ಸ್ಪುಟ್ನಿಕ್ ವಿ ಲಸಿಕೆಯೊಂದಿಗೆ ರಷ್ಯಾ ಪ್ರವಾಸ : ಲಭ್ಯವಿದೆ 25 ದಿನಗಳ ಪ್ಯಾಕೇಜ್ ಟೂರ್ !

blank

ದೆಹಲಿ/ಮಾಸ್ಕೊ : ಕರೊನಾ ಸಾಂಕ್ರಾಮಿಕವು ಹರಡುವುದರೊಂದಿಗೆ ಜಗತ್ತಿನ ಎಲ್ಲೆಡೆ ಬಹುತೇಕವಾಗಿ ಹೊಡೆತ ತಿಂದಿದ್ದೆಂದರೆ ಪ್ರವಾಸೋದ್ಯಮ ಕ್ಷೇತ್ರ. ಹಲವು ದೇಶಗಳು ಅಂತರರಾಷ್ಟ್ರೀಯ ಓಡಾಟದ ಮೇಲೆ ನಿರ್ಬಂಧ ಹಾಕಿದ ಪರಿಣಾಮ ವಿದೇಶ ಪ್ರವಾಸವಂತೂ ಕನಸಾಗಿ ಬಿಟ್ಟಿದೆ. ಆದರೆ ಇದೀಗ ಕರೊನಾ ಲಸಿಕೆಯ ಆಶಾವಾದದೊಂದಿಗೆ ಪ್ರವಾಸೋದ್ಯಮ ಮತ್ತೆ ಗರಿ ಬಿಚ್ಚುವ ಪ್ರಯತ್ನ ನಡೆಸಿದೆ.

blank

ಭಾರತದಲ್ಲಿ ಎಲ್ಲ ವಯಸ್ಕರಿಗೆ ಕರೊನಾ ಲಸಿಕಾ ಅಭಿಯಾನ ತೆರೆದುಕೊಂಡಿರುವ ಬೆನ್ನಲ್ಲೇ ಹೊಸ ರೀತಿಯ ಪ್ರವಾಸ ಯೋಜನೆಯನ್ನು ದುಬೈನ ಟ್ರಾವೆಲ್ ಏಜೆನ್ಸಿ ಒಂದು ರೂಪಿಸಿದೆ. ವ್ಯಾಕ್ಸಿನ್ ಟೂರಿಸಂ ಎಂದು ಕರೆಯಲ್ಪಡುತ್ತಿರುವ ಈ ವಿನ್ಯಾಸದಲ್ಲಿ ಭಾರತೀಯರನ್ನು ರಷ್ಯಾಗೆ ಕರೆದೊಯ್ಯುವ 25 ದಿನ 24 ರಾತ್ರಿಗಳ ಪ್ಯಾಕೇಜ್ ಟೂರ್​ ಸಿದ್ಧವಾಗಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಇದನ್ನೂ ಓದಿ: ದಂಪತಿ ಜಗಳ ಬಿಡಿಸಲು ಹೋಗಿ ಹೆಣವಾದ ಯುವಕ- ಆಸ್ಪತ್ರೆ ಬದಲು ಠಾಣೆಗೆ ಕರೆದೊಯ್ದ ಕುಟುಂಬಸ್ಥರು!

ರಷ್ಯಾಗೆ ಪ್ರಯಾಣ ಬೆಳೆಸಿ ಅಲ್ಲಿ ಎರಡು ಕರೊನಾ ಲಸಿಕೆ ಶಾಟ್​ಗಳನ್ನು ಪಡೆದು, ಹಾಗೇ 20 ದಿನಗಳ ವಿಹಾರ ನಡೆಸಿಕೊಂಡು ಬರುವುದು ಈ ಪ್ಯಾಕೇಜ್​ನ ಮುಖ್ಯಾಂಶ. ದೆಹಲಿಯಿಂದ ಮಾಸ್ಕೋಗೆ ಹೋದ ತಕ್ಷಣ ಮೊದಲನೇ ಡೋಸ್​ ಸ್ಲುಟ್ನಿಕ್ ವಿ ಲಸಿಕೆ ನೀಡುವುದು; ನಂತರದಲ್ಲಿ ಮಾಸ್ಕೊ ಮತ್ತು ಸೇಂಟ್​ ಪೀಟರ್ಸ್​ಬರ್ಗ್​​ನ ವಿವಿಧ ಪ್ರವಾಸೀ ತಾಣಗಳಿಗೆ ವಿಹಾರ ನಡೆಸುವುದು; ಕೊನೆಗೆ ಎರಡನೇ ಡೋಸ್ ಲಸಿಕೆ ನೀಡಿ ವಾಪಸ್​ ಭಾರತಕ್ಕೆ ಕಳುಹಿಸುವುದು ಈ ಟೂರ್​ನ ಸ್ವರೂಪವಾಗಿದೆ.

ಕೇವಲ 1.29 ಲಕ್ಷ ರೂಪಾಯಿಗೆ ಈ ಪ್ಯಾಕೇಜನ್ನು ರೂಪಿಸಲಾಗಿದ್ದು, ವಿಮಾನಯಾನ, ಊಟ, ವಾಸ, ವಿಹಾರ ಮತ್ತು ಲಸಿಕೆಯ ಖರ್ಚುಗಳೆಲ್ಲವನ್ನೂ ಕಂಪೆನಿಯೇ ಭರಿಸಲಿದೆ ಎನ್ನಲಾಗಿದೆ. ಈ ಪ್ಯಾಕೇಜ್​ ಟೂರ್​ಗೆ ಮೊದಲನೇ ಕಂತಿಗೆ 28 ಯಾತ್ರಿಗಳು ಅದಾಗಲೇ ಬುಕ್ಕಿಂಗ್ ಮಾಡಿದ್ದು, ಮೇ 29 ರಂದು ದೆಹಲಿಯಿಂದ ಮಾಸ್ಕೋಗೆ ತೆರಳಲಿದ್ದಾರೆ. ಮತ್ತೆ ಮುಂದಿನ ಬ್ಯಾಚ್​​ಗಳು ಜೂನ್ 7 ಮತ್ತು ಜೂನ್ 15 ರಂದು ತೆರಳಲಿವೆ ಎನ್ನಲಾಗಿದೆ. (ಏಜೆನ್ಸೀಸ್)

ಕೇಜ್ರಿವಾಲ್ ಮಾತಿಂದ ಸಿಂಗಾಪೂರ್ ಗರಂ : ‘ಭಾರತದ ಪರವಾಗಿ ಮಾತನಾಡುತ್ತಿಲ್ಲ’ ಎಂದು ಸಮಾಧಾನ ಮಾಡಿದ ವಿದೇಶಾಂಗ ಸಚಿವರು

VIDEO | ಸಂಗೀತ ನುಡಿಸುವ ಘೇಂಡಾಮೃಗ ನೋಡಿದ್ದೀರಾ ? ಇದೋ ಇಲ್ಲಿದೆ…

ಕೈ ಕತ್ತರಿಸಿ ಟ್ಯಾಬ್ಲೆಟ್, ಹಣ ಕಸಿದುಹೋದ ದುಷ್ಕರ್ಮಿಗಳು

Share This Article
blank

ಬಿಸಾಡುವ ಮುನ್ನ ತಿಳಿಯಿರಿ Watermelon Seeds ಪವರ್​​: ಇದರಲ್ಲಿದೆ 5 ನಂಬಲಾಗದ ಆರೋಗ್ಯ ಪ್ರಯೋಜನೆಗಳು

Watermelon Seeds: ಬೇಸಿಗೆಯಲ್ಲಿ ಬಿಸಿಲು ಜೋರಾದ ತಕ್ಷಣ ದೇಹವನ್ನು ತಂಪಾಗಿಸಲು ನಾವು ಹೆಚ್ಚಾಗಿ ಕಲ್ಲಂಗಡಿಯನ್ನು ಆಶ್ರಯಿಸುತ್ತೇವೆ.…

ಈ ಗಿಡಗಳನ್ನು ಬೆಳೆಸಿದರೆ ಸಾಕು, ನಿಮ್ಮ ಮನೆಗೆ ಒಂದೇ ಒಂದು ಸೊಳ್ಳೆಯೂ ಬರುವುದಿಲ್ಲ..Plants

Plants: ಮಳೆಗಾಲ ಬಂತೆಂದರೆ ಸಾಕು ಅನೇಕ ಜನರು ತಮ್ಮ ಮನೆಯಂಗಳದಲ್ಲಿ ವಿವಿಧ ಗಿಡಗಳನ್ನ ನೆಡಲು ಪ್ರಾರಂಭಿಸುತ್ತಾರೆ.…

blank