ಮಂಡ್ಯ ಲೋಕಸಭಾ ಕ್ಷೇತ್ರದಿಂದ ಅಂಬರೀಷ್‌ ಪತ್ನಿ ಸುಮಲತಾ ಸ್ಪರ್ಧೆ?

ಬೆಂಗಳೂರು: ನಟ, ರಾಜಕಾರಣಿ ದಿ. ಅಂಬರೀಷ್ ಅವರ ಪತ್ನಿ ಸುಮಲತಾ ಅವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಹೌದು, ನಿನ್ನೆ ಮಂಡ್ಯದಲ್ಲಿ ನಡೆದ ಅಂಬರೀಷ್ ನುಡಿನಮನ ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್‌ ಗಣ್ಯರು ಚುನಾವಣೆಯಲ್ಲಿ ಸ್ಪರ್ಧಿಸಲು ಒತ್ತಾಯಿಸಿದ್ದಾರೆ. ಇದಕ್ಕೆ ಸುಮಲತಾ ಅವರು ಕೆಲದಿನಗಳ ಕಾಲಾವಕಾಶ ಕೇಳಿದ್ದಾರೆ ಎನ್ನಲಾಗಿದೆ.

ರಾಜಕೀಯದಿಂದ ದೂರ ಸರಿಯದೆ ಅಂಬರೀಷ್ ಅವರ ರಾಜಕೀಯ ಪಥದತ್ತ ಸಾಗಲು ಸುಮಲತಾಗೆ ಒತ್ತಾಯಿಸಿ ಮಂಡ್ಯ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸುವಂತೆ ಸ್ಯಾಂಡಲ್‌ವುಡ್‌ ಆಗ್ರಹಿಸಿದೆ.

ಯಾವ ಪಕ್ಷದಿಂದ ಸ್ಪರ್ಧೆ ಮಾಡಬೇಕು ಎನ್ನುವುದನ್ನು ನೀವೇ ನಿರ್ಧರಿಸಿ. ಆದರೆ ನೀವು ಸ್ಪರ್ಧೆ ಮಾಡಲೇಬೇಕು. ಇಡೀ ಚಿತ್ರರಂಗ ನಿಮ್ಮ ಬೆಂಬಲಕ್ಕೆ ನಿಲ್ಲಲಿದೆ. ಈ ಕುರಿತು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವಂತೆ ಹಕ್ಕೋತ್ತಾಯ ಮಾಡಿದ್ದಾರೆ. ಸ್ಯಾಂಡಲ್‌ವುಡ್‌ ಜತೆಗೆ ಮಂಡ್ಯದ ಕೈ ಕಾರ್ಯಕರ್ತರು ಕೂಡ ಕೈಜೋಡಿಸಿದ್ದು, ಜೆಡಿಎಸ್ ವಿರೋಧಿ ಕಾಂಗ್ರೆಸ್ ನಾಯಕರಿಂದಲೂ ಬೆಂಬಲ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *