21ನೇ ಸ್ಥಾನಕ್ಕೆ ಕುಸಿದ ಮಂಡ್ಯ

ಮಂಡ್ಯ: 2018-19ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, ಮಂಡ್ಯ ಜಿಲ್ಲೆ ಶೇ.63.08ರಷ್ಟು ಲಿತಾಂಶ ಪಡೆಯುವ ಮೂಲಕ 21ನೇ ಸ್ಥಾನಕ್ಕೆ ಕುಸಿದಿದೆ.

2016ರಲ್ಲಿ ಶೇ.56.52ರಷ್ಟು ಲಿತಾಂಶದೊಂದಿಗೆ 24ನೇ ಸ್ಥಾನದಲ್ಲಿದ್ದ ಮಂಡ್ಯ, 2017ರಲ್ಲಿ ಶೇ.56.43ರಷ್ಟು ಲಿತಾಂಶದೊಂದಿಗೆ 17ನೇ ಸ್ಥಾನಕ್ಕೆ ಏರಿತ್ತು. 2018ರಲ್ಲಿ ಶೇ.65.36ರಷ್ಟು ಫಲಿತಾಂಶದೊಂದಿಗೆ 19ನೇ ಸ್ಥಾನ ಪಡೆದುಕೊಂಡಿತ್ತು. ಈ ಬಾರಿ ಕಳೆದ ವರ್ಷಕ್ಕಿಂತಲೂ ಎರಡು ಸ್ಥಾನ ಕುಸಿತ ಕಂಡಿದೆ. ಜತೆಗೆ ಒಟ್ಟಾರೆ ಫಲಿತಾಂಶದಲ್ಲಿಯೂ ನಿರಾಸೆ ಅನುಭವಿಸಿದೆ.

ಈ ವರ್ಷ ಜಿಲ್ಲೆಯಲ್ಲಿ 15,586 ಪರೀಕ್ಷೆ ಬರೆದಿದ್ದರು. ಇದರಲ್ಲಿ 13,134 ಹೊಸ, 474 ಖಾಸಗಿ ಮತ್ತು 1,978 ಪುನರಾವರ್ತಿತ ಅಭ್ಯರ್ಥಿಗಳಾಗಿದ್ದಾರೆ. ಈ ಪೈಕಿ 7,096 ಬಾಲಕರು ಮತ್ತು 8,490 ಬಾಲಕಿಯರಿದ್ದಾರೆ. ಕನ್ನಡ ಮಾಧ್ಯಮದಲ್ಲಿ 6,565, ಆಂಗ್ಲ ಮಾಧ್ಯಮದಲ್ಲಿ 9,021 ಪರೀಕ್ಷೆ ಬರೆದಿದ್ದರು.

ಬಾಲಕಿಯರೇ ಮೇಲುಗೈ: ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಪರೀಕ್ಷೆ ಬರೆದಿದ್ದ 8,490 ಬಾಲಕಿಯರ ಪೈಕಿ 5,387 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಬಾಲಕಿಯರ ಒಟ್ಟಾರೆ ಫಲಿತಾಂಶ ಶೇ.63.45 ಆಗಿದೆ. ಇನ್ನು 7,096 ಬಾಲಕರ ಪೈಕಿ 3,589 ಅಭ್ಯರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.50.58 ಫಲಿತಾಂಶ ಬಂದಿದೆ. ಅಂತೆಯೇ, ಕನ್ನಡ ಮಾಧ್ಯಮಕ್ಕೆ ಶೇ.56.25 ಮತ್ತು ಆಂಗ್ಲ ಮಾಧ್ಯಮಕ್ಕೆ ಶೇ.59.44 ಫಲಿತಾಂಶ ಬಂದಿದೆ.

ಇನ್ನು ಕಲಾ ವಿಭಾಗದಲ್ಲಿ 5,009 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು 2,440(ಶೇ.48.71) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಪೈಕಿ ಬಾಲಕರ ಸಂಖ್ಯೆ 980 ಮತ್ತು 1,532 ಬಾಲಕಿಯರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 5,640 ಅಭ್ಯರ್ಥಿಗಳ ಪೈಕಿ 3,765(ಶೇ.66.76) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರಲ್ಲಿ ಬಾಲಕರ ಸಂಖ್ಯೆ 1,508 ಮತ್ತು 2,257 ಬಾಲಕಿಯರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ 4,937 ಅಭ್ಯರ್ಥಿಗಳ ಪೈಕಿ 2,771(ಶೇ.56.13) ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರಲ್ಲಿ 1,173 ಬಾಲಕರು ಮತ್ತು 1,598 ಬಾಲಕಿಯರಾಗಿದ್ದಾರೆ.

ಗ್ರಾಮೀಣ ಮಕ್ಕಳ ಸಾಧನೆ: ದ್ವಿತೀಯ ಪಿಯುಸಿಯಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಈ ವರ್ಷ 7,012 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 4,266 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದು, ಶೇ.60.84ರಷ್ಟು ಫಲಿತಾಂಶ ಬಂದಿದೆ. ಅಂತೆಯೇ, ನಗರ ಪ್ರದೇಶದಲ್ಲಿ 8,574 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಈ ಪೈಕಿ 4,710 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದು, ಶೇ.54.93ರಷ್ಟು ಫಲಿತಾಂಶ ಬಂದಿದೆ.

ಇನ್ನು ಮಾಧ್ಯಮವಾರು ಫಲಿತಾಂಶದಲ್ಲಿಯೂ ಗ್ರಾಮೀಣ ಅಭ್ಯರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಕನ್ನಡ ಮಾಧ್ಯಮಕ್ಕೆ ಸಂಬಂಧಿಸಿದಂತೆ 4,193 ಅಭ್ಯರ್ಥಿಗಳ ಪೈಕಿ 2,483(ಶೇ.59.22) ಮತ್ತು ಆಂಗ್ಲ ಮಾಧ್ಯಮದಲ್ಲಿ 2,819 ಅಭ್ಯರ್ಥಿಗಳ ಪೈಕಿ 1,783(ಶೇ.63.25) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ನಗರ ಪ್ರದೇಶದಲ್ಲಿ ಕನ್ನಡ ಮಾಧ್ಯಮದಲ್ಲಿ 4,828 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು, 2,591(ಶೇ.53.67) ಮತ್ತು ಆಂಗ್ಲ ಮಾಧ್ಯಮದಲ್ಲಿ 3,746 ಅಭ್ಯರ್ಥಿಗಳ ಪೈಕಿ 2,119(ಶೇ.56.57) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.