More

  21, 22ರಂದು ಕನ್ನಂಬಾಡಿ ಅಮ್ಮನ ವಿಗ್ರಹ ಪ್ರತಿಷ್ಠಾಪನೆ

  ಶನಿವಾರಸಂತೆ: ಸಮಿಪದ ನೀರುಗುಂದ ಗ್ರಾಮದ ಶ್ರೀ ಕನ್ನಂಬಾಡಿ ಅಮ್ಮನವರ ದೇವಸ್ಥಾನದಲ್ಲಿ ಮೇ 21 ಮತ್ತು 22ರಂದು ನೂತನ ವಿಗ್ರಹ ಪ್ರತಿಷ್ಠಾಪನೆ, ಪೂಜಾ ಮಹೋತ್ಸವ ಮತ್ತು ಕೊಂಡೋತ್ಸವ ನಡೆಯಲಿದೆ. 21ರಂದು ದೇವಸ್ಥಾನದಲ್ಲಿ ಸಂಜೆ 6 ಗಂಟೆಯಿಂದ ಪುಣ್ಯಾಹ, ಪಂಚಗವ್ಯ, ಗಣಪತಿ ಪೂಜೆ, ಮಹಾಸಂಕಲ್ಪ, ಕಂಕಣಧಾರಣೆ, ಆಧಿತ್ಯಾದಿ ನವಗ್ರಹ ಸಹಿತ ಪರಿವಾರ ದೇವತೆಗಳ ಕಳಸ ಸ್ಥಾಪನೆ ಕಾರ್ಯ ನಡೆಯಲಿದೆ. ನಂತರ ದೇವರ ವಿಗ್ರಹಕ್ಕೆ ಜಲಾದಿವಾನ, ಕ್ಷೀರಾಧಿವಾಸ, ಧಾನ್ಯಾಧಿವಾಸ ಕಾರ್ಯದ ನಂತರ ವಾಸ್ತು ರಾಠೋಡ ಹೋಮ, ತತ್ವ ಹೋಮಗಳಿಂದ ಪೂರ್ಣಾಹುತಿ, ವಾಸ್ತುಬಲಿ ಹಾಗೂ ಮಹಾಮಂಗಳಾರತಿ ನೆರವೇರಲಿದೆ.
  22ರಂದು ಬೆಳಗ್ಗೆ 6 ಗಂಟೆಯಿಂದ ರುದ್ರಾಭಿಷೇಕ, ಪ್ರಾಣ ಪ್ರತಿಷ್ಠಾಪನೆ, ನೇತ್ರ ಮಿಲನ, ಅಲಂಕಾರ ಕಾರ್ಯದ ನಂತರ ಗಣಪತಿ ಹೋಮ, ನವಗ್ರಹ ಹೋಮ, ಪ್ರಧಾನ ದುರ್ಗಾ ಹೋಮ, ಪೂರ್ಣಾಹುತಿ ಬಳಿಕ ಬಲಿಪ್ರಧಾನ ಮತ್ತು ಮಹಾಮಂಗಳಾರತಿ ನಡೆಯಲಿದೆ. ಅಂದು ರಾತ್ರಿ 10 ಗಂಟೆಗೆ ಹೇಮಾವತಿ ನದಿಗೆ ತೆರಳಿ ನೂತನ ವಿಗ್ರಹ ಪೂಜೆ ನೆರವೇರಿಸಿದ ನಂತರ ಕಳಸ ತರಲಾಗುತ್ತದೆ. ಮುಂಜಾನೆ 6 ಗಂಟೆಗೆ ಕೊಂಡೋತ್ಸವ ಜರುಗಲಿದೆ. ಭಕ್ತಾಧಿಗಳಿಗೆ ನಿರಂತರ ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ. ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ, ಕಲ್ಲಳ್ಳಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಪೂಜಾ ಕಾರ್ಯ ನಡೆಯಲಿವೆ. ಪ್ರಧಾನ ಅರ್ಚಕರಾದ ಪಂಡಿತ ಮಣಿಕಂಠ ಮತ್ತು ಚಂದ್ರಯ್ಯ ನೇತೃತವದಲ್ಲಿ ಪೂಜೆ ನಡೆಯಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts