ಜಿಲ್ಲೆಗೆ 20 ಸಾವಿರ ಸಸಿ!

blank

ಶಿವರಾಜ ಎಂ ಬೆಂಗಳೂರು ಗ್ರಾಮಾಂತರ
ರಾಜ್ಯ ರಾಜಧಾನಿ ಬೆಂಗಳೂರಿನ ಗಡಿ ಹಂಚಿಕೊಂಡಿರುವ ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಶೀಘ್ರದಲ್ಲೇ 20 ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ಕೆ ಚಾಲನೆ ದೊರೆಯಲಿದೆ..!
ಬೆಂಗಳೂರು ನಗರದ ಸಂಚಾರ ನಾಡಿಯಾಗಿರುವ ನಮ್ಮ ಮೆಟ್ರೋ ನಿರ್ವಹಣೆ ಮಾಡುತ್ತಿರುವ ಬಿಎಂಆರ್‌ಸಿಎಲ್ ಇಂಥಹದ್ದೊಂದು ಕಾರ್ಯಕ್ಕೆ ಮುಂದಾಗಲಿದೆ ಎನ್ನಲಾಗಿದೆ. ಜಿಲ್ಲೆಯ ನಾಲ್ಕೂ ತಾಲೂಕುಗಳು ಬೆಂಗಳೂರಿನ ಗಡಿಹಂಚಿಕೊಂಡಿದ್ದು ನಾಲ್ಕೂ ತಾಲೂಕು ವ್ಯಾಪ್ತಿಯಲ್ಲಿಯೂ ಸಸಿಗಳನ್ನು ಹಂಚಿಕೆ ಮಾಡಲು ಬಿಎಂಆರ್‌ಸಿಎಲ್ ಉದ್ದೇಶಿಸಿದೆ ಎನ್ನಲಾಗಿದೆ. ನಮ್ಮ ಮೆಟ್ರೋ ಕನಸಿನ ಈ ಯೋಜನೆಗೆ 5.28 ಕೋಟಿ ಹಣ ಮೀಸಲಿಡಲಾಗಿದೆ, ಮೂರುವರೆ ವರ್ಷದ ಅವಧಿಯಲ್ಲಿ 4 ಹಂತದಲ್ಲಿ ಕಾರ್ಯ ನಡೆಯಲಿದೆ ಎಂಬ ಮಾತು ಕೇಳಿಬರುತ್ತಿದೆ.

ಸಸಿ ನೆಡಲು ಪ್ರಮುಖ ಕಾರಣ: ಬೆಂಗಳೂರಿನಲ್ಲಿ ಜನಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ, ಟ್ರಾಫಿಕ್ ಸಮಸ್ಯೆ ಜ್ವಲಂತವಾಗಿ ಕಾಡುತ್ತಿದೆ, ಸಾರಿಗೆ ವ್ಯವಸ್ಥೆಯಲ್ಲಿ ಮೆಟ್ರೋ ಪ್ರಮುಖ ಪಾತ್ರ ವಹಿಸಿದ್ದು, ಇದರ ವಿಸ್ತರಣೆಯೂ ಹೆಚ್ಚುತ್ತಿದೆ. ಆದರೆ ಮೆಟ್ರೋ ವಿಸ್ತರಣೆ ಬೃಹತ್ ಮರಗಳಿಗೆ ಕೊಡಲಿಪೆಟ್ಟು ಬೀಳಿಸುತ್ತಿದೆ. ಸಾವಿರಾರು ಮರಗಳ ಹನನವಾಗುತ್ತಿದ್ದು ಪರಿಸರ ಪ್ರೇಮಿಗಳ ಕೆಂಗಣ್ಣಿಗೂ ಕಾರಣವಾಗಿದೆ. ಆದರೆ ಬೆಂಗಳೂರಿನ ಸಂಚಾರದಟ್ಟಣೆ ಒತ್ತಡ ತಗ್ಗಿಸುವ ನಿಟ್ಟಿನಲ್ಲಿ ಮೆಟ್ರೋ ವಿಸ್ತರಣೆ ಅನಿವಾರ್ಯವಾಗಿರುವುದರಿಂದ ಬಿಎಂಆರ್‌ಸಿಎಲ್ ಸಸಿಗಳ ನೆಡುವ ಆಂದೋಲನಕ್ಕೆ ರೂಪುರೇಷೆ ಸಿದ್ದಪಡಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಜಿಲ್ಲೆಯ ಆಯ್ಕೆ:
ಬೆಂಗಳೂರಿಗೆ ಸಮೀಪದಲ್ಲಿರುವ ಗ್ರಾಮಾಂತರ ಜಿಲ್ಲೆಯಲ್ಲಿ ಸಸಿನೆಡುವುದು ಹೆಚ್ಚು ಸೂಕ್ತ ಎಂಬ ನಿರ್ಧಾರಕ್ಕೆ ಬಂದಿರುವ ಬಿಎಂಆರ್‌ಸಿಎಲ್ ಬೆಂಗಳೂರಿಗೆ ಹೊಂದಿಕೊಂಡಂತೆ ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಅರಣ್ಯ ಸಸಿಗಳನ್ನು ನೆಡಲು ಉದ್ದೇಶಿಸಿದೆ. ಇದು ಸಾರ್ವಜನಿಕ ವಲಯದಿಂದಲೂ ಮೆಚ್ಚುಗೆ ವ್ಯಕ್ತವಾಗಿದ್ದು ಮೆಟ್ರೋ ಅಧಿಕಾರಿಗಳು ಸಸಿಗಳನ್ನು ನೆಡುವ ಯೋಜನೆಗೆ ಹೆಚ್ಚು ಉತ್ಸುಕತೆ ತೋರಿಸುತ್ತಿದ್ದಾರೆ.

5.28 ಕೋಟಿ ರೂ.: ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯಲ್ಲಿ ಸುಮಾರು 20 ಸಾವಿರ ಸಸಿಗಳನ್ನು ನೆಡಲು ಉದ್ದೇಶಿಸಿದ್ದು ಇದಕ್ಕೆ 5.28 ಕೋಟಿ ರೂ.ಮೀಸಲಿಡಲಾಗಿದೆ ಎನ್ನಲಾಗಿದೆ. ನಮ್ಮ ಮೆಟ್ರೋದ 2ಎ, 2 ಬಿ ಹಂತದ ಯೋಜನೆಗಾಗಿ 7,252 ಮರಗಳಿಗೆ ಕತ್ತರಿ ಹಾಕಲಾಗಿದೆ. ಈ ಮರಗಳಿಗೆ ಪರ್ಯಾಯವಾಗಿ ಬೆಂಗಳೂರು ಹೊರವಲಯದಲ್ಲಿ 20 ಸಾವಿರ ಗಿಡಗಳನ್ನು ನಡೆಲು ಬಿಎಂಆರ್‌ಸಿಎಲ್ ಮುಂದಾಗಿದೆ. ನಮ್ಮ ಮೆಟ್ರೋ ಯೋಜನೆಗಳಿಗಾಗಿ 2021-2023 ಅವಧಿಯಲ್ಲಿ 3626 ಮರಗಳಿಗೆ ಕತ್ತರಿ ಹಾಕಲಾಗಿದೆ. 2021 ರಿಂದ 2022 ರವರೆಗೆ 856 ಮರಗಳನ್ನು ನಗರದ ವಿವಿಧ ಭಾಗಗಳಿಗೆ ಹಾಗೂ ಹೊರವಲಯಕ್ಕೆ ಸ್ಥಳಾಂತರ ಮಾಡಲಾಗಿದೆ. ಅದೇ ರೀತಿ 2022 ರಿಂದ ಜನವರಿ 2023ರವರೆಗೆ ಹಂತ 2 ಎ ಮತ್ತು ಹಂತ 2 ಬಿ ಗಾಗಿ 107 ಮರಗಳನ್ನು ಸ್ಥಳಾಂತರ ಮಾಡಲಾಗಿದೆ. ಮತ್ತು 1165 ಮರಗಳನ್ನು ಕಡಿಯಲಾಗಿದೆ. 1193 ಮರಗಳನ್ನು ಯಶಸ್ವಿಯಾಗಿ ಸ್ಥಳಾಂತರ ಮಾಡಲಾಗಿದೆ.

ಷರತ್ತುಗಳೊಂದಿಗೆ ಟೆಂಡರ್: ಸಸಿಗಳನ್ನು ನೆಟ್ಟು ಕೈತೊಳೆದುಕೊಂಡರೆ ಸಾಲದು ಅವುಗಳನ್ನು ಸಮರ್ಪಕವಾಗಿ ಪೋಷಿಸಬೇಕು ಎಂಬುದು ಬಿಎಂಆರ್‌ಸಿಎಲ್ ಉದ್ದೇಶವಾಗಿದ್ದು ಇದಕ್ಕಾಗಿ ಟೆಂಡರ್ ಆಹ್ವಾನಿಸಲಾಗಿದೆ. ಸಸಿಗಳನ್ನು ನೆಟ್ಟು ಅವುಗಳಿಗೆ ರಕ್ಷಣೆ ಮಾಡುವುದು ಗೊಬ್ಬರ ನೀರು ಉಣಿಸುವುದು ಸೇರಿ ಹಾಳಾದ ಸಸಿಗಳ ಜಾಗದಲ್ಲಿ ಮತ್ತೆ ಸಸಿಗಳನ್ನು ನೆಟ್ಟು ಪೋಷಿಸುವುದು ಈ ಟೆಂಡರ್‌ನಲ್ಲಿರುವ ಪ್ರಮುಖ ಅಂಶಗಳಾಗಿವೆ ಎಂದು ಮೂಲಗಳು ತಿಳಿಸಿವೆ. ಒಂದೆಡೆ ಮೆಟ್ರೋಗಾಗಿ ನೂರಾರು ವರ್ಷದ ಮರಗಳು ಧರೆಗುರುಳುತ್ತಿವೆ ಎಂಬ ಬೇಸರ ಹತಾಶೆ ನಡುವೆ ಸಾವಿರಾರು ಸಸಿಗಳನ್ನು ನೆಟ್ಟು ಪೋಷಿಸುವ ಯೋಜನೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಯೂ ವ್ಯಕ್ತವಾಗಿದೆ. ಮೂರುವರೆ ವರ್ಷಗಳ ಕಾಲ ಸಸಿಗಳನ್ನು ನಿರ್ವಹಣೆ ಮಾಡುವ ಹೊಣೆ ಹೊತ್ತ ಗುತ್ತಿಗೆದಾರರು ಅಷ್ಟೇ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂಬುದು ಸಾರ್ವಜನಿಕರ ಮನವಿಯಾಗಿದೆ.

ಈಗಾಗಲೇ ಜಿಲ್ಲೆಯ ಹಲವು ಕಡೆ ಕೈಗಾರೀಕರಣದ ಹೆಸರಿನಲ್ಲಿ ಸಾವಿರಾರು ಎಕರೆ ಕೃಷಿಭೂಮಿ ಕಣ್ಮರೆಯಾಗುತ್ತಿದೆ, ಟೌನ್‌ಶ್ಿ ಮತ್ತೊಂದು ಮಗದೊಂದು ಎಂದು ನೂರಾರು ವರ್ಷದ ಮರಗಳಿಗೆ ಕೊಡಲಿಪೆಟ್ಟು ಹಾಕಲಿದ್ದಾರೆ, ನಮ್ಮ ಮೆಟ್ರೋ ವತಿಯಿಂದ ಸಸಿಗಳನ್ನು ನೆಡುವ ಯೋಜನೆ ಸ್ವಾಗತಾರ್ಹವಾಗಲಿ, ಸಸಿಗಳನ್ನು ನೆಟ್ಟರಷ್ಟೇ ಸಾಲದು ಅವುಗಳನ್ನು ಪೋಷಿಸುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಮಾಡಬೇಕು.
ನಂಜಪ್ಪ, ಭೂಸ್ವಾಧೀನ ವಿರೋಧಿ ಹೋರಾಟಗಾರ

ಬಿಎಂಆರ್‌ಸಿಎಲ್‌ನಿಂದ ಗ್ರಾಮಾಂತರ ಜಿಲ್ಲೆಯಲ್ಲಿ ಸಸಿಗಳನ್ನು ನೆಡುವ ಯೋಜನೆ ಬಗ್ಗೆ ನಮಗೆ ಮಾಹಿತಿ ಬಂದಿಲ್ಲ, ಇದೊಂದು ಉತ್ತಮ ಕೆಲಸವಾಗಿರುವುದರಿಂದ ಇದಕ್ಕೆ ಜಿಲ್ಲಾಡಳಿತದಿಂದ ಸಂಪೂರ್ಣ ಸಹಕಾರ ಸಿಗಲಿದೆ. ಪರಿಸರ ರಕ್ಷಣೆ ವಿಷಯದಲ್ಲಿ ಜಿಲ್ಲಾಡಳಿತವೂ ಎಲ್ಲ ಬಗೆಯಲ್ಲಿಯೂ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ.
ಎಚ್.ಅಮರೇಶ್, ಅಪರ ಜಿಲ್ಲಾಧಿಕಾರಿ

Share This Article

ಅಪ್ಪಿತಪ್ಪಿಯೂ ಈ ಆಹಾರಗಳನ್ನು ತುಪ್ಪದೊಂದಿಗೆ ಸೇವಿಸಬೇಡಿ; ಉತ್ತಮ ಆರೋಗ್ಯಕ್ಕಾಗಿ ತಿಳಿದುಕೊಳ್ಳಲೇಬೇಕಾದ ಮಾಹಿತಿ | Health Tips

ಭಾರತೀಯ ಪಾಕಪದ್ಧತಿಯಲ್ಲಿ ತುಪ್ಪಕ್ಕೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಆಯುರ್ವೇದದಲ್ಲಿ ತುಪ್ಪವು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, ಆರೋಗ್ಯಕ್ಕೂ…

ಕಾಫಿ ಕುಡಿಯುವಾಗ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಪ್ರಪಂಚದಾದ್ಯಂತ ಕಾಫಿ ಪ್ರಿಯರನ್ನು ಕಾಣಬಹುದು. ಇಲ್ಲಿಯವರೆಗೆ ಕಾಫಿಯ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆದಿದ್ದು, ಇದು ಅದರ…

ಕಪ್ಪು ದ್ರಾಕ್ಷಿ vs ಹಸಿರು ದ್ರಾಕ್ಷಿ.. ಆರೋಗ್ಯಕ್ಕೆ ಯಾವುದು ಉತ್ತಮ..? grapes

grapes: ದ್ರಾಕ್ಷಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಈ ಹಣ್ಣುಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಹಸಿರು…