ಕಾರಂಜಾ ಸಂತ್ರಸ್ತರಿಂದ ಚುನಾವಣೆ ಬಹಿಷ್ಕಾರ

ವಿಜಯವಾಣಿ ಸುದ್ದಿಜಾಲ ಬೀದರ್
ಕಾರಂಜಾ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ಸಂತ್ರಸ್ತ ರೈತರಿಗೆ ನಾಲ್ಕು ದಶಕಗಳಿಂದ ವೈಜ್ಞಾನಿಕ ಪರಿಹಾರ ನೀಡಲು ನಿರ್ಲಕ್ಷೃ ವಹಿಸುತ್ತಿರುವ ಹಿನ್ನೆಲೆಯಲ್ಲಿ 28 ಹಳ್ಳಿ ಸಂತ್ರಸ್ತರು ಲೋಕಸಭಾ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

ನಗರದಲ್ಲಿ ಸೋಮವಾರ ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಜರುಗಿದ ರೈತರ ಸಭೆಯಲ್ಲಿ ಸುದೀರ್ಘ ಚಚರ್ೆ ನಡೆಸಿ ಮತದಾನ ಬಹಿಷ್ಕರಿಸಲು ತೀಮರ್ಾನಿಸಲಾಯಿತು.
ಕಾರಂಜಾ ಯೋಜನೆಯಲ್ಲಿ ಕಳೆದುಕೊಂಡ ಭೂಮಿಗೆ ವೈಜ್ಞಾನಿಕ ಪರಿಹಾರ ನೀಡುವವರೆಗೆ ಹೋರಾಟ ಮಾಡುತ್ತೇವೆ. ಏ.23ಕ್ಕೆ ನಡೆಯಲಿರುವ ಚುನಾವಣೆಯನ್ನು ಕಾರಂಜಾ ವ್ಯಾಪ್ತಿಯ ಎಲ್ಲ 28 ಹಳ್ಳಿಗಳ ಸಂತ್ರಸ್ತರು ಬಹಿಷ್ಕರಿಸಲಿದ್ದೇನೆ. ನಾವ್ಯಾರೂ ಮತದಾನದಲ್ಲಿ ಭಾಗವಹಿಸುವುದಿಲ್ಲ ಎಂದು ಸಂತ್ರಸ್ತ ರೈತರು, ಸಮಿತಿ ಪ್ರಮುಖರು ಪ್ರತಿಜ್ಞೆ ಮಾಡಿದರು.

ಸಮಿತಿ ಅಧ್ಯಕ್ಷ ಚಂದ್ರಶೇಖರ ಪಾಟೀಲ್ ಹೊಚಕನಳ್ಳಿ ಮಾತನಾಡಿ, ಸಿಎಂ, ಜಿಲ್ಲಾ ಉಸ್ತುವಾರಿ ಸಚಿವರು ಸೇರಿ ಎಲ್ಲ ಚುನಾಯಿತ ಪ್ರತಿನಿಧಿಗಳು ಕಳೆದೊಂದು ವರ್ಷದಿಂದ ನಮ್ಮ ಬೇಡಿಕೆ ಶೀಘ್ರ ಈಡೇರಿಸಲಾಗುವುದು ಎಂದು ಸುಳ್ಳು ಭರವಸೆ ನೀಡಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಚುನಾವಣೆ ಬಹಿಷ್ಕರಿಸುವ ಮೂಲಕ ಸರ್ಕಾರ ಹಾಗೂ ಜನಪ್ರತಿನಿಧಿಗಳಿಗೆ ಬಿಸಿ ಮುಟ್ಟಿಸಲಾಗುವುದು ಎಂದು ಹೇಳಿದರು.

ಸಮಿತಿ ನಿದರ್ೇಶಕ ವೀರಭದ್ರಪ್ಪ ಉಪ್ಪಿನ್, ರೈತ ಮುಖಂಡ ಚಂದ್ರಕಾಂತ ಜೋತೆಪ್ಪನವರ್ ಮಾತನಾಡಿದರು. ಪ್ರಮುಖರಾದ ಮಲ್ಲಿಕಾರ್ಜುನ ಮುತ್ತಣ್ಣ, ದತ್ತಾತ್ರಿ ಕುಲಕರ್ಣಿ, ನಾಗಶೆಟ್ಟೆಪ್ಪ ಹಚ್ಚೆ, ಭೀಮರೆಡ್ಡಿ ಔರಾದ್, ರಾಜಕುಮಾರ ಕೋಸಮ್, ಕಂಟಯ್ಯ ಸ್ವಾಮಿ, ವಿಜಯಕುಮಾರ ಕುಲಕರ್ಣಿ, ಮಲ್ಲಿಕಾರ್ಜುನ ಸಿಂದಬಂದಗಿ, ರಾಜಕುಮಾರ ಚಿಲ್ಲರ್ಗೆ, ಬಾಬುರಾವ ಹಜ್ಜರಗಿ, ಮದನಲಾಲ್ ಪಾಟೀಲ್, ರಾಜೇಂದ್ರ ಪಾಟೀಲ್ ಅತಿವಾಳ, ನಾಗಶೆಟ್ಟಿ ಚಲವಾದಿ, ಅಶೋಕ ಕುಲಕರ್ಣಿ, ಕಾಶಿನಾಥ ಸ್ವಾಮಿ, ರಾಮಲು ಸಿಂದಬಂದಗಿ, ವೈಜಿನಾಥ ಹೂಗಾರ, ಸೂರ್ಯಕಾಂತ ಕುಲಕರ್ಣಿ, ರಾಜಪ್ಪ ಕೌಟಗಿ, ನಾಗಪ್ಪ ಅಡಕಿ, ದಿನಕರರಾವ ಪಾಟೀಲ್, ರಾಮರೆಡ್ಡಿ ಪೊಲೀಸ್ ಪಾಟೀಲ್, ಚಂದ್ರಶೇಖರ ಮುತ್ತಣ್ಣ, ಬಾಬುರಾವ ತಿಪ್ಪಾರೆಡ್ಡಿ, ರಾಜಕುಮಾರ ಕುಲಕರ್ಣಿ, ವಿಶ್ವನಾಥ ಸ್ವಾಮಿ, ಬಸವರಾಜ ನಿಟ್ಟೂರ್, ಶೌಕತ್ ಅಲಿ ಹಾಲಹಳ್ಳಿ, ಸಂಗಮ್ಮ ಮಗ್ಗಿ, ಸಿದ್ದಪ್ಪ ಹೂಗಾರ ಇತರರಿದ್ದರು