2nd WODI: ಏಕದಿನ ಸರಣಿ ಗೆದ್ದ ಭಾರತ ಮಹಿಳೆಯರು: ಸ್ಮತಿ ದಾಖಲೆ ಮುರಿದ ಐರಾ ಜಾಧವ್

blank

ರಾಜ್‌ಕೋಟ್: ಜೆಮೀಮಾ ರೋಡ್ರಿಗಸ್ (102 ರನ್, 91 ಎಸೆತ, 12 ಬೌಂಡರಿ) ಸಿಡಿಸಿದ ಚೊಚ್ಚಲ ಶತಕದ ನೆರವಿನಿಂದ ಭಾರತ ತಂಡ ಮಹಿಳಾ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಪ್ರವಾಸಿ ಐರ್ಲೆಂಡ್ ಎದುರು 116 ರನ್‌ಗಳ ಗೆಲುವು ದಾಖಲಿಸಿದೆ. ಇದರೊಂದಿಗೆ ಸ್ಮತಿ ಮಂದನಾ ಪಡೆ ಇನ್ನೊಂದು ಪಂದ್ಯ ಬಾಕಿಯಿರುವಂತೆಯೇ ಸರಣಿಯನ್ನು 2-0ಯಿಂದ ಗೆದ್ದುಕೊಂಡಿದೆ.

ನಿರಂಜನ್ ಷಾ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್‌ಗೆ ಇಳಿಯಿತು. ಸ್ಮತಿ ಮಂದನಾ (73) ಹಾಗೂ ಪ್ರತೀಕಾ ರಾವಲ್ (67) ಉತ್ತಮ ಆರಂಭ ಒದಗಿಸಿದರು. ಬಳಿಕ ಹರ್ಲೀನ್ ಡಿಯೋಲ್ (89)- ಜೆಮೀಮಾ ರೋಡ್ರಿಗಸ್ ನಡೆಸಿದ ಭರ್ಜರಿ ಜತೆಯಾಟದ ನೆರವಿನಿಂದ ಭಾರತ 5 ವಿಕೆಟ್‌ಗೆ 370 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಇದು ಭಾರತ ಮಹಿಳಾ ತಂಡದ ಗರಿಷ್ಠ ಮೊತ್ತ ಎನಿಸಿದೆ. ಪ್ರತಿಯಾಗಿ ಐರ್ಲೆಂಡ್ 7 ವಿಕೆಟ್‌ಗೆ 254 ರನ್‌ಗಳಿಸಲಷ್ಟೆ ಶಕ್ತಗೊಂಡಿತು. ಕ್ರಿಸ್ಟಿನಾ ಕೌಲ್ಟರ್ ರಿಲೆ (80) ಹೋರಾಟ ಸೋಲಿನ ಅಂತರ ತಗ್ಗಿಸಿತು.

ಭಾರತ: 5 ವಿಕೆಟ್‌ಗೆ 370 (ಸ್ಮತಿ ಮಂದನಾ 73, ಪ್ರತೀಕಾ 67, ಹರ್ಲಿನ್ 89, ಜೆಮೀಮಾ102, ರಿಚಾ 10, ತೇಜಲ್ 2*, ಸಯಾಲಿ 2*, ಒರ್ಲಾ 75ಕ್ಕೆ 2). ಐರ್ಲೆಂಡ್: 7 ವಿಕೆಟ್‌ಗೆ 254 (ಸಾರಾ 38, ಕ್ರಿಸ್ಟಿನಾ 80, ಡೆಲೆನಿ 37, ಲೇಹ್ ಪೌಲ್ 27*, ಅರ್ಲಿನೆ 19, ದೀಪ್ತಿ ಶರ್ಮ 37ಕ್ಕೆ 3). ಪಂದ್ಯಶ್ರೇಷ್ಠ: ಜೆಮೀಮಾ ರೋಡ್ರಿಗಸ್.

370: ಭಾರತ ತಂಡ ಮಹಿಳೆಯರ ಏಕದಿನ ಕ್ರಿಕೆಟ್‌ನಲ್ಲಿ ದಾಖಲಿಸಿದ ಗರಿಷ್ಠ ಮತ್ತು ಒಟ್ಟಾರೆ ಮಹಿಳಾ ಕ್ರಿಕೆಟ್‌ನಲ್ಲಿ 15ನೇ ಗರಿಷ್ಠ ಮೊತ್ತ ಇದಾಗಿದೆ. 2017ರಲ್ಲಿ ಐರ್ಲೆಂಡ್ ಎದುರು 358 ರನ್‌ಗಳಿಸಿದ್ದು ಭಾರತದ ಹಿಂದಿನ ಗರಿಷ್ಠ ಮೊತ್ತ.

ಸ್ಮತಿ ದಾಖಲೆ ಮುರಿದ ಐರಾ
ಬೆಂಗಳೂರು ಹೊರವಲಯದ ಆಲೂರು ಕ್ರೀಡಾಂಗಣದಲ್ಲಿ ನಡೆದ ಮೇಘಾಲಯ ವಿರುದ್ಧದ ಪಂದ್ಯದಲ್ಲಿ ಮುಂಬೈನ ಐರಾ ಜಾಧವ್ 19 ವಯೋಮಿತಿ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ತ್ರಿಶತಕ ಸಿಡಿಸಿದ ಮೊದಲ ಭಾರತೀಯ ಬ್ಯಾಟುಗಾರ್ತಿ ಎನಿಸಿದರು. ಜತೆಗೆ 19 ವಯೋಮಿತಿ ಕ್ರಿಕೆಟ್‌ನಲ್ಲಿ ವೈಯಕ್ತಿಕ ಗರಿಷ್ಠ ಅಜೇಯ 224 ರನ್‌ಗಳಿಸಿದ ಸ್ಮತಿ ಮಂದನಾ ದಾಖಲೆಯನ್ನು ಮುರಿದರು. 14 ವರ್ಷದ ಐರಾ ಜಾಧವ್ ತಾನೆದುರಿಸಿದ 157 ಎಸೆತಗಳಲ್ಲಿ 42 ಬೌಂಡರಿ, 16 ಸಿಕ್ಸರ್ ಸಹಿತ 346 ರನ್ ಸಿಡಿಸಿ ಅಜೇಯವಾಗುಳಿದರು. ಇದರೊಂದಿಗೆ ಮುಂಬೈ ಭರ್ತಿ 50 ಓವರ್‌ಗಳಲ್ಲಿ 3 ವಿಕೆಟ್‌ಗೆ 563 ರನ್‌ಗಳಿಸಿತು. ಪ್ರತಿಯಾಗಿ ಮೇಘಾಲಯ 25.4 ಓವರ್‌ಗಳಲ್ಲಿ ಕೇವಲ 19 ರನ್‌ಗಳಿಗೆ ಸರ್ವಪತನ ಕಂಡಿತು.

 

Share This Article

ಬಿಸಿಲಲ್ಲಿ ಸೆಖೆ ತಾಳಲಾರದೆ ICE ನೀರು ಕುಡಿದ್ರೆ ಜೀವಕ್ಕೆ ಅಪಾಯ ಖಂಡಿತ! Summer Health

Summer Health: ನೀರು ಮನುಷ್ಯರಿಗೆ ಬಹಳ ಅವಶ್ಯಕ. ನಾವು ಅನ್ನ ತಿನ್ನದೆ ಬದುಕಬಹುದು, ಆದರೆ ನೀರು…

ತಾಳಲಾರದ ಬೇಗೆ, ತಡೆಯುವುದು ಹೇಗೆ? ಎಸಿ, ಕೂಲರ್ ಈ ಎರಡರಲ್ಲಿ ಯಾವುದು ಬೆಸ್ಟ್​? ಇಲ್ಲಿದೆ ನೋಡಿ ಉತ್ತರ | Summer

Summer: ಇದು ಬೇಸಿಗೆ ಕಾಲ. ಕೇವಲ ಬೇಸಿಗೆ ಅಲ್ಲ ಮುಂದಿನ ಎರಡು ತಿಂಗಳಲ್ಲಿ ಬಿರು ಬೇಸಿಗೆ…

ಒಂದು ಪ್ರೀತಿಯ ಅಪ್ಪುಗೆ ಸಾಕು! ವಾಸಿ ಮಾಡುತ್ತೆ ನಾನಾ ಕಾಯಿಲೆ… hugging

hugging : ಫೆಬ್ರವರಿ 12 ರಂದು ಅಪ್ಪುಗೆಯ ದಿನ, ಅಂದರೆ ಪ್ರೀತಿಪಾತ್ರರನ್ನು ಅಪ್ಪಿಕೊಳ್ಳುವ ಮೂಲಕ ಅವರ…