23 ಅಡಿ ಎತ್ತರದ ಮನ್ಮಥನ ಪ್ರತಿಕೃತಿ

ಸೊರಬ: ತಾಲೂಕಿನಾದ್ಯಂತ ಹೋಳಿ ಹಬ್ಬದ ರಂಗೇರಿದ್ದು ಪಟ್ಟಣದ ವಿವಿಧ ಬೀದಿಗಳಲ್ಲಿ ವಿವಿಧ ಆಕೃತಿಯ ಮನ್ಮಥನ ಪ್ರತಿಕೃತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಪಟ್ಟಣದ ಕಾನಕೇರಿಯಲ್ಲಿ ಯುವ ಹೋರಾಟ ಸಮಿತಿ 5 ವರ್ಷಗಳಿಂದ ಹೋಳಿ ಹಬ್ಬ ಆಚರಿಸುತ್ತಿದ್ದು ಈ ಬಾರಿ 23 ಅಡಿ ಎತ್ತರದ ಕಾಮನ ಪ್ರತಿಕೃತಿ ಪ್ರತಿಷ್ಠಾಪಿಸಿದ್ದಾರೆ. ಪಟ್ಟಣದ ರಂಗನಾಥ ಶಾಲೆ ಮುಂಭಾಗದಲ್ಲಿ, ರಾಘವೇಂದ್ರ ಬಡಾವಣೆಯಲ್ಲಿ, ಚಿಕ್ಕಪೇಟೆಯಲ್ಲಿ, ಹೊಸಪೇಟೆ ಬಡಾವಣೆ, ಸೊಪ್ಪಿನಕೇರಿ ಕ್ರಾಸ್​ಗಳಲ್ಲಿ ಯುವಕರು, ಸಂಘ-ಸಂಸ್ಥೆ ಅವರು ಮನ್ಮಥನ ಪ್ರತಿಕೃತಿ ಪ್ರತಿಷ್ಠಾಪಿಸಿದ್ದಾರೆ. ಬುಧವಾರ ರಾತ್ರಿ ಕಾಮನ ಪ್ರತಿಕೃತಿಗಳನ್ನು ದಹಿಸಿ ಗುರುವಾರ ವಿವಿಧ ಬಣ್ಣಗಳನ್ನು ಎರಚಿ ಹೋಳಿ ಹಬ್ಬ ಆಚರಿಸುತ್ತಾರೆ.