More

  22ರವರೆಗೆ ಮೊದಲ ಸುತ್ತಿನ ಅಭಿಯಾನ

  ಗದಗ: ಜಿಲ್ಲಾದ್ಯಂತ ಜ. 19ರಿಂದ ಜ. 22ರವರೆಗೆ ಮೊದಲ ಸುತ್ತಿನ ಪೋಲಿಯೋ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಐದು ವರ್ಷದೊಳಗಿನ ಮಕ್ಕಳಿಗೆ ಪಾಲಕರು ತಪ್ಪದೇ ಪೋಲಿಯೋ ಹಾಕಿಸಬೇಕು ಎಂದು ಜಿ.ಪಂ. ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ ಹೇಳಿದರು.

  ನಗರದ ದಂಡಪ್ಪ ಮಾನ್ವಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಭಾನುವಾರ ಪೋಲಿಯೋ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸೋಮವಾರದಿಂದ ಬುಧವಾರದವರೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ಮನೆ ಮನೆಗೆ ಬರಲಿದ್ದು, ಪಾಲಕರು ಕಾಳಜಿ ವಹಿಸಿ ತಮ್ಮ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಲಸಿಕೆ ಹಾಕಿಸಬೇಕು ಎಂದರು.

  ಅಧ್ಯಕ್ಷತೆ ವಹಿಸಿದ್ದ ಜಿ.ಪಂ. ಸಿಇಒ ಡಾ. ಆನಂದ ಕೆ. ಮಾತನಾಡಿ, ಅಭಿಯಾನ ಯಶಸ್ಸಿಗಾಗಿ ಆರೋಗ್ಯ ಇಲಾಖೆ ಸರ್ವ ಸಿದ್ಧತೆ ಮಾಡಿಕೊಂಡಿದ್ದು, ನಗರ, ಗ್ರಾಮೀಣ ಪ್ರದೇಶಗಳ ಮನೆಗಳಲ್ಲದೆ, ರೈಲ್ವೆ, ಬಸ್ ನಿಲ್ದಾಣಗಳಲ್ಲಿ ಲಸಿಕೆ ಹಾಕಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

  ರಾಜ್ಯ ಪಲ್ಸ್ ಪೋಲಿಯೋ ನೋಡಲ್ ಅಧಿಕಾರಿ ಡಾ. ಎಂ.ಆರ್. ಪದ್ಮಾ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಎಂ. ಸತೀಶಕುಮಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ ಬಸರೀಗಿಡದ, ಡಾ. ಬಿ.ಎಂ. ಗೊಜನೂರ, ಡಾ. ಅರುಂಧತಿ ಕೆ., ಮಕ್ಕಳ ತಜ್ಞ ಡಾ. ಹಳೆಮನಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಬಿ.ಸಿ. ಕರಿಗೌಡರ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ರಾಜೇಂದ್ರ ಬಸರೀಗಿಡದ, ಡಾ. ಎಸ್.ಎಸ್. ನೀಲಗುಂದ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಉಮೇಶ ಕರಮುಡಿ, ಮಂಜುನಾಥ ತಳವಾರ, ಪಿ.ಕೆ. ಚಿಲ್ಲಾಳ, ಇತರರು ಇದ್ದರು. ಡಾ. ರಾಜೇಂದ್ರ ಗಡಾದ ನಿರೂಪಿಸಿದರು.

  ಆರೋಗ್ಯ ಇಲಾಖೆಯಿಂದ ಸಕಲ ವ್ಯವಸ್ಥೆ

  ಮುಂಡರಗಿ: ಪಟ್ಟಣ ಸೇರಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಭಾನುವಾರ ರಾಷ್ಟ್ರೀಯ ಪಲ್ಸ್ ಪೋಲಿಯೋಲಸಿಕೆ ಕಾರ್ಯಕ್ರಮ ಜರುಗಿತು.

  ಸ್ಥಳೀಯ ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಶೋಭಾ ಮೇಟಿ ಅವರು ಮಗುವಿಗೆ ಪೋಲಿಯೋ ಲಸಿಕೆ ಹಾಕುವ ಮೂಲಕ ಉದ್ಘಾಟಿಸಿದರು. ತಾಲೂಕು ನೋಡಲ್ ಅಧಿಕಾರಿ ಡಾ.ಬಿ.ಎಂ. ಗೋಜನೂರ ಮಾತನಾಡಿ, ಪಟ್ಟಣದಲ್ಲಿ 17 ಪೋಲಿಯೋ ಲಸಿಕೆ ಬೂತ್ ಹಾಗೂ ಗ್ರಾಮೀಣ ಪ್ರದೇಶದಲ್ಲಿ 74 ಬೂತ್​ಗಳನ್ನು ತೆರೆಯಲಾಗಿದೆ. ಆರೋಗ್ಯ ಇಲಾಖೆಯಿಂದ ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

  ಪುರಸಭೆ ಸದಸ್ಯರಾದ ಟಿ.ಬಿ.ದಂಡಿನ, ರಾಜಾಬಕ್ಷ್ಮೀ ಬೆಟಗೇರಿ, ರಫೀಕ್ ಮುಲ್ಲಾ, ತಾಲೂಕು ಆರೋಗ್ಯಾಧಿಕಾರಿ ಡಾ.ಬಸವರಾಜ ಕೆ, ಪ್ರಾಚಾರ್ಯ ಸಿ.ಎಸ್.ಅರಸನಾಳ, ಆರ್.ಆರ್.ಇನಾಮದಾರ, ಲಕ್ಷ್ಮವ್ವ ಬಡಿಗೇರ, ಡಾ.ಗಿರೀಶ ಬಡಿಗೇರ, ಡಾ.ಜಯಕುಮಾರ ಬ್ಯಾಳಿ, ಡಾ.ನಂದಾಶಾಸ್ತ್ರೀ, ಡಾ.ಅನಿತಾ ಬಗಾಡೆ, ಆರೀಫ್ ಶೇಖ್, ಡಾ.ಜಹಾಂಗೀರ ಹಾರೋಗೇರಿ, ಎನ್.ಬಿ.ಅಳವಂಡಿ, ಪ್ರವೀಣ ಬಾಗಲಿ, ಇತರರಿದ್ದರು.

  ಬೇರೆ ದೇಶಗಳಿಂದ ಸೋಂಕು ಹರಡುವ ಸಾಧ್ಯತೆ

  ಗಜೇಂದ್ರಗಡ: ಪೋಷಕರು ತಮ್ಮ ಐದು ವರ್ಷದೊಳಗಿನ ಮಕ್ಕಳನ್ನು ಲಸಿಕೆ ಕೇಂದ್ರಕ್ಕೆ ಕರೆದೊಯ್ದು ಪೋಲಿಯೋ ಹಾಕಿಸುವ ಮೂಲಕ ಪೋಲಿಯೋ ನಿಮೂಲನೆಗೆ ಕೈ ಜೋಡಿಸಬೇಕು ಎಂದು ಶಾಸಕ ಕಳಕಪ್ಪ ಬಂಡಿ ಹೇಳಿದರು.

  ಪಟ್ಟಣದಲ್ಲಿ ತಾಲೂಕು ಆರೋಗ್ಯ ಇಲಾಖೆ, ಪುರಸಭೆ ಹಾಗೂ ರೋಟರಿ ಕ್ಲಬ್ ವತಿಯಿಂದ ಆಯೋಜಿಸಿದ್ದ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಭಾರತವು ಈಗಾಗಲೇ ಪೊಲಿಯೋ ಮುಕ್ತ ದೇಶವಾಗಿದ್ದರೂ ಇತರೆ ದೇಶಗಳು ಪೋಲಿಯೋ ಬಾಧಿತ ಪ್ರದೇಶಗಳಾಗಿದ್ದು, ಅಲ್ಲಿಂದ ವೈರಸ್ ಬರುವ ಸಾಧ್ಯತೆ ಗಳಿರುವುದರಿಂದ ನಮ್ಮಲ್ಲಿ ಇಂದಿಗೂ ಪೋಲಿಯೋ ಕಾರ್ಯಕ್ರಮ ಚಾಲ್ತಿಯಲ್ಲಿದೆ ಎಂದರು.

  ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ಬಿ.ಎಸ್. ಭಜಂತ್ರಿ ಮಾತನಾಡಿ, ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೆ ಲಸಿಕೆ ಹಾಕಿಸುವ ಮೂಲಕ ಮಕ್ಕಳು ಪೊಲೀಯೋದಿಂದ ರಕ್ಷಿಸಲು ಪಾಲಕರು ಮುಂದಾಗಬೇಕು ಎಂದರು.

  ಪುರಸಭೆ ಸದಸ್ಯರಾದ ಸುಭಾಸ ಮ್ಯಾಗೇರಿ, ಯು.ಆರ್. ಚನ್ನಮ್ಮನವರ, ಶರಣಪ್ಪ ಉಪ್ಪಿನಬೆಟಗೇರಿ, ರುಪ್ಲೇಶ ರಾಠೋಡ, ಮುದಿಯಪ್ಪ ಮುಧೋಳ, ಯಮನೂರ ತಿರಕೋಜಿ, ಲೀಲಾ ಸವಣೂರ, ವಿಜಯಾ ಮಳಗಿ, ಸುರೇಂದ್ರಸಾ ರಾಯಬಾಗಿ, ಆರ್.ಎಂ. ರಾಯಬಾಗಿ, ಭಾಸ್ಕರ ರಾಯಬಾಗಿ, ಬಾಳು ಗೌಡರ, ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ, ವೈದ್ಯಾಧಿಕಾರಿಗಳಾದ ರಾಘು ಹೊಸುರು, ಎಂ.ಎಚ್. ಹೊಸಮನಿ, ಮಹೇಶ ಚೋಳಿನ, ಸುನೀಲ ಸಾರಂಗಮಠ, ಕೆ.ಎ. ಹಾದಿಮನಿ, ಬಿ.ಆರ್.ಪಾಟೀಲ, ಪುರಸಭೆ ಆರೋಗ್ಯ ಅಧಿಕಾರಿ ರಾಘವೇಂದ್ರ ಮಂತಾ, ಮಲ್ಲಪ್ಪ ಗಡ್ಡಿ, ಸುನೀಲ ಹಬೀಬ, ಎಂ.ಎಸ್.ಹಿರೇಮನಿ ಇತರರು ಇದ್ದರು.

  ಮಕ್ಕಳ ಬದುಕಿಗೆ ಅಮೃತ

  ರೋಣ: ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಬೇಕು ಎಂದು ಪಟ್ಟಣದ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ ಎಚ್.ಎಲ್. ಗಿರಡ್ಡಿ ಹೇಳಿದರು.

  ಪಟ್ಟಣದ ಪಂಡಿತ ಭೀಮಸೇನ್ ಜೋಷಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಭಾನುವಾರ ಆಯೋಜಿಸಿದ್ದ ಪೋಲಿಯೋ ಕಾರ್ಯಕ್ರಮದಲ್ಲಿ ಮಗುವಿಗೆ ಪೋಲಿಯೋ ಲಸಿಕೆ ಹಾಕಿ ಅವರು ಮಾತನಾಡಿ ದರು. ಪೋಲಿಯೋ ಲಸಿಕೆ ಮಕ್ಕಳ ಬದುಕಿಗೆ ಅಮೃತಬಿಂದು ಇದ್ದಂತೆ. ಎಲ್ಲ ಪೋಷಕರು ತಮ್ಮ ಮಕ್ಕಳಿಗೆ ತಪ್ಪದೆ ಪೋಲಿಯೋ ಲಸಿಕೆ ಹಾಕಿಸಿ ಅವರ ಭವಿಷ್ಯವನ್ನು ಭದ್ರಗೊಳಿಸಬೇಕು. ತಾಲೂಕಿನಾದ್ಯಂತ 33,959 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿ ಇದೆ. ಮೂರು ದಿನಗಳ ಕಾಲ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ 5ವರ್ಷದೊಳಗಿನ ಎಲ್ಲ ಮಕ್ಕಳಿಗೆ ಲಸಿಕೆ ನೀಡಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ಕುಮಾರಸ್ವಾಮಿ ಹಿರೇಮಠ, ವಿವೇಕ ತ್ರಿಮಲ್ಲೆ, ರಾಜು ಹೊಸಳ್ಳಿ, ರವಿ ಕುರಿ, ಆನಂದ ಜವಾರಿ, ಎ.ಆರ್. ಮುಲ್ಲಾ, ಇತರರಿದ್ದರು.

  ಯಾವುದೇ ಅಪಾಯವಿಲ್ಲ

  ನರೇಗಲ್ಲ: ವಿಶ್ವಆರೋಗ್ಯ ಸಂಸ್ಥೆ 2014ರಂದು ಭಾರತ ಪೋಲಿಯೋ ಮುಕ್ತ ರಾಷ್ಟ್ರ ಎಂದು ಘೊಷಿಸಿದೆ. ಆದರೂ ನೆರೆಯ ಪಾಕಿಸ್ತಾನ, ಅಫ್ಘಾನಿಸ್ಥಾನಗಳಲ್ಲಿ ಪೋಲಿಯೋ ಪ್ರಕರಣಗಳು ವರದಿಯಾಗಿವೆ. ಹೀಗಾಗಿ ಭಾರತವು ಪೋಲಿಯೋ ಮುಕ್ತ ರಾಷ್ಟ್ರವಾಗಿದ್ದರೂ ಲಸಿಕೆ ಅಭಿಯಾನ ನಡೆಯುತ್ತಿದೆ ಎಂದು ಹಿರಿಯ ವಕೀಲ ಕೆ.ಜಿ. ಉಡುಪಿ ಹೇಳಿದರು.

  ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರ, ಪಟ್ಟಣ ಪಂಚಾಯಿತಿ ವತಿಯಿಂದ ಪಟ್ಟಣದ ಬಸ್ ನಿಲ್ದಾಣದಲ್ಲಿ ಭಾನುವಾರ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

  ಪೋಲಿಯೋ ಲಸಿಕೆ ಹಾಕಿಸುವುದರಿಂದ ಮಕ್ಕಳಿಗೆ ಯಾವುದೇ ಅಪಾಯವಿಲ್ಲ. ಆರೋಗ್ಯ ಇಲಾಖೆ ಹಮ್ಮಿಕೊಂಡಿರುವ ಪೋಲಿಯೋ ಲಸಿಕೆ ಅಭಿಯಾನಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.

  ಆರೋಗ್ಯಾಧಿಕಾರಿ ಡಾ. ಎ.ಡಿ. ಸಾಮುದ್ರಿ ಮಾತನಾಡಿ, ಜ.21 ರಿಂದ 23ರವರೆಗೆ ಮೂರು ದಿನಗಳಲ್ಲಿ 6369 ಮನೆಗಳಿಗೆ ಭೇಟಿ ನೀಡಿ ಲಸಿಕೆ ಹಾಕಲಾಗುತ್ತದೆ ಎಂದರು.

  ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಚ್.ಸುರೇಶ, ಎಸ್.ಸಿ. ಕೋಳಿವಾಡಮಠ, ಪಿ.ಲಿಂಗನಗೌಡ್ರ, ಎಸ್.ಎನ್. ಪಾಟೀಲ, ಜಯಶ್ರೀ ವಿಭೂತಿ, ಪಡಿಯಪ್ಪ ಅಳಗೇರಿ, ಚಂದ್ರು ಹೂನಗುಂಡಿ, ನಿರ್ಮಲಾ ಕೊಪ್ಪದ, ಪ.ಪಂ. ಆರೋಗ್ಯ ಸಹಾಯಕ ರಾಮಚಂದ್ರಪ್ಪ ಕಜ್ಜಿ, ಎಂ.ಎಚ್. ಕಾತರಕಿ, ಸಾರಿಗೆ ನಿಯಂತ್ರಕ ಆರ್.ವಿ. ಜೋಡಗಂಬಳಿ ಇತರರಿದ್ದರು. ಆರೋಗ್ಯ ಸಹಾಯಕ ಎಸ್.ಎಫ್. ಅಂಗಡಿ ನಿರ್ವಹಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts