25ರಂದು ಬೆಂಗಳೂರಲ್ಲಿ ಅಹೋರಾತ್ರಿ ಧರಣಿ ನಡೆಸುವುದಾಗಿ ರಾಜನಹಳ್ಳಿ ಶ್ರೀ ಹೇಳಿಕೆ

ಚಿತ್ರದುರ್ಗ:ಮೀಸಲು ಪ್ರಮಾಣ ಹೆಚ್ಚಳ ಬೇಡಿಕೆಯೊಂದಿಗೆ ರಾಜನಹಳ್ಳಿಯಿಂದ ಆರಂಭವಾಗಿರುವ ಪಾದಯಾತ್ರೆ ಜೂ.24ರಂದು ಬೆಂಗಳೂರು ತಲುಪಲಿದೆ. 25ರಂದು ಅಲ್ಲಿಯ ಸ್ವಾತಂತ್ರ್ಯೋ ದ್ಯಾನದಲ್ಲಿ ಅಹೋರಾತ್ರಿ ಧರಣಿ ನಡೆಸಲಾಗುವುದೆಂದು ಯಾತ್ರೆ ನೇತೃತ್ವ ವಹಿಸಿರುವ ರಾಜನಹಳ್ಳಿ ಶ್ರೀ ಪ್ರಸನ್ನಾನಂದ ವಾಲ್ಮೀಕಿ ಸ್ವಾಮೀಜಿ ಹೇಳಿದರು.

ಯಾತ್ರೆ 5ನೇ ದಿನ ಗುರುವಾರ ಚಿತ್ರದುರ್ಗದ ನಗರದ ಪ್ರಮುಖ ಬೀದಿಗಳ ಮೂಲಕ ಐಮಂಗಲ ಕಡೆಗೆ ಯಾತ್ರೆ ಆರಂಭವಾಗುವ ಮುನ್ನ ಮುರುಘಾ ಮಠದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಅಗತ್ಯ ಬಿದ್ದರೆ 17 ಶಾಸಕರ ಸಹಿತ ಹಲವು ಪರಿಶಿಷ್ಟ ಪಂಗಡದ ಜನಪ್ರತಿನಿಧಿಗಳು ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಹೋರಾಟಕ್ಕೆ ಕೈ ಜೋಡಿಸಲಿದ್ದಾರೆ ಎಂದರು.

ಈ ವೇಳೆ ಹಾಜರಿದ್ದ ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ,ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಹಾಗೂ ಸುರಪುರ ಶಾಸಕ ರಾಜುಗೌಡ ಮಾತನಾಡಿ,ಸಚಿವ ಸತೀಶ್ ಜಾರಕೀಹೊಳಿ ಹಾಗೂ ಶಾಸಕ ಶ್ರೀರಾಮುಲು ನೇತೃತ್ವದಲ್ಲಿ ಹೋರಾಟಕ್ಕೆ ಜನಪ್ರತಿನಿಧಿಗಳು ಅಣಿಯಾಗಿ ದ್ದೇವೆ. ಬೇಡಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ,19ರಂದು ಬೆಂಗಳೂರಲ್ಲಿ ಉನ್ನತ ಮಟ್ಟದ ಸಭೆ ಕರೆದಿದ್ದಾರೆ.

ಈಗಾಗಲೇ ಕೇಂದ್ರ ಸರ್ಕಾರ ಈಗಾಗಲೇ ಕೇಂದ್ರ ಸರ್ಕಾರ ಶೇ.7.5 ಮೀಸಲು ಕೊಟ್ಟಿದೆ. ರಾಜ್ಯಸರ್ಕಾರವೂ 58 ಸಮುದಾಯ ಗಳಿರುವ ಪರಿಶಿಷ್ಟ ಪಂಗಡಕ್ಕೆ ಉದ್ಯೋಗ,ಶಿಕ್ಷಣ ಹಾಗೂ ರಾಜಕೀಯ ಮೀಸಲನ್ನು ಶೇ.3ರಿಂದ 7.5ಕ್ಕೆ ಹೆಚ್ಚಿಸ ಬೇಕಿದೆ. ಈ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಆದೇಶ ಮಾನ್ಯ ಮಾಡದ ರಾಜ್ಯಸರ್ಕಾರ ವಿರುದ್ಧ ಈಗಾಗಲೇ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಿದ್ದೇವೆ ಎಂದು ರಾಜುಗೌಡ ಹೇಳಿದರು.

ಡಾ.ಶಿವಮೂರ್ತಿ ಮುರುಘಾ ಶರಣರು ಮಾತನಾಡಿ,ರಾಜ್ಯ ಸರ್ಕಾರ ಈ ಬಗ್ಗೆ ಮೀನಮೇಷ ಎಣಿಸದೆ ಮೀಸಲು ಪ್ರಮಾಣ ಹೆಚ್ಚಿಸಬೇಕೆಂದರು. ಈ ಬೇಡಿಕೆ ನ್ಯಾಯೋಚಿತವಾಗಿದ್ದು,ಪಾದಯಾತ್ರೆ ತುಮಕೂರು ದಾಟುವುದರೊಳಗೆ ರಾಜ್ಯಸರ್ಕಾರ ಸಕರಾತ್ಮಕ ನಿರ್ಣಯ ತೆಗೆದುಕೊಳ್ಳಬಹುದೆಂದು ಆಶಿಸಿದರು.

ಮಾಜಿ ಶಾಸಕ ಉಮಾಪತಿ, ಭೋವಿಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಶ್ರೀ ಕೇತೇಶ್ವರ ಸ್ವಾಮೀಜಿ, ನಗರಸಭೆ ಮಾಜಿ ಅಧ್ಯಕ್ಷರಾದ ಕೃಷ್ಣಮೂರ್ತಿ, ಕಾಂತರಾಜ್ ಮೊದಲಾದ ಪ್ರಮುಖರು ಇದ್ದರು.

ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಮೂಲಕ ಸಾಗಿದ್ದು,ನಗರದಲ್ಲಿರುವ ಮದಕರಿ ನಾಯಕರ, ಅಂಬೇಡ್ಕರ್ ಹಾಗೂ ವಾಲ್ಮೀಕಿ ಪುತ್ಥಳಿಗೆ ರಾಜನಹಳ್ಳಿ ಶ್ರೀಗಳು ಹಾಗೂ ಗಣ್ಯರು ಮಾರ್ಲಾಪಣೆ ಮಾಡಿದರು. ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮೊದಲಾದ ಗಣ್ಯರು ಇದ್ದರು. ದಾರಿಯುದ್ದಕ್ಕೂ ಅನೇಕ ಕಡೆ ಭಕ್ತರು ಸ್ವಾಮೀಜಿಗೆ ಮಾಲಾರ್ಪಣೆ ಮಾಡಿ ಬರ ಮಾಡಿಕೊಳ್ಳುತ್ತಿದ್ದರು.

Leave a Reply

Your email address will not be published. Required fields are marked *