ಭಾರತದ ಆರ್ಥಿಕತೆಗೆ ಬಹುದೊಡ್ಡ ಕೊಡುಗೆ ನೀಡುತ್ತಿರುವ ರಿಯಲ್ ಎಸ್ಟೇಟ್ ಉದ್ಯಮ 2020ರಲ್ಲಿ ಹೊಸ ಆಯಾಮ ಪಡೆದುಕೊಳ್ಳಲಿದೆ. ಕಳೆದ ಕೆಲ ವರ್ಷಗಳಿಂದ ವಿವಿಧ ಉದ್ಯಮಗಳಿಗೆ ಸಂಬಂಧಿಸಿದಂತೆ ಕೇಂದ್ರೀಕೃತವಾಗಿದ್ದ ರಿಯಲ್ಎಸ್ಟೇಟ್ ಕ್ಷೇತ್ರ 2020ರಲ್ಲಿ ವಸತಿ ಮತ್ತು ವಾಣಿಜ್ಯ ಕ್ಷೇತ್ರಗಳತ್ತ ಹೊರಳಲು ಸಿದ್ಧತೆ ನಡೆಸಿದೆ ಎಂದು ರಿಯಲ್ಎಸ್ಟೇಟ್ ತಜ್ಞರು ಅವಲೋಕಿಸುತ್ತಿದ್ದಾರೆ.
ಭಾರತೀಯ ಬ್ರ್ಯಾಂಡ್ ಇಕ್ವಿಟಿ ಫೌಂಡೇಷನ್ನ ವರದಿಯಂತೆ 2030ರ ವೇಳೆಗೆ ಭಾರತದ ರಿಯಲ್ ಎಸ್ಟೇಟ್ ಉದ್ಯಮದ ಮಾರುಕಟ್ಟೆ ವ್ಯಾಪ್ತಿ 1 ಟ್ರಿಲಿಯನ್ ಡಾಲರ್ಗೆ ತಲುಪುವ ನಿರೀಕ್ಷೆಯಿದೆ ಹಾಗೂ 2025ಕ್ಕೆ ದೇಶದ ಜಿಡಿಪಿಗೆ ಶೇ. 13 ರಿಯಲ್ಎಸ್ಟೇಟ್ನ ಕೊಡುಗೆಯಾಗಲಿದೆ. ವರದಿಯಲ್ಲಿ ಉಲ್ಲೇಖಿಸಿದ ಅಂಶಗಳನ್ನು ಅವಲೋಕಿಸಿದರೆ, 2020ರಿಂದ ಭಾರತೀಯ ರಿಯಲ್ಎಸ್ಟೇಟ್ ಉದ್ಯಮದಲ್ಲಿ ಸಾಕಷ್ಟು ಬದಲಾವಣೆಗಳಾಗಲಿದೆ ಎಂದು ತಿಳಿಸಲಾಗಿದೆ. ಭೂಮಿ ಖರೀದಿ ಮತ್ತು ಮಾರಾಟದ ಜತೆಗೆ ಕಟ್ಟಡ ನಿರ್ವಣಕ್ಕೆ ಸಂಬಂಧಿಸಿದ ಇತರ ಉದ್ಯಮಗಳು ಏಳಿಗೆ ಕಾಣಲಿವೆ. ಪ್ರಮುಖವಾಗಿ ಇಟ್ಟಿಗೆ, ಗಾರೆ, ಸಿಮೆಂಟ್ ಹೀಗೆ ಕಟ್ಟಡ ನಿರ್ವಣಕ್ಕೆ ಸಂಬಂಧಿಸಿದಂಥ ಉದ್ಯಮಗಳಿಗೆ ಹೆಚ್ಚಿನ ಬೇಡಿಕೆ ಬರಲಿದೆ. ಅದು ರಿಯಲ್ಎಸ್ಟೇಟ್ನ ಅಭಿವೃದ್ಧಿಗೆ ಪೂರಕವಾಗಿರಲಿದೆ.
ವಸತಿ ಮತ್ತು ವಾಣಿಜ್ಯ ಕೇಂದ್ರಿತ ಅಭಿವೃದ್ಧಿ: ಈ ಹಿಂದಿನ ವರ್ಷಗಳಲ್ಲಿ ಕಚೇರಿ ನಿರ್ವಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಹಿವಾಟು ನಡೆದಿತ್ತು. ಆದರೆ, 2020ರಲ್ಲಿ ವಸತಿ ಮತ್ತು ವಾಣಿಜ್ಯ ಚಟುವಟಿಕೆಗೆ ಅಗತ್ಯವಿರುವ ಭೂಮಿ ಖರೀದಿ-ಮಾರಾಟ, ನಿರ್ವಣಕ್ಕೆ ಸಂಬಂಧಿಸಿದ ವ್ಯವಹಾರ ಹೆಚ್ಚಾಗಲಿದೆ. ಇದು ರಿಯಲ್ ಎಸ್ಟೇಟ್ ಉದ್ಯಮದ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಅದರ ಜತೆಗೆ ಉಗ್ರಾಣ (ಗೋದಾಮು) ಕ್ಷೇತ್ರದ ರಿಯಲ್ಎಸ್ಟೇಟ್ಗೂ ಹೆಚ್ಚಿನ ಅವಕಾಶಗಳು ದೊರೆಯಲಿವೆ. ವಸತಿ ಮತ್ತು ವಾಣಿಜ್ಯ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ‘ಹೌಸಿಂಗ್ ಫಾರ್ ಆಲ್’ನಂತಹ ಯೋಜನೆಗಳು ಸಹಕಾರಿಯಾಗಲಿವೆ.
ಉಪನಗರಗಳಲ್ಲಿ ಹೆಚ್ಚಿನ ವಹಿವಾಟು: ಬೆಂಗಳೂರು, ಪುಣೆ, ಚೆನ್ನೈ, ಹೈದರಾಬಾದ್ನಂಥ ನಗರಗಳಲ್ಲಿ ಸಾಮಾನ್ಯವಾಗಿ ರಿಯಲ್ಎಸ್ಟೇಟ್ ಉದ್ಯಮಕ್ಕೆ ಹೆಚ್ಚಿನ ಬೇಡಿಕೆ ಬರಲಿದೆ. ಗೋವಾ, ಕೊಯಮತ್ತೂರ್ನಂಥ ದ್ವಿತೀಯ ಮಾರುಕಟ್ಟೆ ನಗರಗಳಲ್ಲೂ (ಉಪನಗರ) ಉದ್ಯಮಕ್ಕೆ ಹೆಚ್ಚಿನ ಅವಕಾಶ ದೊರೆಯಲಿದೆ.
ಸುಸ್ಥಿರ ಮತ್ತು ಹಸಿರು ಜೀವನಕ್ಕೆ ಒತ್ತು: ವಸತಿ ಮತ್ತು ಉದ್ಯಮ ಕ್ಷೇತ್ರದಲ್ಲಿ ಪ್ರಮುಖವಾಗಿ ಸುಸ್ಥಿರ ಮತ್ತು ಹಸಿರು ಹೆಚ್ಚಿರುವ ಜೀವನಕ್ಕೆ ಜನರು ಒತ್ತು ನೀಡುವ ಸಾಧ್ಯತೆಗಳಿವೆ. ನಿರ್ಮಾಣ ಕ್ಷೇತ್ರದಲ್ಲಿರುವವರು ಮತ್ತು ಮನೆಗಳನ್ನು ಕೊಳ್ಳುವವರು ಹಸಿರು ತಂತ್ರಜ್ಞಾನದ ಬಗ್ಗೆ ಈಗಾಗಲೇ ಒಲವು ತೋರಿದ್ದಾರೆ. ಅದರ ಪ್ರಮಾಣ 2020ರಲ್ಲಿ ಹೆಚ್ಚಲಿದೆ.
ತಂತ್ರಜ್ಞಾನ ಆಧಾರಿತ ಮಾರುಕಟ್ಟೆ: ರಿಯಲ್ಎಸ್ಟೇಟ್ ಉದ್ಯಮಕ್ಕೆ ಸಹಕಾರಿಯಾಗುವಂತಹ ಹೊಸ ಹೊಸ ತಂತ್ರಜ್ಞಾನಗಳು ಆವಿಷ್ಕಾರಗೊಳ್ಳುತ್ತಿವೆ. ಸ್ಮಾರ್ಟ್ ತಂತ್ರಜ್ಞಾನ, ಆವಿಷ್ಕಾರಗಳು ಭವಿಷ್ಯದ ನಿರ್ವಣಗಳತ್ತ ಗಮನ ಹರಿಸುವಂತೆ ಮಾಡಿವೆ. ಕೃತಕ ಬುದ್ಧಿಮತ್ತೆ, ಯಂತ್ರೋಪಕರಣಗಳು ಭಾರತದ ರಿಯಲ್ಎಸ್ಟೇಟ್ ಸೆಕ್ಟರ್ನಲ್ಲಿ ಹೆಚ್ಚಿನ ಸದ್ದು ಮಾಡಲಿವೆ. ಹೊಸ ವಿನ್ಯಾಸದ ನಿರ್ವಣಕ್ಕೆ ಸಹಕಾರಿಯಾಗಲಿವೆ. ಅವುಗಳ ಜತೆಗೆ ಗುಣಮಟ್ಟದ ನಿರ್ಮಾಣ ಮತ್ತು ನಿಗದಿತ ಸಮಯದಲ್ಲಿ ಯೋಜನೆಗಳನ್ನು ಪೂರ್ಣಗೊಳಿಸುವುದಕ್ಕೆ ಸಂಬಂಧಿಸಿದ ತಂತ್ರಜ್ಞಾನಗಳ ಆವಿಷ್ಕಾರ ಹೆಚ್ಚಾಗಲಿವೆ. ಸದ್ಯ ಭಾರತದ ಸ್ಮಾರ್ಟ್ ಹೋಮ್ ಮಾರುಕಟ್ಟೆ ಮೌಲ್ಯ 893 ಮಿಲಿಯನ್ ಡಾಲರ್ ಆಗಿದ್ದು, ಮುಂದಿನ 5 ವರ್ಷದಲ್ಲಿ ಅದು ದುಪ್ಪಟ್ಟಾ ಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಹೆಚ್ಚಿದ ಅಪಾರ್ಟ್ವೆುಂಟ್: ಕಳೆದ ಕೆಲ ವರ್ಷಗಳಿಂದ ಸಹ ಬಾಳ್ವೆಯ ಅಡಿಯಲ್ಲಿ ನಿರ್ವಣವಾಗುತ್ತಿರುವ ಅಪಾರ್ಟ್ ಮೆಂಟ್ಗಳ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ. ಅದೇ ಮಾದರಿಯ ಕಟ್ಟಡಗಳ ನಿರ್ವಣದ ಸಂಖ್ಯೆಯೂ ಹೆಚ್ಚಳವಾಗಲಿದೆ. ಅದರ ಜತೆಗೆ ಒಂದೆ ಕಡೆ ವಿವಿಧ ಸಂಸ್ಥೆಗಳ ಕಚೇರಿಗಳನ್ನು ಆರಂಭಿಸುವ ಅವಕಾಶವಿರುವಂತಹ ಕಟ್ಟಡ ನಿರ್ವಣದ ಸಂಖ್ಯೆಯೂ ಏರಿಕೆಯಾಗಲಿದೆ. ಪ್ರಮುಖವಾಗಿ ಬೆಂಗಳೂರು, ಪುಣೆಯಂತಹ ವ್ಯವಸ್ಥಿತ ಮಾರುಕಟ್ಟೆಯಲ್ಲಿ ಅದಕ್ಕೆ ಪೂರಕ ವಾತಾವರಣವಿದ್ದು, ಆ ರೀತಿಯ ಚಟುವಟಿಕೆಗಳು ಹೆಚ್ಚಲಿವೆ. ಇದು 2020ರ ರಿಯಲ್ಎಸ್ಟೇಟ್ ಉದ್ಯಮದ ಬೆಳವಣಿಗೆಗೆ ಸಹಕಾರಿಯಾಗಲಿದೆ.
ರಿಯಾಲ್ಟಿ ಕ್ಷೇತ್ರದಲ್ಲಿ ಪಾರದರ್ಶಕತೆ ಮತ್ತು ಗ್ರಾಹಕ ಕೇಂದ್ರಿತ ವ್ಯವಹಾರಗಳನ್ನು ಉತ್ತಮ ಪಡಿಸಲು 2019ರಲ್ಲಿ ಸಾಕಷ್ಟು ಪ್ರಯೋಗಗಳು ನಡೆದಿವೆ. ಅದರ ಲಾಭ 2020ರಲ್ಲಿ ದೊರೆಯಲಿದ್ದು, ರಿಯಲ್ಎಸ್ಟೇಟ್ ಉದ್ಯಮದಲ್ಲಿ ಭಾರಿ ಬದಲಾವಣೆಯಾಗಲಿದೆ. ಪ್ರಮುಖವಾಗಿ ವಸತಿ ಮತ್ತು ಉದ್ಯಮಗಳಿಗೆ ಸಂಬಂಧಿಸಿದ ನಿರ್ಮಾಣ ಹೆಚ್ಚಲಿದೆ.
| ಆಶೀಶ್ ಆರ್. ಪುರವಂಕರ ಪುರವಂಕರ ಲಿ.ನ ವ್ಯವಸ್ಥಾಪಕ ನಿರ್ದೇಶಕ
ಗಿರೀಶ್ ಗರಗ