ಹುಬ್ಬಳ್ಳಿ: ಅಂಗನವಾಡಿಗಳಿಗೆ ಪೂರೈಕೆಯಾಗುತ್ತಿದ್ದ ಪೌಷ್ಟಿಕ ಆಹಾರ ಅಕ್ರಮ ದಾಸ್ತಾನು ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 26 ಜನರನ್ನು ಬಂಧಿಸುವಲ್ಲಿ ಇಲ್ಲಿಯ ಕಸಬಾಪೇಟ ಪೊಲೀಸರು ಯಶಸ್ವಿಯಾಗಿದ್ದಾರೆ.
ನರೇಂದ್ರದ ಶಿವಕುಮಾರ ದೇಸಾಯಿ, ಲಕಮಾಪುರದ ಬಸವರಾಜ ಭದ್ರಶೆಟ್ಟಿ, ನೇಕಾರನಗರದ ಮೊಹ್ಮದ್‌ಗೌಸ್ ಖಲೀಫಾ, ಜನ್ನತನಗರದ ಗೌತಮಸಿಂಗ್ ಠಾಕೂರ, ಕುರಡಿಕೇರಿಯ ಮಂಜುನಾಥ ಮಾದರ, ಯರಗುಪ್ಪಿಯ ಫಕೀರೇಶ ಹಲಗಿ, ಕೃಷ್ಣ ಮಾದರ, ರವಿ ಹರಿಜನ, ಅಂಗನವಾಡಿ ಕಾರ್ಯಕರ್ತೆಯರಾದ ಶಮೀಮಬಾನು ಮುಜಾವರ, ಶಮೀಮಬಾನು ದಾರುಗಾರ, ಬೀಬಿಆಯಿಷಾ ಕಾರಿಗಾರ, ರೇಷ್ಮಾ ವಡ್ಡೊ, ಶಾಹೀನ ಚಕ್ಕೇಹಾರಿ, ಫೈರೋಜಾ ಮುಲ್ಲಾ, ಬೀಬಿಆಯಿಷಾ ಶೇಖ್, ಮೆಹಬೂಬಿ ಹುಲ್ಯಾಳ, ಶಕುಂತಲಾ ನ್ಯಾಮತಿ, ಚಿತ್ರಾ ಉರಾಣಿಕರ, ಮೀನಾಕ್ಷಿ ಬೆಟಗೇರಿ, ಹೀನಾಕವಸರ್ ನರಗುಂದ, ಹೀನಾಕೌಸರ್ ಮೇಸ್ತ್ರಿ, ಶೀಲಾ ಹಿರೇಮಠ, ಶ್ರುತಿ ಕೊಟಬಾಗಿ, ಪರವೀನಬಾನು ಖಲೀಫ, ರೇಣುಕಾ ಕಮಲದಿನ್ನಿ, ಗಂಗಮ್ಮ ಪಾಂಡರೆಯನ್ನು ಬಂಧಿಸಲಾಗಿದೆ.
ಬಂಧಿತರಿಂದ ಒಟ್ಟು 329 ಚೀಲಗಳಲ್ಲಿದ್ದ 8 ಟನ್ 84 ಕೆಜಿ ಆಹಾರ ಪದಾರ್ಥ ಜಪ್ತಿ ಮಾಡಿದ್ದು, ಇದರ 4 ಲಕ್ಷ ಮತ್ತು 3 ಲಕ್ಷ ರೂ. ಮೌಲ್ಯದ ಒಂದು ಬೊಲೆರೋ ವಾಹನ ಸೀಜ್ ಮಾಡಲಾಗಿದೆ. ಇನ್ನಷ್ಟು ತನಿಖೆ ಚುರುಕುಗೊಳಿಸಲಾಗುವುದು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಫೆ. 15ರಂದು ಮಧ್ಯಾಹ್ನ 4.30ಕ್ಕೆ ಬಂದ ಖಚಿತ ಮಾಹಿತಿ ಮೇರೆಗೆ ಕಂದಾಯ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಗಬ್ಬೂರು ಬಳಿಯ ಗೋೀದಾಮಿನ ಮೇಲೆ ದಾಳಿ ಮಾಡಲಾಗಿತ್ತು. ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರೂಪಣಾಧಿಕಾರಿ ಕಮಲವ್ವ ಬೈಲೂರ, ಕಸಬಾಪೇಟ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಈ ಪ್ರಕರಣವನ್ನೀಗ ಸಿಸಿಬಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಕ್ಕಳ ಆಹಾರ ಕಳವು ಪ್ರಕರಣದಲ್ಲಿ 26 ಜನರ ಬಂಧನ

You Might Also Like
ನಿಮ್ಮ ಮಕ್ಕಳನ್ನು ಸ್ಮಾರ್ಟ್‌ಫೋನ್‌ಗಳಿಂದ ದೂರವಿಡುವುದು ಹೇಗೆ? Child Care Tips
Child Care Tips: ನೀವು ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಮೊಬೈಲ್ ಫೋನ್ ಕೊಡಬಾರದು. ನಿಮ್ಮ ಮಗು ನಿಮ್ಮೊಂದಿಗೆ…
ಈ 3 ರಾಶಿಯ ಮಹಿಳೆಯರು ಹುಟ್ಟಿನಿಂದಲೇ ಅಪಾರ ಬುದ್ಧಿಶಕ್ತಿ ಹೊಂದಿರುತ್ತಾರಂತೆ! ನಿಮ್ಮದೂ ಇದೇ ರಾಶಿನಾ? Zodiac Signs
Zodiac Signs : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ಯಾವ ರಾಶಿಚಕ್ರ ಮತ್ತು ನಕ್ಷತ್ರದಲ್ಲಿ…
ಬೇಸಿಗೆ ತಂಪಾಗಿರಲು ಹಾಲು ಹಾಕದ ಮಿಲ್ಕ್ ಶೇಕ್
ಬೇಸಿಗೆಯಲ್ಲೂ ನಮ್ಮನ್ನು ತಂಪಾಗಿಟ್ಟು, ಸಾಮಾನ್ಯವಾಗಿ ಆಗುವ ಸುಸ್ತನ್ನು ಕಡಿಮೆ ಮಾಡುವ ವಿಶೇಷ ಮಿಲ್ಕ್ ಶೇಕ್ ಬಗ್ಗೆ…