29ಕ್ಕೆ ಶಿಮುಲ್​ಗೆ ಚುನಾವಣೆ

ಶಿವಮೊಗ್ಗ: ಶಿಮುಲ್ (ಶಿವಮೊಗ್ಗ ಹಾಲು ಉತ್ಪಾದಕರ ಒಕ್ಕೂಟ)ದ 14 ನಿರ್ದೇಶಕ ಸ್ಥಾನಗಳಿಗೆ ಏ.29ರಂದು ಚುನಾವಣೆ ನಡೆಯಲಿದೆ. ಏ.22ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ. ಮೀನುಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಷಡಾಕ್ಷರಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಹೊಸದುರ್ಗ, ಚಿತ್ರದುರ್ಗ, ಹೊಳಲ್ಕೆರೆ, ಹರಿಹರ, ಹೊನ್ನಾಳಿ, ದಾವಣಗೆರೆ, ಜಗಳೂರು, ಚನ್ನಗಿರಿ, ಹೊಸನಗರ, ಶಿಕಾರಿಪುರ, ಶಿವಮೊಗ್ಗ, ಸೊರಬ, ತೀರ್ಥಹಳ್ಳಿ, ಭದ್ರಾವತಿ ತಾಲೂಕಿನಿಂದ ತಲಾ ಓರ್ವ ನಿರ್ದೇಶಕರನ್ನು ಚುನಾವಣೆ ಮೂಲಕ ಆಯ್ಕೆ ಮಾಡಲಾಗುತ್ತದೆ. ಶಿಮುಲ್ ವ್ಯಾಪ್ತಿಯ ಶಿವಮೊಗ್ಗ, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳಿಂದ ಒಟ್ಟು 835 ಮತದಾರರು ಹಕ್ಕು ಚಲಾಯಿಸುವ ಅವಕಾಶ ಹೊಂದಿದ್ದಾರೆ. ಮಾಚೇನಹಳ್ಳಿ ಶಿಮುಲ್​ನಲ್ಲಿ 29ರಂದು ಮತದಾನ ನಡೆಯಲಿದ್ದು, ಅದೇ ದಿನ ಫಲಿತಾಂಶ ಪ್ರಕಟಿಸಲಾಗುತ್ತದೆ.

ಬಿರುಸಾದ ಚಟುವಟಿಕೆ:ಶಿಮುಲ್ ನಿದೇರ್ಶಕ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆ ಮೂಲತಃ ಸಹಕಾರಿ ವಲಯಕ್ಕೆ ಸಂಬಂಧಿಸಿದ್ದಾದರೂ ಇದರಲ್ಲಿ ರಾಜಕೀಯ ಪಕ್ಷಗಳು ಪರೋಕ್ಷವಾಗಿ ಪರಿಣಾಮ ಬೀರುತ್ತವೆ. ಸಿಂಡಿಕೇಟ್ ರಚನೆಯಾಗಿ ಅದರ ಮೂಲಕವೇ ಅಭ್ಯರ್ಥಿಗಳು ಕಣಕ್ಕಿಳಿಯುವುದು ಸಾಮಾನ್ಯ. ಶಿಮುಲ್​ನ ಹಾಲಿ ಅಧ್ಯಕ್ಷ ವಿದ್ಯಾಧರ ಜೆಡಿಎಸ್ ಜತೆ ಗುರುತಿಸಿಕೊಂಡಿದ್ದಾರೆ. ಜಿಲ್ಲೆಯ ಸಹಕಾರಿ ವಲಯದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಸ್ವಲ್ಪ ಮಟ್ಟಿನ ಹಿಡಿತ ಸಾಧಿಸಿರುವುದರಿಂದ ವಿದ್ಯಾಧರ ಹಾಗೂ ತಂಡಕ್ಕೆ ಅನುಕೂಲವಾಗಬಹುದು. ಲೋಕಸಭೆ ಚುನಾವಣೆ ಪ್ರಚಾರದ ಜತೆಜತೆಗೆ ಶಿಮುಲ್ ಚುನಾವಣೆ ಅಭ್ಯರ್ಥಿಗಳ ಪ್ರಚಾರವೂ ನಡೆಯುತ್ತಿದೆ. ಈಗಾಗಲೇ ಒಂದು ಸುತ್ತು ಹಾಲು ಉತ್ಪಾದಕರ ಸಹಾಕರ ಸಂಘಗಳನ್ನು ಅಭ್ಯರ್ಥಿಗಳು ಸಂರ್ಪಸಿದ್ದಾರೆ.

ಶಿಮುಲ್ ಚುನಾವಣೆ ವೇಳಾ ಪಟ್ಟಿ: ನಾಮಪತ್ರ ಸಲ್ಲಿಕೆಗೆ ಅಂತಿಮ ದಿನ-ಏ.22, ನಾಮಪತ್ರಗಳ ಪರಿಶೀಲನೆ- 23, ನಾಮಪತ್ರ ಹಿಂಪಡೆಯಲು ಕಡೇ ದಿನ- 24, ಮತದಾನ ಹಾಗೂ ಮತ ಎಣಿಕೆ-ಏ.29

Leave a Reply

Your email address will not be published. Required fields are marked *