ಯುಪಿಎಸ್ಸಿಯಲ್ಲಿ 93ನೇ ರ‍್ಯಾಂಕ್ ಪಡೆದ ಬೆನ್ನಲ್ಲೇ ಪೊಲೀಸ್​ ಠಾಣೆ ಮೆಟ್ಟಿಲೇರಿದ ಮಾಡೆಲ್​!​

blank

ಮುಂಬೈ: ಕೆಲ ದಿನಗಳ ಹಿಂದಷ್ಟೇ ಪ್ರಕಟವಾದ 2019ನೇ ಸಾಲಿನ ಯುಪಿಎಸ್ಸಿ ಪರೀಕ್ಷಾ ಫಲಿತಾಂಶದಲ್ಲಿ 93ನೇ ರ್ಯಾಂಕ್​ ಪಡೆದ ಬೆನ್ನಲ್ಲೇ ಪ್ರಸಿದ್ಧಿ ಪಡೆದಿರುವ ಮಿಸ್​ ಇಂಡಿಯಾ ಫೈನಲಿಸ್ಟ್​ ಐಶ್ವರ್ಯಾ ಶಿಯೋರನ್​ ಇದೀಗ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾರೆ.

ತಮ್ಮ ಹೆಸರಿನಲ್ಲಿ 20 ನಕಲಿ ಇನ್​ಸ್ಟಾಗ್ರಾಂ ಖಾತೆಗಳಿರುವುದು ಗೊತ್ತಾದ ಬೆನ್ನಲ್ಲೇ ಶಾಕ್​ ಆಗಿರುವ ಐಶ್ವರ್ಯಾ ನಕಲಿ ಖಾತೆ ತೆರೆದವರ ವಿರುದ್ಧ ಮುಂಬೈನ ಕೊಲಬಾ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲಿಸಿದ್ದಾರೆ.

ಇದನ್ನೂ ಓದಿ: ದೇವೇಗೌಡರೇ, ನೀವು ಕ್ಷಮೆ ಕೇಳುವುದು ನಮಗೆ ಮುಜುಗರ… ಎಂದ ಜೆಡಿಎಸ್​ ಕಾರ್ಯಕರ್ತ

ಫೋಟೋ ಶೇರಿಂಗ್​ ವೇದಿಕೆ ಇನ್​ಸ್ಟಾಗ್ರಾಂನಲ್ಲಿ ಐಶ್ವರ್ಯಾ ಒಪ್ಪಿಗೆ ಇಲ್ಲದೆಯೇ ಅನೇಕ ಫೋಟೋಗಳು ಶೇರ್​ ಆಗಿವೆ. ಅನೇಕ ಬ್ಯೂಟಿ ಸ್ಪರ್ಧೆಗಳಲ್ಲಿ ಭಾಗವಹಿಸಿರುವ ಐಶ್ವರ್ಯಾ, ಇದುವರೆಗೂ ನನ್ನ ಹೆಸರಿನಲ್ಲಿ ಯಾವುದೇ ಇನ್​ಸ್ಟಾಗ್ರಾಂ ಖಾತೆಯನ್ನು ಹೊಂದಿಲ್ಲ ಎಂದು ಪೊಲೀಸರಿಗೆ ತಿಳಿಸಿದ್ದಾರೆ.

ಅಂದಹಾಗೆ ಐಶ್ವರ್ಯಾ 2017ರಿಂದ ಕೊಲಬಾದಲ್ಲಿರುವ ಕಾಲನಿಯಲ್ಲಿರುವ ಆರ್ಮಿ ಆಫೀಸರ್​ ಕಾಲನಿಯಲ್ಲಿ ಕುಟುಂಬದೊಂದಿಗೆ ನೆಲೆಸಿದ್ದಾರೆ. ಅವರ ತಂದೆ ಕರ್ನಲ್​ ಅಜಯ್​ಕುಮಾರ್​ ಶಿಯೋರನ್​ ಕರೀಮ್​ನಗರದಲ್ಲಿ ತೆಲಂಗಾಣ ಬೆಟಾಲಿಯನ್​ನ ಕಮಾಂಡಿಂಗ್​ ಅಧಿಕಾರಿಯಾಗಿದ್ದಾರೆ.

ನಕಲಿ ಇನ್​ಸ್ಟಾಗ್ರಾಂ ಖಾತೆ ತೆರೆದಿರುವುದು ಗಂಭೀರ ವಿಚಾರವಲ್ಲ. ಆದರೆ, ಭವಿಷ್ಯದಲ್ಲಿ ಇದೇ ದುರ್ಬಳಕೆ ಆಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಯುವತಿಯ ಬಣ್ಣದ ಮಾತು ನಂಬಿದ ನಿವೃತ್ತ ವೈದ್ಯರಿಬ್ಬರಿಗೆ ಕಾದಿತ್ತು ಬಿಗ್​ ಶಾಕ್​!

ಸಂದರ್ಶನವೊಂದರಲ್ಲಿ ನನ್ನ ಇನ್​​ಸ್ಟಾಗ್ರಾಂ ಖಾತೆ ಬಗ್ಗೆ ಹೇಳಿದರು. ಯಾವುದೇ ಖಾತೆಯನ್ನು ಹೊಂದಿರದ ನನಗೆ ಅವರು ಹೇಳಿದ್ದನ್ನು ಕೇಳಿ ಶಾಕ್​ ಆಯಿತು. ಬಳಿಕ ಪರಿಶೀಲಿಸುವಂತೆ ನನ್ನ ಸಹೋದರಿಗೆ ಹೇಳಿದೆ. ಆಗ ನನ್ನ ಹೆಸರಿನಲ್ಲಿ 20 ನಕಲಿ ಖಾತೆ ಇರುವುದು ಬೆಳಕಿಗೆ ಬಂತು. ಅನೇಕ ಖಾತೆಗಳು ಅಧಿಕೃತ ಎಂದು ಹೇಳಿಕೊಂಡಿವೆ. ಅದರಲ್ಲಿ ಒಂದು ಖಾತೆಗೆ 27 ಸಾವಿರ ಫಾಲೋವರ್ಸ್​ಗಳಿದ್ದಾರೆ. ಹೀಗಾಗಿ ಮುಂದೆ ದುರ್ಬಳಕೆ ಮಾಡಿಕೊಳ್ಳಬಹುದೆಂಬ ಕಾರಣಕ್ಕೆ ದೂರು ನೀಡಿದೆವು ಎಂದು ಹೇಳಿದ್ದಾರೆ.

ಐಶ್ವಯಾ ಅವರು 2015ರ ದೆಹಲಿ ಫ್ರಶ್​ಫೇಸ್ ವಿನ್ನರ್​,​ 2016ರ ದೆಹಲಿ ಕ್ಯಾಂಪಸ್​ ಪ್ರಿನ್ಸೆಸ್​​ ಹಾಗೂ 2016ರ ಫೆಮಿನಾ ಮಿಸ್​ ಇಂಡಿಯಾ ಫೈನಲಿಸ್ಟ್​ ಆಗಿ ಹೆಸರು ಗಳಿಸಿದ್ದಾರೆ. 2019ನೇ ಸಾಲಿನ ಯುಪಿಎಸ್​ಸಿ ಪರೀಕ್ಷೆಯಲ್ಲಿ 93ನೇ ರ್ಯಾಂಕ್​ ಪಡೆದಿದ್ದು, ಮಾಡೆಲಿಂಗ್​ ಮಾತ್ರವಲ್ಲದೇ ಯುಪಿಎಸ್ಸಿಯಲ್ಲೂ ಗಮನಾರ್ಹ ಸಾಧನೆ ಮಾಡಿದ್ದಾರೆ. ಹೀಗಾಗಿ ಐಶ್ವರ್ಯಾ ಅವರು ಸೌಂದರ್ಯ ಹಾಗೂ ಬುದ್ಧಿವಂತಿಕೆಗೆ ನೈಜ ಉದಾಹರಣೆ ಎಂದು ಕೊಂಡಾಡಿದ್ದಾರೆ. (ಏಜೆನ್ಸೀಸ್​)

ನಗ್ನ ಸ್ಥಿತಿಯಲ್ಲಿ ಪತ್ತೆಯಾಯ್ತಾ ದಿಶಾ ಶವ? ಮುಂಬೈ ಪೊಲೀಸರು ಸಾಕ್ಷಿ ಇದೆ ಎಂದಿದ್ದೇಕೆ?

Share This Article

ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿನ್ನುವುದರಿಂದಾಗುವ ಉಪಯೋಗವೇನು?: ನಿಮಗಾಗಿ ಹೆಲ್ತಿ ಮಾಹಿತಿ | Health Tips

ಅನೇಕ ಆಹಾರಗಳಲ್ಲಿ ಕರಿಬೇವಿನ ಎಲೆಗಳನ್ನು ಬಳಸುವುದು ಗೊತ್ತೆ ಇದೆ. ಕರಿಬೇವಿನ ಎಲೆಯನ್ನು ಬಳಸುವುದರಿಂದ ಚಟ್ನಿ ಅಥವಾ…

ಕಪ್ಪು ಅರಿಶಿನದ ಬಗ್ಗೆ ನಿಮಗೆಷ್ಟು ಗೊತ್ತು?; ಇದರಿಂದಾಗುವ ಆರೋಗ್ಯ ಪ್ರಯೋಜನಗಳಿವು | Health Tips

ನಮ್ಮ ಅಡುಗೆ ಮನೆಯಲ್ಲಿ ಹಳದಿ ಅರಿಶಿನ ಬಳಸುವುದನ್ನು ನೋಡಿರುತ್ತೇವೆ. ಶಕ್ತಿಯುತ ಔಷಧಗಳಲ್ಲಿ ಒಂದಾಗಿರುವ ಅರಿಶಿನವು ಆಯುರ್ವೇದ…

ಬಳಸಿದ ಅಡುಗೆ ಎಣ್ಣೆಯನ್ನು ಪದೇ ಪದೇ ಬಳಸುತ್ತೀರಾ? ಅದು ಎಷ್ಟು ಅಪಾಯಕಾರಿ ಗೊತ್ತಾ? Cooking Oil

Cooking Oil:   ಪ್ರಸ್ತುತ ತೈಲ ಬೆಲೆಗಳು ಗಗನಕ್ಕೇರಿರುವುದರಿಂದ, ತೈಲವನ್ನು ಮರುಬಳಕೆ ಮಾಡುವುದು ಸಾಮಾನ್ಯವಾಗಿದೆ.   ಈಗಾಗಲೇ ಬಳಸಿರುವ…