ಹಾಸನ: ಕವಿಪ್ರನಿನಿಯಿಂದ 66 ಕೆ.ವಿ ಹೈ ಟೆನ್ಷನ್ ಪ್ರಸರಣ ಮಾರ್ಗದಲ್ಲಿ ತುರ್ತು ನಿರ್ವಹಣಾ ಕೆಲಸಗಳನ್ನು ಹಮ್ಮಿಕೊಂಡಿರುವುದರಿಂದ ಇಹೆಚ್‌ಟಿ ಸ್ಥಾವರಗಳಾದ ಹಿಮ್ಮತ್‌ಸಿಂಕಾ, ಎನ್‌ಟಿಸಿ, ಪ್ರೀಕಾಟ್, ಎಚ್‌ಪಿಸಿಎಲ್ ಮತ್ತು ಪೆಟ್ರೋನೆಟ್ ಸ್ಥಾವರಗಳಿಗೆ ಮತ್ತು ಗೊರೂರು, ಅರಕಲಗೂಡು, ಗಂಗೂರು, ದೊಡ್ಡಮಗ್ಗೆ, ಮಲ್ಲಿಪಟ್ಟಣ, ಶನಿವಾರಸಂತೆ, ಯಸಳೂರು ಮತ್ತು ಹೆತ್ತೂರು ವಿ.ವಿ ಕೇಂದ್ರಗಳಿಂದ ವಿದ್ಯುತ್ ಸರಬರಾಜಾಗುವ ಸ್ಥಾವರಗಳಿಗೆ ಆ.28 ರಂದು ಬೆಳಗ್ಗೆ 6 ಗಂಟೆಯಿಂದ ಬೆಳಗ್ಗೆ 10 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಕಾರ್ಯನಿರ್ವಾಹಕ ಇಂಜಿನಿಯರ್ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.
66/11ಕೆ.ವಿ ರಾಮೇಶ್ವರನಗರ, ಶಾಂತಿಗ್ರಾಮ, ಕೆ.ಐ.ಎ.ಡಿ.ಬಿ ಮತ್ತು ಮಳಲಿ ವಿ.ವಿ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕೆಲಸಗಳನ್ನು ಹಮ್ಮಿಕೊಂಡಿರುವುದರಿಂದ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆ ಯವರೆಗೆ ಇಎಚ್‌ಟಿ ಸ್ಥಾವರಗಳಾದ ಎಚ್‌ಪಿಸಿಎಲ್ ಮತ್ತು ಪೆಟ್ರೋನೆಟ್ ಹಾಗೂ ರಾಮೇಶ್ವರನಗರ ವಿ.ವಿ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಕೆ.ಆರ್ ಪುರಂ, ಉದಯಗಿರಿ, ರಿಂಗ್‌ರೋಡ್, ಬೂವನಹಳ್ಳಿ, ಸತ್ಯಮಂಗಲ, ಶಂಕರಿಪುರಂ, ದೊಡ್ಡಪುರ, ಶಾಂತಿಗ್ರಾಮ ವಿ.ವಿ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಕೆಂಚಟಹಳ್ಳಿ, ಯೋಗಿಹಳ್ಳಿ, ಮರ್ಕುಲಿ, ಮೆಲ್ಲಳ್ಳಿ, ಗಾಡೇನಹಳ್ಳಿ, ಹಂಪನಹಳ್ಳಿ, ಸಾರಾಪುರ, ಕಾರೆಕೆರೆ, ನಾಗೇನಹಳ್ಳಿ, ದೇವಿಹಳ್ಳಿ, ಹೆಗ್ಗಡೆಹಳ್ಳಿ, ಕೆಐಎಡಿಬಿ ವಿವಿ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಜಯಂತಿ ಕಾಫಿ ವರ್ಕ್ಸ್, ಎಸ್‌ಎಸ್ ಗ್ರಾನೈಟ್ಸ್, ಎಚ್‌ಪಿಸಿಎಲ್, ಕ್ಲೆನೆ ಪ್ಯಾಕ್ಸ್, ಮತ್ತಿತರ ಕೈಗಾರಿಕಾ ಪ್ರದೇಶಗಳು, ಕೌಶಿಕ ಮಾರ್ಗದ ಪ್ರದೇಶಗಳು, ದೊಡ್ಡಬಸವನಹಳ್ಳಿ, ಕಾಚನಾಯಕನಹಳ್ಳಿ, ಸಮುದ್ರವಳ್ಳಿ, ನಾಗತಿಹಳ್ಳಿ, ಹಾಗೂ ಮಳಲಿ ವಿ.ವಿ ಕೇಂದ್ರದ ಸುತ್ತಮುತ್ತಲ ಪ್ರದೇಶಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕಾರ್ಯನಿರ್ವಾಹಕ ಇಂಜಿನಿಯರ್ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.