ಡೆಂಗ್ಯೂ ಸೋಲಿಸಲು ಹೆಜ್ಜೆಗಳು, ಸ್ವಚ್ಛಗೊಳಿಸಿ ಮುಚ್ಚಿಡಿ ಘೋಷ ವಾಕ್ಯದೊಂದಿಗೆ ಮಾರಕ ಕಾಯಿಲೆ ವಿರುದ್ಧ ಜಾಗೃತಿ
ಚಿಕ್ಕಬಳ್ಳಾಪುರ: ಡೆಂಗ್ಯೂ ಸೋಲಿಸಲು ಹೆಜ್ಜೆಗಳು ಪರಿಶೀಲಿಸಿ, ಸ್ವಚ್ಛಗೊಳಿಸಿ ಮುಚ್ಚಿಡಿ ಎಂಬ ಘೋಷ ವಾಕ್ಯದೊಂದಿಗೆ ಮೇ 16…
ಅಪರಿಚಿತ ಕಾರು ಡಿಕ್ಕಿ: ತುಂಡಾದ ಕಾಲಿನ ನೋವಿನಿಂದ ಒದ್ದಾಡಿದ ಬೈಕ್ ಸವಾರ
ಚಿಕ್ಕಬಳ್ಳಾಪುರ: ಅಪರಿಚಿತ ಕಾರು ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನ ಸವಾರನ ಕಾಲು ತುಂಡಾಗಿದ್ದು ರಸ್ತೆಯಲ್ಲಿ ಗಂಟೆಗಟ್ಟಲೇ ರಕ್ತದ ಮಡುವಿನ ಬಿದ್ದ ಒದ್ದಾಡಿದ ದೃಶ್ಯವು ನೋಡುಗರ ಮನಕಲುಕಿತು. ಅಪಘಾತದಲ್ಲಿ ಕಾಲು ತುಂಡಾಗಿ ಗಾಯಗೊಂಡ ವ್ಯಕ್ತಿಯನ್ನು ನೆರೆಯ ಅಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಮುಲಕಲ ಚೆರುವುಗ್ರಾಮದ ಮಹೇಶ್ (30 ವರ್ಷ) ಎಂದು ಗುರುತಿಸಲಾಗಿದೆ. ಚಿಂತಾಮಣಿ& ಬೆಂಗಳೂರು ರಸ್ತೆಯ ನಾಯಿಂದ್ರಹಳ್ಳಿ ಗೇಟ್ ಬಳಿ ಬೆಂಗಳೂರಿನಿಂದ ಚಿಂತಾಮಣಿ ಕಡೆಗೆ ಬರುತ್ತಿದ್ದ ಅಪರಚಿತ ಕಾರು ಬೈಕ್ಗೆ ಡಿಕ್ಕಿ ಹೊಡೆದಿದೆ. ಇದರ ರಭಸಕ್ಕೆ ಬೈಕ್ ಸಂಪೂರ್ಣ ಜಖಂಗೊಂಡಿದ್ದು ಸವಾರನ ಒಂದು ಕಾಲು ಅರ್ಧ ತುಂಡಾಗಿದೆ. ರಕ್ತದ ಮಡುವಿನಲ್ಲಿ ರಸ್ತೆಯಲ್ಲಿ ಒದ್ದಾಡಿದ್ದು ಸ್ಥಳಿಯರು ನೀರು ಕುಡಿಸಿ, ಗಾಳಿ ಬೀಸಿ ಧೈರ್ಯ ತುಂಬಿದ್ದಾರೆ. ಇನ್ನು ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ತೆರಳಿದ ಕೈವಾರ ಹೊರ ಠಾಣೆಯ ಪೊಲೀಸರು ಕರೆ ಮಾಡಿದರೂ ಚಿಂತಾಮಣಿ ತಾಲೂಕಿನ ಯಾವುದೇ ಆಂಬ್ಯುಲೆನ್ಸ್ ಸಿಗಲಿಲ್ಲ. ಕೊನೆಗೆ ಕೋಲಾರ ತಾಲೂಕಿನ ಕ್ಯಾಲನೂರಿನಿಂದ ಆಂಬುಲೆನ್ಸ್ ತರಿಸಿ, ಗಾಯಾಳುವನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದು ಅಪಘಾತ ಎಸಗಿದ ಕಾರು ಪತ್ತೆಗೆ ಬಲೆ ಬೀಸಿದ್ದಾರೆ. ಚಿಂತಾಮಣಿ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮರಗಳ ಕಟಾವು, 50 ಸಾವಿರ ಲಂಚ ಕೇಳಿದ ಅರಣ್ಯಾಧಿಕಾರಿ, ಚಾಲಕ ಲೋಕಾಯುಕ್ತ ಬಲೆಗೆ
ಚಿಕ್ಕಬಳ್ಳಾಪುರ: ಪೆಟ್ರೋಲ್ ಬಂಕ್ ನಿರ್ಮಾಣಕ್ಕೆ ಉದ್ದೇಶಿಸಿದ ಜಾಗದಲ್ಲಿನ ಮರಗಳ ಕಟಾವಿಗೆ ಲಂಚ ಪಡೆಯುತ್ತಿದ್ದ ವಲಯ ಅರಣ್ಯ ಇಲಾಖೆ ಕಚೇರಿಯ ಸಹಾಯಕ ಅರಣ್ಯಾಧಿಕಾರಿ ಮತ್ತು ಇಲಾಖೆಯ ಜೀಪಿನ ಚಾಲಕ ಲೋಕಾಯಕ್ತರ ಬಲೆಗೆ ಸಿಕ್ಕಿ ಬಿದ್ದಿದ್ದಾರೆ. ಚಿಂತಾಮಣಿ ವಲಯ ಅರಣ್ಯ ಇಲಾಖೆ ಕಚೇರಿಯ ಸಹಾಯಕ ಅರಣ್ಯಾಧಿಕಾರಿ ಧನಲಕ್ಷಿ$್ಮ ಹಾಗೂ ಜೀಪಿನ ಚಾಲಕ ಮಣಿಕಂಠ ಆರೋಪಿಗಳು. ದೊಡ್ಡಗಂಜೂರು ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾದು ಹೋಗುವ ಪೆಟ್ರೋಲ್ ಬಂಕ್ವೊಂದು ತೆರೆಯುವ ಜಾಗದಲ್ಲಿದ್ದ ಮರಗಳ ಕಟಾವಿಗೆ ಶ್ರೀನಾಥ್ ಎಂಬುವರ ಬಳಿ ಲಂಚಕ್ಕೆ ಒತ್ತಾಯಿಸಲಾಗಿತ್ತು. ಮನವಿ ಪತ್ರ ಸಲ್ಲಿಸಿದಾಗ ಮೌಖಿಕವಾಗಿ ಆದೇಶ ನೀಡಿದ್ದವರು ಮರಗಳನ್ನು ಕಟಾವಿನ ಬಳಿಕ ಜಮೀನಿನ ಮಾಲೀಕರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಜತೆಗೆ ದಂಡ ವಿಧಿಸಲು ಮುಂದಾಗಿದ್ದಾರೆ. ಇದೇ ವೇಳೆ ಕಡಿಮೆ ದಂಡ ನಿಗದಿಪಡಿಸಲು 50 ಸಾವಿರ ರೂಗಳಿಗೂ ಒತ್ತಾಯಿಸಿದ್ದು ಶುಕ್ರವಾರ ಬೆಳಿಗ್ಗೆ ಮೊದಲ ಕಂತಿನ ಹಣವಾಗಿ 15 ಸಾವಿರ ರೂಗಳನ್ನು ಕಚೇರಿಯಲ್ಲಿ ಪಡೆಯುತ್ತಿದ್ದಾಗ ವಲಯ ಅರಣ್ಯ ಇಲಾಖೆಯ ಸಹಾಯಕ ಅರಣ್ಯಾಧಿಕಾರಿ ಧನಲಕ್ಷಿ$್ಮ ಮತ್ತು ಜೀಪಿನ ಚಾಲಕ ಮಣಿಕಂಠ ಲೋಕಾಯಕ್ತರ ಬಲೆಗೆ ಸಿಕ್ಕಿ ಬಿದ್ದಿದ್ದಾರೆ. ಕಾರ್ಯಾಚರಣೆಯನ್ನು ಜಿಲ್ಲಾ ಲೋಕಾಯುಕ್ತ ಎಸ್ ಪಿ ಆಂಟೋನಿ ಜಾನ್, ಡಿವೈಎಸ್ಪಿ ವೀರೇಂದ್ರ ಕುಮಾರ್ ನೇತೃತ್ವದ ತಂಡವು ಕೈಗೊಂಡಿತ್ತು.
ಮರಗಳ ಕಟಾವು, 50 ಸಾವಿರ ಲಂಚ ಕೇಳಿದ ಅರಣ್ಯಾಧಿಕಾರಿ, ಚಾಲಕ ಲೋಕಾಯುಕ್ತ ಬಲೆಗೆ
ಚಿಕ್ಕಬಳ್ಳಾಪುರ: ಪೆಟ್ರೋಲ್ ಬಂಕ್ ನಿರ್ಮಾಣಕ್ಕೆ ಉದ್ದೇಶಿಸಿದ ಜಾಗದಲ್ಲಿನ ಮರಗಳ ಕಟಾವಿಗೆ ಲಂಚ ಪಡೆಯುತ್ತಿದ್ದ ವಲಯ ಅರಣ್ಯ ಇಲಾಖೆ ಕಚೇರಿಯ ಸಹಾಯಕ ಅರಣ್ಯಾಧಿಕಾರಿ ಮತ್ತು ಇಲಾಖೆಯ ಜೀಪಿನ ಚಾಲಕ ಲೋಕಾಯಕ್ತರ ಬಲೆಗೆ ಸಿಕ್ಕಿ ಬಿದ್ದಿದ್ದಾರೆ. ಚಿಂತಾಮಣಿ ವಲಯ ಅರಣ್ಯ ಇಲಾಖೆ ಕಚೇರಿಯ ಸಹಾಯಕ ಅರಣ್ಯಾಧಿಕಾರಿ ಧನಲಕ್ಷಿ$್ಮ ಹಾಗೂ ಜೀಪಿನ ಚಾಲಕ ಮಣಿಕಂಠ ಆರೋಪಿಗಳು. ದೊಡ್ಡಗಂಜೂರು ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾದು ಹೋಗುವ ಪೆಟ್ರೋಲ್ ಬಂಕ್ವೊಂದು ತೆರೆಯುವ ಜಾಗದಲ್ಲಿದ್ದ ಮರಗಳ ಕಟಾವಿಗೆ ಶ್ರೀನಾಥ್ ಎಂಬುವರ ಬಳಿ ಲಂಚಕ್ಕೆ ಒತ್ತಾಯಿಸಲಾಗಿತ್ತು. ಮನವಿ ಪತ್ರ ಸಲ್ಲಿಸಿದಾಗ ಮೌಖಿಕವಾಗಿ ಆದೇಶ ನೀಡಿದ್ದವರು ಮರಗಳನ್ನು ಕಟಾವಿನ ಬಳಿಕ ಜಮೀನಿನ ಮಾಲೀಕರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಜತೆಗೆ ದಂಡ ವಿಧಿಸಲು ಮುಂದಾಗಿದ್ದಾರೆ. ಇದೇ ವೇಳೆ ಕಡಿಮೆ ದಂಡ ನಿಗದಿಪಡಿಸಲು 50 ಸಾವಿರ ರೂಗಳಿಗೂ ಒತ್ತಾಯಿಸಿದ್ದು ಶುಕ್ರವಾರ ಬೆಳಿಗ್ಗೆ ಮೊದಲ ಕಂತಿನ ಹಣವಾಗಿ 15 ಸಾವಿರ ರೂಗಳನ್ನು ಕಚೇರಿಯಲ್ಲಿ ಪಡೆಯುತ್ತಿದ್ದಾಗ ವಲಯ ಅರಣ್ಯ ಇಲಾಖೆಯ ಸಹಾಯಕ ಅರಣ್ಯಾಧಿಕಾರಿ ಧನಲಕ್ಷಿ$್ಮ ಮತ್ತು ಜೀಪಿನ ಚಾಲಕ ಮಣಿಕಂಠ ಲೋಕಾಯಕ್ತರ ಬಲೆಗೆ ಸಿಕ್ಕಿ ಬಿದ್ದಿದ್ದಾರೆ. ಕಾರ್ಯಾಚರಣೆಯನ್ನು ಜಿಲ್ಲಾ ಲೋಕಾಯುಕ್ತ ಎಸ್ ಪಿ ಆಂಟೋನಿ ಜಾನ್, ಡಿವೈಎಸ್ಪಿ ವೀರೇಂದ್ರ ಕುಮಾರ್ ನೇತೃತ್ವದ ತಂಡವು ಕೈಗೊಂಡಿತ್ತು.
ಅಂಧರ ಕ್ರಿಕೆಟ್: ಸಮರ್ಥ್ ಚಾಂಪಿಯನ್ ಶಿಪ್ ಗೆದ್ದ ಭಾರತ ತಂಡ
ಚಿಕ್ಕಬಳ್ಳಾಪುರ: ಸಮರ್ಥ್ ಚಾಂಪಿಯನ್ ಶಿಪ್ ಅಂಧರ ಟ್ವಿ20 ಪಂದ್ಯದಲ್ಲಿ ಕ್ಲೀನ್ ಸ್ವೀಪ್ ಮಾಡುವುದರೊಂದಿಗೆ ಭಾರತ ತಂಡವು ಸರಣಿಯನ್ನು ತನ್ನದಾಗಿಸಿಕೊಂಡಿದೆ. ಮುದ್ದೇನಹಳ್ಳಿಯಲ್ಲಿನ ಸಾಯಿಕೃಷ್ಣನ್ ಮೈದಾನದಲ್ಲಿ ದಣ ಆಫ್ರಿಕಾ ಹಾಗೂ ಭಾರತದ ನಡುವೆ 5 ಪಂದ್ಯಗಳ ಕ್ರಿಕೆಟ್ ಟೂರ್ನಿಮೆಂಟ್ ನಡೆಯಿತು. ಇದರ ಎಲ್ಲ ಪಂದ್ಯಗಳಲ್ಲೂ ಭಾರತ ತಂಡವು ಗೆಲುವಿನ ನಗೆ ಬೀರಿದೆ. ಶುಕ್ರವಾರ ನಡೆದ ಐದನೇ ಹಾಗೂ ಅಂತಿಮ ಟ್ವಿ 20 ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಫ್ರಿಕಾ ತಂಡವು 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 142 ರನ್ ಗಳಿಸಿತು. ಇದರಲ್ಲಿ ಲೆಸೆಡಿ ಎನ್ ಲೆಸುಫಿ 54 (47 ಎಸೆತ) ರನ್ ಗಳೊಂದಿಗೆ ಅರ್ಧ ಶತಕ ಬಾರಿಸಿದರು. ಎದುರಾಳಿ ನೀಡಿದ 143 ರನ್ ಗುರಿಯನ್ನು ಬೆನ್ನೆತ್ತಿದ ಭಾರತವು ಆರಂಭದಲ್ಲಿಯೇ ಎರಡು ವಿಕೆಟ್ ಕಳೆದುಕೊಂಡಿತು. ಇದರ ನಡುವೆ ನಾಯಕ ದುರ್ಗಾ ರಾವ್ 60 ರನ್ (30 ಎಸೆತ)ಹಾಗೂ ದಾಂಡಿಗ ಲಾಲ್ ಪ್ರಸಾದ್ ಸೋರೆ 62 ರನ್ (41 ಎಸೆತ) ಇಬ್ಬರು 122 ರನ್ ಗಳ ಜೊತೆಯಾಟದಿಂದ 13 ಓವರ್ ಗಳಲ್ಲಿ ಗೆಲುವು ಕಂಡಿತು. ಇನ್ನು ಕ್ರೀಡಾಂಗಣದಲ್ಲಿ ನಡೆದ 5 ಪಂದ್ಯದಲ್ಲೂ ಭರ್ಜರಿ ಗೆಲುವು ಸಾಧಿಸಿದ ಭಾರತವು ಸಮರ್ಥ್ ಅಂಧರ ಕ್ರಿಕೆಟ್ ಚಾಂಪಿಯನ್ ಶಿಪ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. *ಕ್ರೀಡೆ ಶಕ್ತಿಯ ಪ್ರಬಲ ಅಭಿವ್ಯಕ್ತಿ ಕ್ರೀಡೆಯು ದೈಹಿಕ ಇತಿ ಮಿತಿಗಳನ್ನು ಮೀರಿ ಮೈದೋರಿದಾಗ ಮಾನವ ಘನತೆ ಮತ್ತು ಆಂತರಿಕ ಶಕ್ತಿಯ ಪ್ರಬಲ ಅಭಿವ್ಯಕ್ತಿ ಎಂದು ಸತ್ಯಸಾಯಿ ಲೋಕಸೇವಾ ಸಂಸ್ಥೆಯ ಸದ್ಗುರು ಶ್ರೀ ಮಧುಸೂದನ ಸಾಯಿ ತಿಳಿಸಿದರು. ಸಮಾರೋಪ ಕಾರ್ಯಕ್ರಮದಲ್ಲಿ ಗೆದ್ದ ತಂಡಕ್ಕೆ ಟ್ರೋಫಿ ವಿತರಿಸಿ ಮಾತನಾಡಿದ ಅವರು, ಒಳ್ಳೆಯ ಚಟುವಟಿಕೆಯು ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು. 1983 ರ ವಿಶ್ವಕಪ್ ವಿಜೇತ ಭಾರತದ ತಂಡದ ವಿಕೆಟ್ ಕೀಪರ್ ಸೈಯದ್ ಕಿಮಾರ್ನಿ,ಭಾರತದ ಮೊದಲ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಪ್ರಕಾಶ್ ಪಡುಕೋಣೆ, ಸಮಾಜದ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ಹುಂಡೈ ಸಂಸ್ಥೆಯ ಸಮರ್ಥನಂ ಟ್ರಸ್ಟ್ನ ಸ್ಥಾಪಕ ಹಾಗೂ ಭಾರತೀಯ ಅಂಧರ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಮಹಾಂತೇಶ್ ಜಿ. ಕಿವಡಸಣ್ಣವರ್, ಹುಂಡೈ ಮೋಟಾರ್ ಕಂಪನಿಯ ಕಾರ್ಯ ನಿರ್ವಾಹಕ ನಿರ್ದೇಶಕ ಜೇ-ಯಂಗ್ ಪಾರ್ಕ್ಮತ್ತಿತರರು ಇದ್ದರು.
ಪಾಲಕರ ವಿರೋಧದ ನಡುವೆ ಅಂತರ್ ಧರ್ಮೀಯ ವಿವಾಹದ ಜೋಡಿ
ಚಿಕ್ಕಬಳ್ಳಾಪುರ: ಕುಟುಂಬದ ವಿರೋಧದ ನಡುವೆಯೂ ಅಂತರ್ ಧಮೀರ್ಯ ವಿವಾಹವಾದ ಜೋಡಿಗಳು ಪೊಲೀಸರ ರಕ್ಷಣೆ ಮೊರೆ ಹೋಗಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ಯಾಪಲಹಳ್ಳಿಯ ನಿವಾಸಿ ಹರೀಶ್ ಬಾಬು ಹಾಗೂ ಗುಡಿಬಂಡೆ ತಾಲೂಕಿನ ಸೋಮೇಶ್ವರ ಗ್ರಾಮದ ಯುವತಿ ನಜ್ಮಾ ನೂತನ ದಾಂಪತ್ಯಕ್ಕೆ ಕಾಲಿಟ್ಟವರು. ಚಿಕ್ಕಬಳ್ಳಾಪುರ ನಗರದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಪರಿಚಯದ ಸ್ನೇಹ ಪ್ರೀತಿ ಪ್ರೇಮವಾಗಿ ಪರಿವರ್ತನೆಯಾಗಿದೆ. ಕೊನೆಗೆ ಇಬ್ಬರು ಮನೆಯಲ್ಲಿ ಮದುವೆಯಾಗುವುದರ ಬಗ್ಗೆ ಮಾಹಿತಿ ನೀಡಿದ್ದಾರೆ. ಇದಕ್ಕೆ ಯುವತಿಯ ಕುಟುಂಬಸ್ಥರು ಒಪ್ಪಿಲ್ಲ. ಆದರೂ ವಿರೋಧವನ್ನು ಲೆಕ್ಕಿಸದೇ ಜೋಡಿ ದೇವಸ್ಥಾನವೊಂದರಲ್ಲಿ ಮದುವೆಯಾಗಿದೆ. ಹಾಗೆಯೇ ರಕ್ಷಣೆಗಾಗಿ ಪೊಲೀಸರ ಮೊರೆ ಹೋಗಿದೆ. ಇದರಿಂದ ನಿಯಮಾನುಸಾರ ಗಂಡ ಹೆಂಡತಿಯ ಹೇಳಿಕೆಯನ್ನು ಪಡೆದುಕೊಂಡು, ಕುಟುಂಬಸ್ಥರಿಗೆ ಇಬ್ಬರಿಗೂ ತೊಂದರೆ ಕೊಡದಂತೆ ಎಚ್ಚರಿಕೆ ನೀಡಿದೆ. *ಮನವೊಲಿಕೆಗೆ ವಿಫಲ ಯತ್ನ ಅಂತರ್ ಧಮೀರ್ಯ ವಿವಾಹವಾಗುವುದು ಬೇಡ, ಆಗಿರುವ ತಪು$್ಪ ಆಗಿ ಹೋಗಿದೆ. ಇನ್ನು ಬಿಟ್ಟು ಮನೆ ಬಾ ಎಂದು ನಜ್ಮಾ ಪಾಲಕರು ಮನವೊಲಿಸಲು ಯತ್ನಿಸಿದರು. ಆದರೆ, ಇದಕ್ಕೆ ಯುವತಿ ಸೊಪು$್ಪ ಹಾಕಿಲ್ಲ. ಪ್ರೀತಿಸಿ ಮದುವೆಯಾಗಿದ್ದವನನ್ನು ಬಿಟ್ಟು ಬರಲು ಸಾಧ್ಯವಿಲ್ಲ. ನಮ್ಮ ಪಾಡಿಗೆ ನಮ್ಮನ್ನು ಬಿಟ್ಟು ಬಿಡಿ ಎಂದು ಹೇಳಿದರು. ಇದೇ ವೇಳೆ ಹೆಂಡತಿಯನ್ನು ಪ್ರೀತಿಯಿಂದ ನೋಡಿಕೊಳ್ಳುವುದಾಗಿ ಹರೀಶ್ ಬಾಬು ಪೊಲೀಸರಿಗೆ ತಿಳಿಸಿದರು.
ದ್ರಾಕ್ಷಿ ಇಳುವರಿ, ಹೊಟ್ಟೆ ಕಿಚ್ಚಿಗೆ ವಾಮಾಚಾರ ಮಾಡಿದ ಕಿಡಿಗೇಡಿಗಳು
ಚಿಕ್ಕಬಳ್ಳಾಪುರ: ತಾಲೂಕಿನ ನಕ್ಕನಹಳ್ಳಿಯಲ್ಲಿ ಕಟಾವಿಗೆ ಬಂದ ದ್ರಾಕ್ಷಿ ತೋಟಕ್ಕೆ ಕಿಡಿಗೇಡಿಗಳು ವಾಮಾಚಾರ ಮಾಡಿಸಿರುವ ಆರೋಪ ಕೇಳಿ ಬಂದಿದೆ. ತೋಟದ ಸಮೀಪ ಕುಂಕುಮ, ಅರಿಶಿನ, ಮೊಟ್ಟೆಗಳನ್ನಿಟ್ಟು ಕ್ಷುದ್ರ ಪೂಜೆ ನೆರವೇರಿಸಲಾಗಿದೆ. ಇದರ ಮೂಲಕ ಬೆಳೆ ಹಾಳು ಮಾಡಲು ವಿರೋಧಿಗಳು ಯತ್ನಿಸಿದ್ದಾರೆ. ಇದರ ಬಗ್ಗೆ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ರೈತ ಪ್ರಭಾಕರ್ ಪೊಲೀಸರಿಗೆ ದೂರು ನೀಡಿದ್ದಾರೆ. ಜಮೀನುಗಳ ಗಡಿ ವಿವಾದ, ಕೌಟುಂಬಿಕ ಕಲಹ ಸೇರಿದಂತೆ ನಾನಾ ಕಾರಣಗಳ ಹಿನ್ನೆಲೆಯಲ್ಲಿ ಪರಸ್ಪರ ನೆರೆಹೊರೆಯವರೊಂದಿಗೆ ಪ್ರತ್ಯಕ್ಷ ಪರೋಕ್ಷ$ವಾಗಿ ಸಂರ್ಷ ನಡೆಸುವ ಪ್ರಕರಣಗಳು ನಿರಂತರವಾಗಿ ವರದಿಯಾಗುತ್ತಿವೆ. ಕೃಷಿ ಜಮೀನಿನಲ್ಲಿ ಒಳ್ಳೆಯ ಇಳುವರಿ ಕೊಡುವ ಗಿಡಗಳನ್ನು ಕತ್ತರಿಸಿ ಹಾಕುವುದು, ಪಂಪ್ ಮೋಟಾರ್ಗಳನ್ನು ಹೊಡೆದು ಹಾಕುವುದು, ಕೋಳಿ ಹಾಗೂ ನಾಯಿಗಳಿಗೆ ವಿಷ ಉಣಿಸುವುದು ಸೇರಿದಂತೆ ನಾನಾ ಗಲಾಟೆಗಳು ನಡೆದಿದ್ದು ಪೊಲೀಸ್ ಠಾಣೆಯ ಮೆಟ್ಟಿಲೇರಿವೆ. ಇದರಿಂದ ಗ್ರಾಮದಲ್ಲಿ ಶಾಂತಿ ನೆಮ್ಮದಿಯು ಹಾಳಾಗುತ್ತಿದೆ. ಇದರ ನಡುವೆ ತೋಟದ ಬಳಿಕ ವಾಮಾಚಾರ ಮಾಡಿಸಿರುವ ಪ್ರಕರಣ ನಡೆದು ವ್ಯಾಪಕ ಚರ್ಚೆಗೆಗ್ರಾಸವಾಗಿದೆ. ಇಲ್ಲಿ ಒಳ್ಳೆಯ ಇಳುವರಿ ದ್ರಾಯು ಮಾರಾಟವಾಗಬಾರದು. ಎದುರಾಳಿಗೆ ಲಾಭ ಸಿಗಬಾರದು. ಏನಾದರೂ ಕೆಡುಕಾಗಲಿ ಎಂಬ ಭಾವನೆಯಲ್ಲಿ ಕ್ಷುದ್ರ ಪೂಜೆ ನಡೆದಿದೆ ಎನ್ನಲಾಗುತ್ತಿದೆ.
ಸಿಎಂಆರ್‌ಐಟಿಯಲ್ಲಿ ಸೋಶಿಯಲ್ ಹ್ಯಾಕಥಾನ್ ಸ್ಪರ್ಧೆ: ರಸ್ತೆಗುಂಡಿ ಪತ್ತೆಹಚ್ಚಿ ಅಪಘಾತ ತಡೆವ ಸಾದನ ಶೋಧ
ಬೆಂಗಳೂರು: ನಗರದ ಸಿಎಂಆರ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಎರಡು ದಿನಗಳ ರಾಷ್ಟ್ರೀಯ ಮಟ್ಟದ ‘ಸೋಶಿಯಲ್ ಹ್ಯಾಕಥಾನ್-2025’…
ದೇವಳದ ಒತ್ತುವರಿ ಜಾಗ ಸ್ವಾಧೀನ
ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಒತ್ತುವರಿಯಾಗಿರುವ ಜಾಗವನ್ನು ಸ್ವಾಧೀನ ಮಾಡುವ ಕಾರ್ಯ ಮುಂದುವರಿದೆ. ನೆಲ್ಲಿಕಟ್ಟೆಯಲ್ಲಿ…
ವಿದ್ಯುತ್ ತಂತಿ ತುಂಡಾಗಿ ಬಿದ್ದು, ಎಮ್ಮೆ ಸಾವನಪ್ಪಿದೆ
ಮಳವಳ್ಳಿ: ತಾಲೂಕಿನ ಚಂದಳ್ಳಿ ಗ್ರಾಮದ ಹೊರವಲಯದಲ್ಲಿ ಮೇಯುತ್ತಿದ್ದ ಎಮ್ಮೆಯ ಮೇಲೆ ಗುರುವಾರ ಸಂಜೆ ವಿದ್ಯುತ್ ತಂತಿ…