ಚೇಸ್​ ಮಾಡಲು ಭಾರತಕ್ಕೆ ಸವಾಲಿನ ಮೊತ್ತ ನೀಡಿದ ಇಂಗ್ಲೆಂಡ್​

ಲಂಡನ್: ಭಾರತ ಮತ್ತು ಇಂಗ್ಲೆಂಡ್​ ನಡುವೆ ಇಂದು ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ದ್ವಿತೀಯ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಿದ ಇಂಗ್ಲೆಂಡ್​  50 ಓವರ್​ಗಳಲ್ಲಿ 322 ರನ್​ ಗಳಿಸಿದೆ. ಈ ಮೂಲಕ ಚೇಸ್​ ಮಾಡಲು ಭಾರತಕ್ಕೆ ಸವಾಲಿನ ಮೊತ್ತ ನೀಡಿದೆ.

ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್​ ತಂಡ ನಿರೀಕ್ಷೆಯಂತೆಯೇ ತಂಡದ ಆಟಗಾರರೂ ಆರಂಭಿಕರಾದ ಜೆಜೆ ರಾಯ್​, ಬೈರ್ಸ್ಟೌ ಉತ್ತಮ ಅಡಿಪಾಯ ಹಾಕಿಕೊಟ್ಟರು.  ನಂತರ ಬಂದ ರೂಟ್​ ಅದ್ಭುತ ಇನ್ನಿಂಗ್ಸ್​ ಕಟ್ಟಿದರು. 113 (116) ರನ್​ಗಳನ್ನು ಸಿಡಿಸುವ ಮೂಲಕ ತಂಡವನ್ನು ಸವಾಲಿನ ಮೊತ್ತದತ್ತ ಕೊಂಡೊಯ್ದರು.

ನಂತರ ಇಯಾನ್​ ಮೋರ್ಗನ್​ ಮತ್ತು ವೇಲಿ ಆಕರ್ಷಕ ಅರ್ಧ ಶತಕ ಸಿಡಿಸುವ ಮೂಲಕ ತಂಡದ ಮೊತ್ತವನ್ನು ಮತ್ತಷ್ಟು ಹೆಚ್ಚಿಸಿದರು.

ಅಂತಿಮವಾಗಿ ಇಂಗ್ಲೆಂಡ್​ ತಂಡ 50 ಓವರ್​ಗಳಲ್ಲಿ 322 ರನ್​ ಗಳಿಸಿತು.

ಇದನ್ನು ಬೆನ್ನುಹತ್ತಿರುವ ಭಾರತ ತಂಡ ಉತ್ತಮ ಆರಂಭವನ್ನೇ ಪಡೆದುಕೊಂಡಿದೆ. ಆರಂಭಿಕರಾದ ರೋಹಿತ್​ ಶರ್ಮಾ ಮತ್ತು  ಶಿಖರ್​ ಧವನ್​ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದಾರೆ.

ಮೂರು ಏಕದಿನ ಪಂದ್ಯಗಳ ಈ ಸರಣಿಯಲ್ಲಿ ಈಗಾಗಲೇ ಒಂದು ಪಂದ್ಯ ಗೆದ್ದಿರುವ ಭಾರತ, ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ. ಸರಣಿಯನ್ನು ಜೀವಂತವಾಗಿಡಬೇಕಿದ್ದರೆ ಇಂದಿನ ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿ ಇಂಗ್ಲೆಂಡ್​ ತಂಡವಿದೆ.

ಭಾರತೀಯ ಕ್ರಿಕೆಟ್​ನ ಹಲವು ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿರುವ ಪ್ರತಿಷ್ಠಿತ ಲಾರ್ಡ್ಸ್ ಮೈದಾನದಲ್ಲೇ ಸರಣಿ ಜಯಿಸುವ ಅವಕಾಶ ವಿರಾಟ್ ಕೊಹ್ಲಿ ಪಡೆಗೆ ಲಭಿಸಿದೆ. ಜತೆಗೆ ಸತತ 10ನೇ ಏಕದಿನ ಸರಣಿ ಗೆಲುವಿನ ಸಾಧನೆ ಮೇಲೆ ಕಣ್ಣಿಟ್ಟಿದೆ. ಇದರಿಂದ ಭಾರತ ವಿಶ್ವ ನಂ.1 ಪಟ್ಟಕ್ಕೂ ಮತ್ತಷ್ಟು ಸನಿಹವಾಗಲಿದೆ.

ತಂಡ ಹೀಗಿದೆ
ಭಾರತ: ರೋಹಿತ್​ ಶರ್ಮಾ, ಶಿಖರ್​ ಧವನ್​, ಲೋಕೇಶ್​ ರಾಹುಲ್​, ವಿರಾಟ್​ ಕೊಹ್ಲಿ (ನಾಯಕ), ಸುರೇಶ್​ ರೈನಾ, ಎಂಎಸ್​ ಧೋನಿ (ವಿಕೆಟ್​ ಕೀಪರ್​), ಹರ್ದಿಕ್​ ಪಾಂಡ್ಯ, ಸಿದ್ಧಾರ್ಥ್​ ಕೌಲ್​, ಉಮೇಶ್​ ಯಾದವ್​, ಯಜುವೇಂದ್ರ ಚಹಾಲ್​, ಕುಲದೀಪ್​ ಯಾದವ್​.

ಇಂಗ್ಲೆಂಡ್​ : ಜೇಸನ್​ ರಾಯ್​, ಜಾನಿ ಬೈರ್ಸ್ಟೌ, ಜೋ ರೂಟ್​, ಇಯಾನ್​ ಮೋರ್ಗನ್​, ಬೆನ್​ ಸ್ಟೋಕ್ಸ್, ಜೋಸ್​ ಬಟ್ಲರ್​, ಮೋಯಿನ್​ ಅಲಿ, ಡೇವಿಡ್​ ವೈಲಿ, ಲೈಮ್​ ಪ್ಲಂಕೆಟ್​, ಆದಿಲ್​ ರಶೀದ್​, ಮಾರ್ಕ್​ ವೂಡ್​. (ಏಜೆನ್ಸೀಸ್)