20 ರೂ. ಬದಲು 28 ಸಾವಿರ ರೂ.

ಹೋಟೆಲ್​ಗೆ ಹೋದಾಗ ಟಿಪ್ಸ್ ಕೊಡುವುದು ಸಾಮಾನ್ಯ. ಆದರೆ ಅಹಮದಾಬಾದ್​ಗೆ ಬಂದಿದ್ದ ನಾರ್ವೆಯ ಪ್ರವಾಸಿಗರೊಬ್ಬರು ಕ್ಷೌರ ಮಾಡಿದ ವ್ಯಕ್ತಿಗೆ 20 ರೂ. ಬದಲು 28 ಸಾವಿರ ರೂ. ಕೊಟ್ಟು ಅಚ್ಚರಿ ಮೂಡಿಸಿದ್ದಾರೆ. ಖ್ಯಾತ ಯುಟ್ಯೂಬರ್ ಹರಾಲ್ಡ್ ಬಾಲ್ಡ್ ್ರ ಅಹಮದಾಬಾದ್ ಪ್ರವಾಸದಲ್ಲಿದ್ದಾಗ ರಸ್ತೆಬದಿಯಲ್ಲಿ ಕ್ಷೌರ ಮಾಡಿಸಿಕೊಂಡರು. ಬಳಿಕ ಎಷ್ಟಾಯಿತೆಂದು ಕೇಳಿದಾಗ, 20 ರೂ. ಎಂಬ ಉತ್ತರ ಬಂತು. ವಿದೇಶಿಗ ಎಂದು ಹೆಚ್ಚು ಶುಲ್ಕ ಕೇಳದ ಈ ಪ್ರಾಮಾಣಿಕತೆಗೆ ಬೆರಗಾದ ಅವರು, ಬಹಳ ಸಂತೋಷಪಟ್ಟು 400 ಡಾಲರ್ (ಅಂದಾಜು 28 ಸಾವಿರ ರೂ.) ಕೊಟ್ಟಿದ್ದಾರೆ. ಯುಟ್ಯೂಬ್ ವಿಡಿಯೋ ಮಾಡಿ ಜಗತ್ತು ಸುತ್ತುವ ಅವರು, ಜನರಿಂದ ಸಂಗ್ರಹಿಸಿದ ಹಣವನ್ನು ಇಂಥ ಅರ್ಹ ವ್ಯಕ್ತಿಗೆ ಕೊಟ್ಟು ನೆರವಾಗುತ್ತಾರೆ.