ಬೀರಲಿಂಗೇಶ್ವರ ಸಮುದಾಯ ಭವನಕ್ಕೆ 3 ಕೋಟಿ ಮಂಜೂರು

blank

ಬ್ಯಾಡಗಿ: ಬೀರಲಿಂಗೇಶ್ವರ ದೇವಸ್ಥಾನದ ಸಮುದಾಯ ಭವನಕ್ಕೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ 3 ಕೋಟಿ ರೂ. ಮಂಜೂರು ಮಾಡಲಾಗುವುದು ಎಂದು ರಾಜ್ಯ ಅರಣ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಹಾಗೂ ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.

blank

ಪಟ್ಟಣದ ಶ್ರೀ ಬೀರೇಶ್ವರ ಪಂಚ ಸಮಿತಿ ಆಶ್ರಯದಲ್ಲಿ ಶಿಡೇನೂರು ರಸ್ತೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಹೊರಗುಡಿ ಬೀರದೇವರ ಪ್ರಾಣ ಪ್ರತಿಷ್ಠಾಪನೆ ಹಾಗೂ ಧರ್ಮಸಭೆ ಉದ್ಘಾಟಿಸಿ ಅವರು ಮಾತನಾಡಿದರು.

2001ರಲ್ಲಿ ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ ಹಾಗೂ ರಾಜ್ಯ ಗ್ಯಾರಂಟಿ ಯೋಜನೆ ಉಪಾಧ್ಯಕ್ಷ ಶಿವನಗೌಡ್ರ ಪಾಟೀಲರು ಪುರಸಭೆ ವತಿಯಿಂದ ಕುರುಬ ಸಮಾಜಕ್ಕೆ ಪಟ್ಟಣದ ರಾಮಕ್ಕನ ಕಟ್ಟೆಯಲ್ಲಿ ಜಾಗ ನೀಡಿದ್ದಾರೆ. ಇದರಿಂದ ಸಮಾಜದ ಧಾರ್ವಿುಕ ಕಾರ್ಯಕ್ರಮ ಹಾಗೂ ಸಮುದಾಯ ಭವನ ನಿರ್ವಿುಸಲು ಅವಕಾಶವಾಗಿದೆ. ತಾವು ಹಿಂದಿನ ಅವಧಿಯಲ್ಲಿ ಸಮುದಾಯ ಭವನ ನಿರ್ವಿುಸಲು 53 ಲ.ರೂ. ನೀಡಿರುವೆ. 2018ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಶಿಡೇನೂರು ಗುಡ್ಡದಲ್ಲಿ 3 ಎಕರೆ ಜಾಗವನ್ನು ಮಂಜೂರು ಮಾಡಲಾಗಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಕಾಗಿನೆಲೆ ಕನಕಗುರುಪೀಠದ ನಿರಂಜನಾನಂದ ಶ್ರೀಗಳು ಮಾತನಾಡಿ, ದೇವಸ್ಥಾನ, ಮಂದಿರಗಳಲ್ಲಿ ಹೋಮ, ಹವನ, ಪೂಜೆ ಹಾಗೂ ಆಡಂಬರದಿಂದ ದೇವನೊಲಿಸಿಕೊಳ್ಳಲು ಸಾಧ್ಯವಿಲ್ಲ. ಕನಕದಾಸರಂತೆ ಶ್ರದ್ಧೆ, ಭಕ್ತಿ ಹಾಗೂ ಸೇವಾನಿಷ್ಟತೆ, ನಿಷ್ಕಲ್ಮಶ ಮನೋಭಾವಯಿದ್ದಲ್ಲಿ ದೈವದ ಕೃಪೆ ಸಿಗಲಿದೆ. ರಾಜಕೀಯವೇ ಬೇರೆ, ಜೀವನವೇ ಬೇರೆಯಾಗಿದ್ದು, ಜನಪರ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗಿಯಾಗಬೇಕು ಎಂದರು.

ಬಂಕಾಪುರದ ಕೆಂಡದಮಠದ ರೇವಣಸಿದ್ಧೇಶ್ವರ ಸ್ವಾಮೀಜಿ, ಬೀರೇಶ್ವರ ಪಂಚಸಮಿತಿ ಅಧ್ಯಕ್ಷ ಚಿಕ್ಕಪ್ಪ ಹಾದಿಮನಿ, ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ, ವಿರೂಪಾಕ್ಷಪ್ಪ ಬಳ್ಳಾರಿ, ರಾಜ್ಯ ಗ್ಯಾರಂಟಿ ಯೋಜನೆ ಉಪಾಧ್ಯಕ್ಷ ಶಿವನಗೌಡ್ರ ಪಾಟೀಲ, ಪುರಸಭೆ ಅಧ್ಯಕ್ಷ ಬಾಲಚಂದ್ರಗೌಡ್ರ ಪಾಟೀಲ, ಉಪಾಧ್ಯಕ್ಷ ಸುಭಾಸ ಮಾಳಗಿ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಮಾಲತೇಶ ಕಂಬಳಿ, ಕಸಾಪ ತಾಲೂಕಾಧ್ಯಕ್ಷ ಬಿ.ಎಂ. ಜಗಾಪುರ, ಈರಣ್ಣ ಬಣಕಾರ, ಶಂಕ್ರಣ್ಣ ಮಾತನವರ, ಬಸವಣ್ಣೆಪ್ಪ ಛತ್ರದ, ದಾನಪ್ಪ ಚೂರಿ, ಯಮನೂರಪ್ಪ ಉಜನಿ, ನಿಂಗಪ್ಪ ಆಡಿನವರ, ಎಟಿವಿ ಸ್ವಾಮಿ, ನಾಗರಾಜ ಆನ್ವೇರಿ, ಸೋಮಲಿಂಗಪ್ಪ ಭರಡಿ, ಬೀರಪ್ಪ ಬಣಕಾರ, ಮಲ್ಲಪ್ಪ ಕರೆಣ್ಣನವರ, ಇತರರಿದ್ದರು.

Share This Article
blank

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

blank