನಲ್ಲಿ ನಡೆದಿದೆ.

ಆರೋಪಿಗಳಲ್ಲಿ ಖಾಸಗಿ ಭದ್ರತಾ ಪಡೆಯವರು ಸೇರಿ ಓರ್ವ ಕ್ಯಾಬ್‌ ಡ್ರೈವರ್‌ ಆಗಿದ್ದಾರೆ. ಈಗಾಗಲೇ ಏಳು ಜನ ಆರೋಪಿಗಳನ್ನು ಬಂಧಿಸಲಾಗಿದ್ದು, ಬುಧವಾರ ಮುಂಜಾನೆ 5 ಗಂಟೆ ಸುಮಾರಿಗೆ ಘಟನೆಯು ವರದಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೂರುದಾರರು ಮತ್ತು ಇಬ್ಬರು ಸ್ನೇಹಿತರು ಹೇಳುವಂತೆ, ಲೈಂಗಿಕ ಕಾರ್ಯಕರ್ತೆಯರು ಲಜಪತ್‌ ನಗರದ ಮೆಟ್ರೋ ಸ್ಟೇಷನ್‌ನಲ್ಲಿ ಕ್ಲೈಂಟ್‌ಗಾಗಿ ಮಂಗಳವಾರ ರಾತ್ರಿ ಕಾಯುತ್ತಿದ್ದರು. ಈ ವೇಳೆ ರಾತ್ರಿ 11.30 ಗಂಟೆ ಸುಮಾರಿಗೆ ಸ್ವಿಫ್ಟ್‌ ಡಿಸೈರ್‌ ಮತ್ತು ಓಲಾ ಕ್ಯಾಬ್‌ನಲ್ಲಿ ಇಬ್ಬರು ಬಂದು ಅವರನ್ನು ಕೇಳಿದ್ದಾರೆ.

ಇವರಿಬ್ಬರ ನಡುವೆ ಪ್ರತಿ ಕ್ಲೈಂಟ್‌ಗೆ 3,000 ರೂ. ಮತ್ತು ಮಹಿಳೆಯರು ನೋಯಿಡಾ ಸೆಕ್ಟರ್ 18ಕ್ಕೆ ಬರಬೇಕಾಗುತ್ತದೆ ಎಂದಿದ್ದಾರೆ. ಅಲ್ಲದೆ ಇಬ್ಬರ ಜತೆಗೆ ಇನ್ನೂ ಇಬ್ಬರು ಪುರುಷರು ಇರುತ್ತಾರೆ ಎಂದು ತಿಳಿಸಿದ್ದಾರೆ. ಮುಂಗಡವಾಗಿ ಅವರಿಗೆ 3,600 ರೂ. ಹಣವನ್ನು ನೀಡಿದ್ದಾರೆ. ಬಳಿಕ ಮಹಿಳೆಯರನ್ನು ಸೆಕ್ಟರ್‌ 135ರ ಫಾರ್ಮ್‌ಹೌಸ್‌ಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿಗೆ ಮತ್ತೆ ಏಳು ಜನರು ಬಂದಿದ್ದಾರೆ. ಇದಕ್ಕೆ ಮಹಿಳೆ ವಿರೋಧ ವ್ಯಕ್ತಪಡಿಸಿ ದೆಹಲಿಗೆ ಹಿಂತಿರುಗಲು ಕ್ಯಾಬ್‌ ಒದಗಿಸುವಂತೆ ಕೇಳಿದ್ದಾರೆ. ಈ ವೇಳೆ ಆರೋಪಿಗಳು ಮಹಿಳೆಯರನ್ನು ಚೆನ್ನಾಗಿ ಥಳಿಸಿದ್ದಾರೆ ಮತ್ತು ಮುಂಗಡವಾಗಿ ಕೊಟ್ಟಿದ್ದ ಹಣವನ್ನು ವಾಪಸ್‌ ಕಸಿದುಕೊಂಡಿದ್ದಾರೆ. 9 ಜನರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಪೊಲೀಸರು ಫಾರ್ಮ್‌ಹೌಸ್‌ನ್ನು ವಶಕ್ಕೆ ಪಡೆದಿದ್ದಾರೆ. (ಏಜೆನ್ಸೀಸ್)

Leave a Reply

Your email address will not be published. Required fields are marked *