ಗೋ ಮಾಂಸ ಸಾಗಿಸುತ್ತಿದ್ದವರಿಗೆ ಕೋಲಿನಿಂದ ಥಳಿತ: ವೈರಲ್ ಆದ ವಿಡಿಯೋ, ಒಬ್ಬನ ಬಂಧನ

ಮಧ್ಯಪ್ರದೇಶ: ವಾಹನದಲ್ಲಿ ಗೋಮಾಂಸವನ್ನು ಕೊಂಡೊಯ್ಯುತ್ತಿದ್ದ ಮೂವರು ಮುಸ್ಲಿಮರ ಮೇಲೆ ಸ್ವಯಂಘೋಷಿತ ಗೋ ರಕ್ಷಕರಗುಂಪೊಂದು ಹಲ್ಲೆ ಮಾಡಿದ ಘಟನೆ ಮಧ್ಯಪ್ರದೇಶದ ಸಿಯಾನ್​ನಲ್ಲಿ ನಡೆದಿದೆ.

ಹಲ್ಲೆ ನಡೆಸುತ್ತಿದ್ದ ವಿಡಿಯೋ ಕೂಡ ವೈರಲ್​ ಆಗಿದೆ. ಇಬ್ಬರು ಯುವಕರು ಹಾಗೂ ಓರ್ವ ಮಹಿಳೆ ಸೇರಿ ಮೂವರು ಮುಸ್ಲಿಮರು ಪ್ರಯಾಣಿಸುತ್ತಿದ್ದ ಆಟೋರಿಕ್ಷಾದಲ್ಲಿ ಗೋಮಾಂಸವೂ ಇತ್ತು. ಅವರನ್ನು ಅಡ್ಡಗಟ್ಟಿದ ಈ ಗುಂಪು, ಮಹಿಳೆಯೂ ಸೇರಿ ಮೂವರನ್ನೂ ಮರವೊಂದಕ್ಕೆ ನಿಲ್ಲಿಸಿ ಕೋಲಿನಿಂದ ಥಳಿಸಿದೆ. ಅಷ್ಟೇ ಅಲ್ಲದೆ, ತಮ್ಮ ಬಾಯಿಂದ ಜೈ ಶ್ರೀರಾಮ್​ ಎಂಬ ಘೋಷಣೆಯನ್ನೂ ಕೂಗಿಸಿದ್ದಾರೆ ಎಂದು ಹಲ್ಲೆಗೊಳಗಾದವರು ಆರೋಪ ಮಾಡಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಒಬ್ಬನನ್ನು ಬಂಧಿಸಿದ್ದಾರೆ. ಇತರೆ ಆರೋಪಿಗಳಿಗೆ ಹುಡುಕಾಟ ನಡೆಸಿದ್ದಾರೆ. ಘಟನೆಯನ್ನು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್​ ಒವೈಸಿ ತೀವ್ರವಾಗಿ ಖಂಡಿಸಿದ್ದು, ಮೋದಿ ಮತದಾರರು ಸೃಷ್ಟಿಸಿಕೊಂಡಿರುವ ನೈತಿಕ ಪೊಲೀಸ್​ಗಿರಿಯಲ್ಲಿ ಮುಸ್ಲಿಮರನ್ನು ಹೇಗೆ ನಡೆಸಿಕೊಳ್ಳಲಾಗುತ್ತಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ಹೊಸ ಭಾರತಕ್ಕೆ ಸುಸ್ವಾಗತ ಎಂದು ವ್ಯಂಗ್ಯವಾಡಿದ್ದಾರೆ.

Leave a Reply

Your email address will not be published. Required fields are marked *