2010 ಲೀ. ಬೆಲ್ಲದ ಕೊಳೆ ವಶ

ಕುಮಟಾ: ಕಳ್ಳಬಟ್ಟಿ ಸಾರಾಯಿ ತಯಾರಿಸುವ ಉದ್ದೇಶದಿಂದ ಸಂಗ್ರಹಿಸಿಟ್ಟಿದ್ದ 2010 ಲೀ. ಬೆಲ್ಲದ ಕೊಳೆಯನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿ ನಾಶಪಡಿಸಿದ ಘಟನೆ ತಾಲೂಕಿನ ಕೋಳಿಮಂಜಗುಣಿ ಗ್ರಾಮದ ದಾಸನಗದ್ದೆ ಗುಡ್ಡದಲ್ಲಿ ಶುಕ್ರವಾರ ನಡೆದಿದೆ. ಪತ್ತೆಯಾದ ಬೆಲ್ಲದ ಮೌಲ್ಯ 1,00,500 ರೂ.ಗಳೆಂದು ಅಂದಾಜಿಸಲಾಗಿದೆ. ಜಿಲ್ಲಾ ಅಬಕಾರಿ ಡೆಪ್ಯೂಟಿ ಕಮಿಷನರ್ ಸೀಮಾ, ಸಬ್​ಇನ್ಸ್​ಪೆಕ್ಟರ್ ಅರವಿಂದ, ಸಿಬ್ಬಂದಿ ಹಮೀದ್, ಕೆ.ಟಿ. ನಾಯ್ಕ, ನಾಗೇಶ ಮತ್ತು ಹೋಮ್ಾರ್ಡ್ ದಯಾನಂದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *