ಕೆರೂರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘವು ಬಾದಾಮಿ ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 26 ಲಕ್ಷ ರೂ. ಶಿಷ್ಯವೇತನ ನೀಡಿದೆ ಎಂದು ತಾಲೂಕು ಯೋಜನಾಧಿಕಾರಿ ಮಹಾಂತೇಶ ನಾಗಶೆಟ್ಟಿ ತಿಳಿಸಿದ್ದಾರೆ.
ಇಲ್ಲಿನ ಬನಶಂಕರಿ ದೇವಸ್ಥಾನದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಕಿಟ್, ಕಲ್ಯಾಣ ಮಂಟಪಕ್ಕೆ ಸಹಾಯ ಧನ, ಬ್ಯಾಗ್ ಉಚಿತವಾಗಿ ವಿತರಿಸಿ ಅವರು ಮಾತನಾಡಿದರು.
ಜಿಲ್ಲಾ ಜನಜಾಗೃತಿ ಸಮಿತಿ ನಿಕಟಪೂರ್ವ ಅಧ್ಯಕ್ಷ ಡಾ.ಎಂ.ಜಿ. ಕಿತ್ತಲಿ ಮಾತನಾಡಿ, ದೇವಾಂಗ ಸಮಾಜದ ಅಧ್ಯಕ್ಷ ಸಂಕಣ್ಣ ಹೊಸಮನಿ,ಪ.ಪಂ. ಮಾಜಿ ಸದಸ್ಯ ಪಿ.ಎಸ್. ಹವೇಲಿ, ಪ್ರಶಾಂತ ಗದ್ದನಕೇರಿ, ಮಯೂರ ರೂಡಗಿ, ಲಕ್ಷ್ಮಣ ಸಣ್ಣಕ್ಕಿ, ಶ್ರೀಕಾಂತ ಪರದೇಶಿ, ಕೆರೂರ ವಲಯದ ಮೇಲ್ವಿಚಾರಕ ಮಲ್ಲಪ್ಪ ಎಸ್.ಕೆ., ಇತರರಿದ್ದರು.