23ರಂದು ಕಡಲೆ ಕಾಯಿ ಪರಿಷೆ

ಚಿಕ್ಕಬಳ್ಳಾಪುರ: ಹನುಮ ಜಯಂತಿ ಪ್ರಯುಕ್ತ ಸೂಲಾಲಪ್ಪದಿನ್ನೆ ಬಳಿಯಿರುವ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಕೈಗೊಂಡಿರುವ ಕಡಲೆ ಕಾಯಿ ಪರಿಷೆ ಸಮೇತ ಧಾರ್ವಿುಕ ಐದು ದಿನಗಳ ಪೂಜಾ ಕೈಂಕರ್ಯಕ್ಕೆ ಬುಧವಾರ ಚಾಲನೆ ನೀಡಲಾಯಿತು. ಆದಿಚುಂಚನಗಿರಿ ಮಠದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ದೇವರಿಗೆ ವಿಶೇಷ ಅಭಿಷೇಕ ನೆರವೇರಿಸಿದರು. ಬಳಿಕ ಬೆಳ್ಳಿ ಆಭರಣ ಸಮೇತ ಆಂಜನೇಯಸ್ವಾಮಿಗೆ ಆಕರ್ಷಕ ಅಲಂಕಾರ ಮಾಡಲಾಯಿತು. ಇನ್ನೂ ದೇವಾಲಯಲ್ಲಿನ ಲಕ್ಷ್ಮೀನರಸಿಂಹಸ್ವಾಮಿ, ಗಣಪತಿಗೆ ಪೂಜೆ ಮಾಡಿದ ಬಳಿಕ ಹೋಮ ಹವನ ಕೈಗೊಳ್ಳಲಾಯಿತು.