2 ತಿಂಗಳಲ್ಲೇ ಕರಾವಳಿಯಲ್ಲಿ 2,306 ಮಿಮೀ ಮಳೆ

ಬೆಂಗಳೂರು: ಎರಡು ತಿಂಗಳಲ್ಲೇ ಕರಾವಳಿ ವ್ಯಾಪ್ತಿಯ ಉಡುಪಿ, ದಕ್ಷಿಣ, ಕನ್ನಡ, ಉತ್ತರ ಕನ್ನಡದಲ್ಲಿ ಬರೋಬ್ಬರಿ 2,306 ಮಿಮೀ, ಮಲೆನಾಡು ಭಾಗದ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗಿನಲ್ಲಿ 1,110 ಮಿಮೀ ಮಳೆಯಾಗಿದೆ. ಇದು 3 ವರ್ಷಗಳಲ್ಲೇ ವಾಡಿಕೆಗಿಂತ ಅಧಿಕ ಮಳೆ ಬಿದ್ದಿದೆ.

ಜೂ.1ರಿಂದ ಜು.27ರವರೆಗೆ ಕರಾವಳಿಯಲ್ಲಿ 1,834 ಮಿಮೀ ಮಳೆ ಬೀಳಬೇಕಿತ್ತು. 2,306 ಮಿಮೀ ಸುರಿದಿದ್ದು, ವಾಡಿಕೆಗಿಂತ ಶೇ.26ರಷ್ಟು ಹೆಚ್ಚು ಪ್ರಮಾಣದಲ್ಲಿ ವರ್ಷಧಾರೆಯಾಗಿದೆ. ಅದೇರೀತಿ, ಮಲೆನಾಡು ಭಾಗದಲ್ಲಿ 878 ಮಿಮೀ ಮಳೆ ಬದಲಾಗಿ 1,110 ಮಿಮೀ ಸುರಿದಿದ್ದು, ವಾಡಿಕೆಗಿಂತ ಶೇ.26ರಷ್ಟು ಅಧಿಕವಾಗಿ ಮಳೆಯಾಗಿದೆ. ದಕ್ಷಿಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ವಾಡಿಕೆಯಂತೆ 134 ಮಿಮೀ ಮಳೆ ಸುರಿಯಬೇಕಿತ್ತು. 195 ಮಿಮೀ ಬಿದ್ದಿದ್ದು,ವಾಡಿಕೆಗಿಂತ ಶೇ.46ರಷ್ಟು ಸುರಿದಿದೆ. ಉತ್ತರ ಕರ್ನಾಟಕದಲ್ಲಿ ವಾಡಿಕೆಯಂತೆ 204 ಮಿಮೀ ಮಳೆಯಾಗಬೇಕಿತ್ತು. 274 ಮಿಮೀ ಬಿದ್ದಿದೆ. ವಾಡಿಕೆಗಿಂತ ಶೇ.35 ಜಾಸ್ತಿ ಪ್ರಮಾಣದಲ್ಲಿ ವರ್ಷಧಾರೆಯಾಗಿದೆ.

ಯಾವ್ಯಾವ ಜಿಲ್ಲೆಗಳಲ್ಲಿ ಹೆಚ್ಚು ಮಳೆ
ಜೂ 1ರಿಂದ ಜು.27ರವರೆಗೆ ಉಡುಪಿ, ದಣ ಕನ್ನಡ, ಉತ್ತರ ಕನ್ನಡ,ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು, ಬೆಂಗಳೂರು, ಬೆಂ.ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಚಾಮರಾಜನಗರ, ಮೈಸೂರು, ಮಂಡ್ಯ, ಬಳ್ಳಾರಿ, ರಾಯಚೂರು, ವಿಜಯಪುರ, ಬಾಗಲಕೋಟೆ, ಬೆಳಗಾವಿ ಸೇರಿ 22 ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ವರ್ಷಧಾರೆಯಾಗಿರುವುದು ಗಮನಾರ್ಹ. 9 ಜಿಲ್ಲೆಗಳಲ್ಲಿ ವಾಡಿಕೆಯಷ್ಟೇ ಸುರಿದಿದೆ. ಈ ಅವಧಿಯಲ್ಲಿ ಒಂದೂ ಜಿಲ್ಲೆಗಳೂ ಮಳೆ ಕೊರತೆ ಅನುಭವಿಸಿಲ್ಲ.

ಮಳೆ ದಿನ ಬದಲಾವಣೆ
ಐದು ವರ್ಷಗಳಿಂದ ಜೂನ್​ ಮತ್ತು ಜುಲೈನಲ್ಲಿ ಮಳೆ ಕುಂಠಿತವಾಗುತ್ತಿತ್ತು. ಆರಂಭದಲ್ಲೇ ಮುಂಗಾರು ಕೈಕೊಟ್ಟ ಪರಿಣಾಮ ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿ ಆಹಾರ ಉತ್ಪಾದನೆ ಕುಸಿತವಾಗುತ್ತಿತ್ತು. ಈ ಬಾರಿ ಜೂನ್​ ಮತ್ತು ಜುಲೈನಲ್ಲಿ ಉತ್ತಮ ಮಳೆ ಬೀಳುತ್ತಿದೆ. ಐದು ವರ್ಷಗಳ ಅಂಕಿ ಅಂಶ ಗಮನಿಸಿದರೆ ಮಳೆ ಅವಧಿಯ ದಿನಗಳು ಬದಲಾಗುತ್ತಿವೆ. ಜೂನ್​ನಲ್ಲಿ ಬೀಳುತ್ತಿರುವ ಮಳೆ ಜುಲೈನಲ್ಲಿ, ಆಗಸ್ಟ್​ನಲ್ಲಿ ಬೀಳುತ್ತಿರುವ ಮಳೆ ಜುಲೈನಲ್ಲಿ, ಸೆಪ್ಟೆಂಬರ್​ನಲ್ಲಿ ಬೀಳುವ ಮಳೆ ಆಗಸ್ಟ್​ನಲ್ಲಿ ಸುರಿಯುತ್ತಿದೆ. ಒಂದು ದಿನದಲ್ಲಿ ಸುರಿಯುವ ಮಳೆ ಒಂದೇ ಗಂಟೆಯಲ್ಲಿ, ವಾರದಷ್ಟು ಸುರಿಯುವ ಮಳೆ ಒಂದೇ ದಿನದಲ್ಲಿ ಸುರಿಯುತ್ತಿದೆ.ಹೀಗಾಗಿ, ಹವಾಮಾನ ವೈಪರಿತ್ಯದಿಂದಾಗಿ ದೇಶದ ಆರ್ಥಿಕತೆಗೆ ಹೊಡೆತ ಬೀಳುತ್ತಿದೆ.

ಮಾಸ್​ ಮಹಾರಾಜ ರವಿತೇಜ ಮಗಳು ಹೇಗಿದ್ದಾರೆ ಗೊತ್ತಾ? ಯಾವ ಹೀರೋಯಿನ್​ಗೂ​ ಕಮ್ಮಿ ಇಲ್ಲ ಮೋಕ್ಷದಾ!

ಕಣ್ಮನ ಸೆಳೆಯುತ್ತಿವೆ ಜಲಾಶಯಗಳು
ರಾಜ್ಯದಲ್ಲಿ ಈ ಬಾರಿ ಮುಂಗಾರು ಉತ್ತಮವಾಗಿರುವ ಕಾರಣ ಹಳ್ಳಕೊಳ್ಳ, ನದಿಗಳು ಮೈದುಂಬಿ ಹರಿಯುತ್ತಿವೆ. ಜಲಾಶಯಗಳಿಗೆ ಬೇಗನೇ ತುಂಬಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ರಾಜ್ಯದ ಪ್ರಮುಖ ನದಿಗಳ ಉಗಮ ಸ್ಥಾನಗಳಾದ ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಭಾರಿ ವರ್ಷಧಾರೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ನದಿಗಳು ಭರ್ತಿಯಾಗಿವೆ. ರಾಜ್ಯದ ಪ್ರಮುಖ 14 ಜಲಾಶಯಗಳಿಗೆ ಅಧಿಕ ನೀರು ಸಂಗ್ರಹವಾಗಿದೆ. ಕಾವೇರಿ ಕಣಿವೆಯಲ್ಲಿ ಉತ್ತಮ ಮಳೆಯಿಂದಾಗಿ ಕೆಆರ್​ಎಸ್​, ಹಾರಂಗಿ, ಹೇಮಾವತಿ, ಕಬಿನಿ ಜಲಾಶಯಗಳಲ್ಲೂ ತುಂಬಿವೆ. ಲಿಂಗನಮಕ್ಕಿ, ಸೂಪಾ, ವರಾಹಿ, ತುಂಗಭದ್ರಾ, ಮಲಪ್ರಭಾ, ಟಪ್ರಭಾ, ಆಲಮಟ್ಟಿ, ಭದ್ರಾ, ವಾಣಿವಿಲಾಸ ಸಾಗರ, ನಾರಾಯಣಪುರ ಜಲಾಶಯಗಳಲ್ಲೂ ಬೋರ್ಗರೆಯುತ್ತಿವೆ.

ಮಳೆ ತುಸು ಕ್ಷೀಣ
ಹಲವು ದಿನಗಳಿಂದ ಅಬ್ಬರಿಸುತ್ತಿದ್ದ ಮಳೆ ಕರಾವಳಿ, ಮಲೆನಾಡು ಸೇರಿ ರಾಜ್ಯದಲ್ಲಿ ಇಳಿಮುಖವಾಗಿದೆ. ಪ್ರಸ್ತುತ ಹವಾಮಾನ ಸ್ಥಿತಿ ಗಮನಿಸಿದರೆ ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕದ ವ್ಯಾಪ್ತಿಯ ಪ್ರದೇಶಗಳಲ್ಲಿ ಈಗಾಗಲೇ ಮಳೆ ಇಳಿಮುಖವಾಗಿದೆ. ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಭಾನುವಾರದಿಂದ ಕಡಿಮೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

Share This Article

ಪುರುಷರೇ ಎಡಗೈ, ಮಹಿಳೆಯರ ಬಲ ಅಂಗೈ ತುರಿಕೆಯಾದ್ರೆ ಕಾದಿದೆ ಈ ಗಂಡಾಂತರ!

ಬೆಂಗಳೂರು: ಅಂಗೈ ತುರಿಕೆಯಾಗಿದೆ ಎಂದರೆ ಹಣ ಬರುತ್ತದೆ ಎಂದು ಹಲವರು ಹೇಳುತ್ತಾರೆ. ಕೆಲವರು ಹಣ ಕಳೆದುಕೊಳ್ಳುತ್ತಿದ್ದಾರೆ…

ಈ ದಿನಾಂಕದಂದು ಜನಿಸಿದವರು ಜೀವನದಲ್ಲಿ ರಾಜರಂತೆ ಬದುಕುತ್ತಾರೆ… ನೀವೂ ಇದೇ ದಿನ ಹುಟ್ಟಿದ್ದೀರಾ ನೋಡಿ!

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಈ ಮೂರು ಕೆಲಸಗಳನ್ನು ಮಾಡಿದ ನಂತರ ಹಲ್ಲುಜ್ಜಬೇಡಿ! ಅನಾರೋಗ್ಯಕ್ಕೊಳಗಾಗುವುದು ಖಂಡಿತ..

ಬೆಂಗಳೂರು: ಬಾಯಿಯನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು ಆರೋಗ್ಯಕ್ಕೆ ಬಹಳ ಮುಖ್ಯ. ಸೂಕ್ಷ್ಮಜೀವಿಗಳು ಬಾಯಿಯ ಮೂಲಕ ಹೊಟ್ಟೆಯನ್ನು ಪ್ರವೇಶಿಸುತ್ತವೆ. ಇದು…