More

    ಚೆನ್ನೈಗೆ ಸತತ 2ನೇ ಗೆಲುವು

    ಚೆನ್ನೈ: ಟ್ರಂಪ್ ಹಣಾಹಣಿ ಸೇರಿದಂತೆ ಆರಂಭಿಕ ಮೂರು ಕಾದಾಟದಲ್ಲಿ ಮೇಲುಗೈ ಸಾಧಿಸಿದ ಆತಿಥೇಯ ಚೆನ್ನೈ ಸೂಪರ್​ಸ್ಟಾರ್ಸ್ ತಂಡ 5ನೇ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್​ನಲ್ಲಿ (ಪಿಬಿಎಲ್) ಸತತ 2ನೇ ಗೆಲುವು ದಾಖಲಿಸಿತು. ಜವಾಹರ್ ಲಾಲ್ ನೆಹರೂ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಚೆನ್ನೈ ತಂಡ ಒಂದು ಹಣಾಹಣಿ ಬಾಕಿ ಇರುವಾಗಲೇ 4-2 ಅಂಕಗಳಿಂದ ಹಾಲಿ ರನ್ನರ್​ಅಪ್ ಮುಂಬೈ ರಾಕೆಟ್ಸ್ ತಂಡವನ್ನು ಸೋಲಿಸಿತು. ಲೀಗ್​ನ ಉದ್ಘಾಟನಾ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಪಿವಿ ಸಿಂಧು ಸಾರಥ್ಯದ ಹೈದರಾಬಾದ್ ಹಂಟರ್ಸ್ ತಂಡವನ್ನು ಮಣಿಸಿತ್ತು.

    ಪಂದ್ಯದ ಮೊದಲ ಹಣಾಹಣಿ ಮಿಶ್ರ ಡಬಲ್ಸ್ ವಿಭಾಗದಲ್ಲಿ ಚೆನ್ನೈ ತಂಡದ ಧ್ರುವ್ ಕಪಿಲಾ-ಜೆಸ್ಸಿಕಾ ಪೆಂಗ್ ಜೋಡಿ 15-10, 15-14 ನೇರ ಗೇಮ್ಳಿಂದ ಕಿಮ್ ಜಿ ಜುಂಗ್ ಹಾಗೂ ಪಿಯಾ ಬೆರ್ನಾಡೆತ್ ಜೋಡಿ ಎದುರು ಗೆಲುವು ದಾಖಲಿಸಿ ತಂಡಕ್ಕೆ 1-0 ಯಿಂದ ಮುನ್ನಡೆ ತಂದುಕೊಟ್ಟಿತು. ಬಳಿಕ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಹಣಾಹಣಿಯಲ್ಲಿ ಚೆನ್ನೈ ತಂಡದ ಸ್ಟಾರ್ ಆಟಗಾರ ಲಕ್ಷ್ಯ ಸೇನ್ 15-12, 15-10 ವಿಶ್ವ ನಂ.27, ದಕ್ಷಿಣ ಕೊರಿಯಾ ಲೀ ಡಾಂಗ್ ಕ್ಯೂನ್ ಅವರನ್ನು ಸುಲಭವಾಗಿ ಸೋಲಿಸಿದರು. 2ನೇ ಹಣಾಹಣಿ ಅಂತ್ಯಕ್ಕೆ 2-0 ಯಿಂದ ಮುನ್ನಡೆ ಕಂಡುಕೊಂಡ ಚೆನ್ನೈ ಉತ್ತಮ ಆರಂಭ ಗಿಟ್ಟಿಸಿಕೊಂಡಿತು. ಪಂದ್ಯದ 3ನೇ ಹಣಾಹಣಿ ಪುರುಷರ ಸಿಂಗಲ್ಸ್​ನ 2ನೇ ಹೋರಾಟವನ್ನು ಟ್ರಂಪ್ ಘೋಷಣೆಯೊಂದಿಗೆ ಆಡಿದ ಚೆನ್ನೈ ಮೇಲುಗೈ ಸಾಧಿಸಿ ಗೆಲುವು ಖಾತ್ರಿಪಡಿಸಿಕೊಂಡಿತು. ಚೆನ್ನೈ ಪ್ರತಿನಿಧಿಸುತ್ತಿರುವ ವಿಶ್ವ ನಂ.9 ಇಂಡೋನೇಷ್ಯಾದ ಟಾಮಿ ಸುಗಿಯಾರ್ಟೆ 14-15, 15-10, 15-7 ಗೇಮ್ಳಿಂದ ಆರಂಭಿಕ ಹಿನ್ನಡೆ ನಡುವೆಯೂ ಭಾರತದ ಅನುಭವಿ ಆಟಗಾರ ಪಿ.ಕಶ್ಯಪ್ ಎದುರು ಗೆಲುವು ದಾಖಲಿಸಿದರು. ಟ್ರಂಪ್ ಹೋರಾಟದ ಗೆಲುವಿನಿಂದ ಹೆಚ್ಚುವರಿ ಅಂಕ ದಕ್ಕಿಸಿಕೊಂಡ ಚೆನ್ನೈ 4ನೇ ಹಣಾಹಣಿ ಅಂತ್ಯಕ್ಕೆ 4-2 ಮುನ್ನಡೆ ಸಾಧಿಸಿ ಗೆಲುವು ಖಚಿತಪಡಿಸಿಕೊಂಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts