ಚಿಟಗುಪ್ಪ: ಕನ್ನಡ ಭಾಷೆಗೆ ತನ್ನದೇ ಆದ ಐತಿಹಾಸಿಕ ಪರಂಪರೆ, ಶ್ರೀಮಂತಿಕೆ ಇದೆ. ಈ ನೆಲದಲ್ಲಿ ವಾಸಿಸುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾತೃಭಾಷೆ ಕಲಿಯುವ ಮೂಲಕ ಕನ್ನಡ ಉಳಿಸಿ ಬೆಳೆಸಲು ಮುಂದಾಗಬೇಕೆಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಕರೆ ನೀಡಿದರು.
ಪಟ್ಟಣದ ಶ್ರೀ ಭವಾನಿ ಮಂದಿರದಲ್ಲಿ ಶನಿವಾರ ಆಯೋಜಿಸ್ದಿ ಎರಡನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದ ಅವರು, ಕನ್ನಡ ಭಾಷೆಗೆ ಮೊದಲ ಆದ್ಯತೆ ಸಿಗುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್‌ಗೆ ನಾವೆಲ್ಲರೂ ಸಾಥ್ ನೀಡಬೇಕು ಎಂದರು.
ಕ್ಷೇತ್ರದಲ್ಲಿ ಕನ್ನಡ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಎರಡು ವರ್ಷದಲ್ಲಿ ಸುಮಾರು ೨೫ ಕೋಟಿ ರೂ. ಒದಗಿಸಲಾಗಿದೆ. ಕನ್ನಡ ಭವನ ನಿರ್ಮಾಣಕ್ಕೆ ಹುಮನಾಬಾದ್‌ನಲ್ಲಿ ಸರ್ಕಾರದಿಂದ ನಿವೇಶನ ದೊರಕಿದ್ದು, ತಮ್ಮ ಅನುದಾನದಲ್ಲಿ ೧೦ ಲಕ್ಷ ರೂ. ನೀಡುವುದರ ಜತೆಗೆ ಇಲ್ಲೂ ನಿವೇಶನ ಸಿಕ್ಕಲ್ಲಿ ೧೦ ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದರು.
ಕನ್ನಡಕ್ಕಾಗಿ ಶ್ರಮಿಸಿದ ಹಿರಿಯ ಜೀವಿ ಮಹಾರುದ್ರಪ್ಪ ಆಣದೂರೆ ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲï ಮಾತನಾಡಿ, ನಮ್ಮೆಲ್ಲರ ಉಸಿರು ಕನ್ನಡವಾಗಿರಬೇಕು. ತಾಯಿ ಭಾಷೆಗೆ ಮೊದಲ ಆದ್ಯತೆ ಸಿಗಬೇಕು. ಕನ್ನಡದಲ್ಲಿ ಶಿಕ್ಷಣ ಪಡೆದ ಸಾಕಷ್ಟು ಜನರು ಉನ್ನತೆ ಹುz್ದೆ, ಸ್ಥಾನಮಾನಗಳಲ್ಲಿ ಸಾಧನೆ ಮಾಡಿದ್ದಾರೆ. ನಾವೇ ಆರಂಭದಲ್ಲಿ ಕನ್ನಡ ಕಲಿಯದ್ದರಿಂದ ಇಂದು ಮಾತನಾಡಲು ತೊಂದರೆ ಎದುರಿಸುತ್ತಿದ್ದೇವೆ. ಕಾರಣ ಪ್ರತಿಯೊಬ್ಬರೂ ಕನ್ನಡ ಭಾಷೆಯಲ್ಲೇ ಆರಂಭಿಕ ಶಿಕ್ಷಣ ಪಡೆಯಬೇಕು ಎಂದು ಸಲಹೆ ನೀಡಿದರು.
ಕಲ್ಯಾಣ ಕರ್ನಾಟಕಕ್ಕೆ ರಾಜ್ಯ ಸರ್ಕಾರ ನೀಡುತ್ತಿರುವ ೫೦೦೦ ಕೋಟಿ ರೂ.ಗಳಲ್ಲಿ ೧೨೫೦ ಕೋಟಿ ಕನ್ನಡ ಶಾಲೆಗಳಿಗೆ ಮೂಲಸೌಲಭ್ಯ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಮಾತನಾಡಿ, ಕನ್ನಡ ನಾಡು ನುಡಿ ರಕ್ಷಣೆಗೆ ಎಲ್ಲರೂ ಬದ್ಧರಾಗಿರಬೇಕು. ರಾಜ್ಯ ಹಾಗೂ ಜಿಲ್ಲಾ ಸಮ್ಮೇಳನಕ್ಕೆ ಅನುದಾನ ಒದಗಿಸುವಂತೆ ತಾಲೂಕು ಸಮ್ಮೇಳನಕ್ಕೂ ಪ್ರತ್ಯೇಕ ಅನುದಾನ ಒದಗಿಸಲು, ೩೭೧(ಜೆ) ಸಮರ್ಪಕ ಅನುಷ್ಠಾನದಲ್ಲಿನ ಅಡತಡೆ ನಿವಾರಿಸಲು ಈ ಭಾಗದ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು. ಇಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ತಮ್ಮ ಅನುದಾನದಲ್ಲಿ ೫ ಲಕ್ಷ ರೂ. ಒದಗಿಸುವುದಾಗಿ ಭರವಸೆ ನೀಡಿದರು.
ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಆಶಯ ನುಡಿಗಳನ್ನಾಡಿ, ಪರಿಷತ್ ನಿರಂತರ ಕನ್ನಡ ನಾಡು ನುಡಿಗಾಗಿ ಶ್ರಮಿಸುತ್ತಿದೆ. ಕನ್ನಡ ತೇರನ್ನು ಎಲ್ಲರೂ ಸೇರಿ ಸಂಭ್ರಮದಿಂದ ಎಳೆಯೋಣ ಎಂದು ಹೇಳಿದರು.
ಸಮ್ಮೇಳನಾಧ್ಯಕ್ಷ ಸಾಹಿತಿ ಮಹಾರುದ್ರಪ್ಪ ಆಣದೂರೆ ಸರ್ವಾಧ್ಯಕ್ಷೀಯ ಭಾಷಣ ಮಾಡಿದರು. ನಿಕಟಪೂರ್ವ ಸರ್ವಾಧ್ಯಕ್ಷ ಮಹಾದೇವಪ್ಪ ಉಪ್ಪಿನ, ಪ್ರಮುಖರಾದ ಮಲ್ಲಿಕಾರ್ಜುನ ಪಾಟೀಲ್, ರಾಜಕುಮಾರ ಬೇಲೂರೆ, ರವೀಂದ್ರರೆಡ್ಡಿ, ರವಿ ಸ್ವಾಮಿ, ಗಿರೀಶ ಕಡ್ಲೇವಾಡ, ರಾಜಶೇಖರ ಉಪ್ಪಿನ, ಅಶೋಕ ಮಹೇಂದ್ರಕರ, ರಾಜಪ್ಪ ಜಮಾದಾರ, ಗುಂಡಪ್ಪ ಹುಡಗೆ, ಪಂಡಿತ ಕಲ್ಯಾಣ, ಸುರೇಂದ್ರನಾಥ ಹುಡಗಿಕರ, ವೀರೇಶ ತೂಗಾಂವ ಇತರರಿದ್ದರು.
ಕಸಾಪ ತಾಲೂಕು ಅಧ್ಯಕ್ಷ ರಮೇಶ ಸಲಗರ ಸ್ವಾಗತಿಸಿದರು. ರೇವಶೆಟ್ಟಿ ತಂಗಾ ನಿರೂಪಣೆ ಮಾಡಿದರು. ಎನ್.ಎಸ್. ಮಲಶೆಟ್ಟಿ ವಂದಿಸಿದರು. ವಿಶೇಷ ಉಪನ್ಯಾಸ, ವಿಚಾರ ಗೋಷ್ಠಿ, ಕವಿಗೋಷ್ಠಿ, ಬಹಿರಂಗ ಅಧಿವೇಶನ ಜರುಗಿದವು.
ಪಟ್ಟಣಕ್ಕೆ ಮೂಲಸೌಲಭ್ಯ ಒದಗಿಸಿ: ನೂತನ ಚಿಟಗುಪ್ಪ ತಾಲೂಕು ಕೇಂದ್ರದಲ್ಲಿ ಎಲ್ಲ ತಾಲೂಕು ಮಟ್ಟದ ಸರ್ಕಾರಿ ಕಚೇರಿ, ಕಟ್ಟಡ ಸೇರಿ ಮೂಲಸೌಲಭ್ಯ ಒದಗಿಸಿಕೊಡಲು ಸರ್ಕಾರ ಗಮನಹರಿಸಬೇಕೆಂದು ಸರ್ವಾಧ್ಯಕ್ಷ ಮಹಾರುದ್ರಪ್ಪ ಆಣದೂರೆ ಒತ್ತಾಯಿಸಿದರು. ಅಧ್ಯಕ್ಷೀಯ ಭಾಷಣ ಮಾಡಿದ ಅವರು, ಹೈದರಾಬಾದ್ ನಿಜಾಮ ಆಡಳಿತದಲ್ಲಿ ಪೈಗಾ (ಜಿಲ್ಲಾ) ಕೇಂದ್ರವಾಗಿದ್ದ ಚಿಟಗುಪ್ಪ ತನ್ನದೇ ಆದ ವೈಶಿಷ್ಟ್ಯ ಹೊಂದಿದೆ. ಅನೇಕ ಸ್ವತಂತ್ರ ಸೇನಾನಿಗಳಿಗೆ ಜನ್ಮ ನೀಡಿದ ಈ ಭೂಮಿ ಎಲ್ಲ ಧರ್ಮೀಯರ ಭಾವೈಕ್ಯದ ತಾಣವಾಗಿದೆ. ಶೈಕ್ಷಣಿಕ, ವ್ಯಾಪಾರ ಕೇಂದ್ರವಾಗಿರುವ ಇಲ್ಲಿ ಸುಮಾರು ೨೫ ವರ್ಷಗಳಿಂದ ನಿರಂತರ ಸಾಹಿತ್ಯ ಸಮ್ಮೇಳನ ನಡೆಸಿಕೊಂಡು ಬರಲಾಗಿದೆ. ಒಟ್ಟಿನಲ್ಲಿ ಚಿಟಗುಪ್ಪ ಧಾರ್ಮಿಕ, ಸಾಹಿತ್ಯಿಕ, ಕಲೆ, ಶೈಕ್ಷಣಿಕ, ರಾಜಕೀಯ ಹೀಗೆ ಎಲ್ಲ ರಂಗಗಳಲ್ಲಿ ತೊಡಗಿಸಿಕೊಂಡಿರುವುದು ಸಂತಸದ ವಿಷಯ. ನಿರಂತರ ಕನ್ನಡಮ್ಮನ ರಥ ಎಳೆಯಲು ನಾವೆಲ್ಲರೂ ಪಣ ತೊಡಬೇಕು. ಕನ್ನಡ ನಾಡು ನುಡಿ ರಕ್ಷಣೆಗೆ ಬದ್ಧರಾಗೋಣ ಎಂದು ಕರೆ ನೀಡಿದರು.
ಅಲಂಕೃತ ಸಾರೋಟಿನಲ್ಲಿ ಭವ್ಯ ಮೆರವಣಿಗೆ: ಸಮ್ಮೇಳನ ನಿಮಿತ್ತ ಅಲಂಕೃತ ಸಾರೋಟಿನಲ್ಲಿ ನಾಡದೇವಿ ಭುವನೇಶ್ವರಿ ಭಾವಚಿತ್ರದೊಂದಿಗೆ ಸರ್ವಾಧ್ಯಕ್ಷ ಮಹಾರುದ್ರಪ್ಪ ಆಣದೂರೆ ಅವರ ಭವ್ಯ ಮೆರವಣಿಗೆ ನಡೆಯಿತು. ಬಿಎಸ್‌ಎಸ್‌ಕೆ ನಿರ್ದೇಶಕ ಮಲ್ಲಿಕಾರ್ಜುನ ಪಾಟೀಲï ಚಾಲನೆ ನೀಡಿದರು. ಪ್ರಮುಖ ರಸ್ತೆ ಮೂಲಕ ಸಮ್ಮೇಳನ ಸ್ಥಳದವರೆಗೆ ಸಾಗಿತು. ಕಲಾ ತಂಡಗಳ ಪ್ರದರ್ಶನ, ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ, ಕನ್ನಡಾಭಿಮಾನಿಗಳ ಕುಣಿತ ಕಣ್ಮನ ಸೆಳೆದವು.