ಶನಿವಾರಸಂತೆ: ಕೊಡಗು-ಹಾಸನ ಜಿಲ್ಲಾ ಗಡಿ ಭಾಗದಲ್ಲಿರುವ ಇತಿಹಾಸ ಮತ್ತು ಜಾನಪದ ಸಂಸ್ಕೃತಿ ಹಿನ್ನೆಲೆಯುಳ್ಳ ಹೊಸೂರು ಗ್ರಾಮದ ಬೆಟ್ಟದ ಶ್ರೀ ಬಸವೇಶ್ವರ ಸ್ವಾಮಿಯ ಕೌಟೇಕಾಯಿ ಜಾತ್ರೆ ನ.25ರಂದು ಜರುಗಲಿದೆ.
ಅಂದು ಬೆಳಗ್ಗೆ 7 ಗಂಟೆಗೆ ಬೆಟ್ಟದ ಬಸವೇಶ್ವರಸ್ವಾಮಿ ದೇವಸ್ಥಾನದಲ್ಲಿ ವಿವಿಧ ಪೂಜಾ ವಿಧಿವಿಧಾನಗಳು ನೆರವೇರಿದ ನಂತರ ದೇವಸ್ಥಾನದ ಕೆಳ ಭಾಗದಲ್ಲಿರು ಸುಗ್ಗಿ ಕಟ್ಟೆವರೆಗೆ ದೇವರ ಅಡ್ಡಪಲ್ಲಕ್ಕಿ ಉತ್ಸವ ನಡೆಸಲಾಗುತ್ತದೆ. ಆನಂತರ ಬೆಟ್ಟದ ಮೇಲೆ ಜಾತ್ರೆ ನಡೆಸಲಾಗುತ್ತದೆ ಎಂದು ದೇವಸ್ಥಾನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಳಗ್ಗೆ 11 ಗಂಟೆಯಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ. ಶನಿವಾರಸಂತೆ ನಾಟ್ಯ ನಿಲಯಂ ನೃತ್ಯ ತರಬೇತಿ ಕೇಂದ್ರದ ನೃತ್ಯ ಕಲಾವಿದೆಯರಾದ ಜಾಹ್ನವಿ ಆಚಾರ್ಯ , ಗಾನವಿ ಆಚಾರ್ಯ ಸಹೋದರಿಯರಿಂದ ನೃತ್ಯ ವೈಭವ ಹಾಗೂ ಸಾಂಸ್ಕೃತಿಕ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸಮಾರೋಪ ಸಮಾರಂಭದಲ್ಲಿ ಶನಿವಾರಸಂತೆ ಭಾರತಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಎಂ.ಎನ್.ಹರೀಶ್ ಮುಖ್ಯ ಭಾಷಣ ಮಾಡಲಿದ್ದು ಸಕಲೇಶಪುರ ಶಾಸಕ ಸಿಮೆಂಟ್ ಮಂಜು, ಹೊಸೂರು ಗ್ರಾ.ಪಂ.ಅಧ್ಯಕ್ಷೆ ಮಂಜುಳಾ ಮಂಜುನಾಥ್, ಶನಿವಾರಸಂತೆ ಭಾರತಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ದಯಾನಂದ್, ಶನಿವಾರಸಂತೆ ವಿಘ್ನೇಶ್ವರ ಬಾಲಕಿಯರ ಪ.ಪೂ.ಕಾಲೇಜು ಪ್ರಾಂಶುಪಾಲ ಟಿ.ಪಿ.ಶಿವಪ್ರಕಾಶ್, ಪ್ರಮುಖರಾದ ಕುಮಾರಸ್ವಾಮಿ, ಗಂಗಾಧರ್, ಲಕ್ಷ್ಮಣ್, ಹರೀಶ್ ಲಕ್ಷ್ಮಣ್ ಎಚ್.ಎನ್.ದೇವರಾಜ್, ಶಿವರಾಜ್ ಇತರರು ಭಾಗವಹಿಸಲಿದ್ದಾರೆ ಎಂದು ದೇವಸ್ಥಾನ ಸಮಿತಿಯ ರಮೇಶ್ ತಿಳಿಸಿದ್ದಾರೆ.