ಟಿಕ್​ಟಾಕ್​ ಗೀಳಿಗೆ ಬಲಿಯಾಯ್ತು ಮತ್ತೊಂದು ಜೀವ: ಸೋದರ ಸಂಬಂಧಿ ಮುಂದೆಯೇ ಪ್ರಾಣಬಿಟ್ಟ ಯುವಕ

ಹೈದರಾಬಾದ್​: ಮೊಬೈಲ್​ ಆ್ಯಪ್​ ಟಿಕ್​​ಟಾಕ್​ ಗೀಳಿಗೆ ಬಿದ್ದು ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಇದೀಗ ಮತ್ತೊಂದು ಪ್ರಕರಣ ದಾಖಲಾಗಿದ್ದು, ಕೆರೆಯೊಂದರಲ್ಲಿ ಸ್ನಾನ ಮಾಡುತ್ತಿದ್ದ ಇಬ್ಬರು ಯುವಕರಲ್ಲಿ ಓರ್ವ ನೀರಿನಲ್ಲಿ ಮುಳುಗಿ ದುರಂತ ಸಾವಿಗೀಡಾಗಿರುವ ಘಟನೆ ಹೈದರಾಬಾದ್​ನ ಹೊರವಲಯದಲ್ಲಿ ನಡೆದಿದೆ.

ನರಸಿಂಹಲು(24) ಮೃತ ದುರ್ದೈವಿ. ಕೆರೆಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಆಳವಾದ ಜಾಗಕ್ಕೆ ತೆರಳಿದ್ದರಿಂದ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಇಬ್ಬರು ಸ್ನಾನ ಮಾಡುತ್ತಿದ್ದ ವೇಳೆ ಮೃತ ಯುವಕನ ಸೋದರ ಸಂಬಂಧಿ ಟಿಕ್​ಟಾಕ್​ ಆ್ಯಪ್​ ಮೂಲಕ ವಿಡಿಯೋ ರೆಕಾರ್ಡ್​ ಮಾಡುತ್ತಿದ್ದ. ಮಂಗಳವಾರ ಸಂಜೆ ಈ ಅವಘಡ ಸಂಭವಿಸಿದೆ.

ಮೃತ ಯುವಕನಿಗೆ ಈಜು ಬರದ ಕಾರಣ ನೀರಿನಲ್ಲಿ ಮುಳುಗಿದ್ದಾನೆ. ತಕ್ಷಣ ಗಾಬರಿಗೊಂಡ ಆತನ ಸೋದರ ಸಂಬಂಧಿ ಸ್ಥಳೀಯರಿಗೆ ಮಾಹಿತಿ ನೀಡಿ ಘಟನಾ ಸ್ಥಳಕ್ಕೆ ಕರೆದುಕೊಂಡು ಬರಲು, ಮೃತ ಯುವಕನ ದೇಹವನ್ನು ಸ್ಥಳೀಯರು ಹೊರ ತೆಗೆದಿದ್ದಾರೆ.

ವೈರಲ್​ ಆಗಿರುವ ವಿಡಿಯೋದಲ್ಲಿ ಘಟನೆಗೂ ಮುನ್ನ ಇಬ್ಬರು ಯುವಕರು ನೀರಿನಲ್ಲಿ ಸ್ನಾನ ಮಾಡುತ್ತಾ ಡ್ಯಾನ್ಸ್​ ಮಾಡುತ್ತಿರುವುದು ದಾಖಲಾಗಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *