More

    ಷೇರು ಬೆಲೆ ಒಂದೇ ದಿನದಲ್ಲಿ 20% ಏರಿಕೆ: ಜವಳಿ ಕಂಪನಿ ಸ್ಟಾಕ್​ಗೆ ಇಷ್ಟೊಂದು ಬೇಡಿಕೆ ಏಕೆ?

    ಮುಂಬೈ: ಜವಳಿ ಉದ್ಯಮಕ್ಕೆ ಸಂಬಂಧಿಸಿದ ನಂದನ್ ಡೆನಿಮ್ ಕಂಪನಿಯ ಷೇರುಗಳಲ್ಲಿ ಭಾರಿ ಏರಿಕೆಯಾಗಿದೆ. ನಂದನ್ ಡೆನಿಮ್ ಷೇರುಗಳ ಬೆಲೆ ಮಂಗಳವಾರ ಶೇ. 20ರಷ್ಟು ಏರಿಕೆ ಕಂಡು 52.82 ರೂ.ಗೆ ತಲುಪಿದೆ.

    ಈ ಮೂಲಕ ಕಂಪನಿಯ ಷೇರುಗಳ ಬೆಲೆ ಮಂಗಳವಾರ 52 ವಾರಗಳ ಹೊಸ ಗರಿಷ್ಠ ಮುಟ್ಟಿದೆ. ದೊಡ್ಡ ನಿರ್ಧಾರದ ಕಾರಣದಿಂದಾಗಿಯೇ ನಂದನ್ ಡೆನಿಮ್ ಷೇರುಗಳಲ್ಲಿ ಈ ತೀವ್ರ ಏರಿಕೆ ಕಂಡುಬಂದಿದೆ. ಕಂಪನಿಯ ಮಂಡಳಿಯು 1:10 ಅನುಪಾತದಲ್ಲಿ ಷೇರು ವಿಭಜನೆಯನ್ನು ಅನುಮೋದಿಸಿದೆ. ಅಂದರೆ, ಕಂಪನಿಯು ರೂ. 10 ಮುಖಬೆಲೆಯ ಷೇರುಗಳನ್ನು ರೂ.1 ಮುಖಬೆಲೆಯ 10 ಷೇರುಗಳಾಗಿ ವಿಂಗಡಿಸುತ್ತದೆ.

    ಕಳೆದ ಒಂದು ವರ್ಷದಲ್ಲಿ ನಂದನ್ ಡೆನಿಮ್ ಷೇರುಗಳ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಒಂದು ವರ್ಷದಲ್ಲಿ ಕಂಪನಿಯ ಷೇರುಗಳ ಬೆಲೆ 173%ಕ್ಕಿಂತ ಹೆಚ್ಚು ಏರಿಕೆಯಾಗಿದೆ. ಜೂನ್ 19, 2023 ರಂದು ನಂದನ್ ಡೆನಿಮ್ ಷೇರುಗಳ ಬೆಲೆ 19.33 ರೂ. ಇತ್ತು. ಕಂಪನಿಯ ಷೇರುಗಳ ಬೆಲೆ ಜೂನ್ 18, 2024 ರಂದು ರೂ 52.82 ತಲುಪಿದೆ. ಕಳೆದ 6 ತಿಂಗಳಲ್ಲಿ ಕಂಪನಿಯ ಷೇರುಗಳ ಬೆಲೆಯಲ್ಲಿ 88% ಜಿಗಿತ ಕಂಡುಬಂದಿದೆ. ಈ ಅವಧಿಯಲ್ಲಿ ಕಂಪನಿಯ ಷೇರುಗಳ ಬೆಲೆ ರೂ. 28.74ರಿಂದ ರೂ. 52ಕ್ಕೆ ಏರಿಕೆಯಾಗಿದೆ. ಈ ವರ್ಷ ಇಲ್ಲಿಯವರೆಗೆ ಕಂಪನಿಯ ಷೇರುಗಳ ಬೆಲೆ 87%ರಷ್ಟು ಏರಿಕೆ ಕಂಡಿದೆ.

    ಕಳೆದ ಒಂದು ತಿಂಗಳಲ್ಲಿ ನಂದನ್ ಡೆನಿಮ್ ಷೇರುಗಳ ಬೆಲೆ ಶೇ. 38ರಷ್ಟು ಏರಿಕೆ ಕಂಡಿದೆ. ಜವಳಿ ಉದ್ಯಮಕ್ಕೆ ಸಂಬಂಧಿಸಿದ ಕಂಪನಿಯ ಷೇರುಗಳ ಬೆಲೆ ಒಂದು ತಿಂಗಳಲ್ಲಿ 38.33 ರೂ.ನಿಂದ 52 ರೂ. ಆಗಿದೆ. ಕಳೆದ 3 ತಿಂಗಳಲ್ಲಿ ಕಂಪನಿಯ ಷೇರುಗಳ ಬೆಲೆ ಅಂದಾಜು 60 ಪ್ರತಿಶತದಷ್ಟು ಏರಿಕೆಯಾಗಿದೆ.

    See also  ಪಿಯುಸಿ ಮೊದಲ ದಿನ 88 ಗೈರು

    ನಂದನ್ ಡೆನಿಮ್ ಷೇರು ವಿಭಜನೆಯ ದಾಖಲೆ ದಿನಾಂಕವನ್ನು ಇನ್ನೂ ನಿಗದಿಪಡಿಸಿಲ್ಲ. ಕಂಪನಿಯು ತನ್ನ ಹೂಡಿಕೆದಾರರಿಗೆ ಮಾರ್ಚ್ 2022 ರಲ್ಲಿ 2:1 ಅನುಪಾತದಲ್ಲಿ ಬೋನಸ್ ಷೇರುಗಳನ್ನು ನೀಡಿತ್ತು. ಅಂದರೆ, ಕಂಪನಿಯು ಪ್ರತಿ 1 ಷೇರಿಗೆ 2 ಬೋನಸ್ ಷೇರುಗಳನ್ನು ವಿತರಿಸಿತ್ತು. ಕಂಪನಿಯ ಮಾರುಕಟ್ಟೆ ಮೌಲ್ಯ 761 ಕೋಟಿ ರೂ. ಇದೆ.

    ಗಣಿ ಕಂಪನಿಯ ಷೇರುಗಳ ಬೆಲೆ ಅಪ್ಪರ್​ ಸರ್ಕ್ಯೂಟ್​ ಹಿಟ್​: ಈ ಸುದ್ದಿಯೇ ಇದಕ್ಕೆ ಕಾರಣ…

    ಕುಸಿತ ಕಂಡಿದೆ ಪಿಎಸ್​ಯು ಷೇರು ಬೆಲೆ: ಮತ್ತೆ ಏರಲಿದೆ ಎನ್ನುತ್ತಾರೆ ತಜ್ಞರು

    ಈ ಐಪಿಒ ಬಿಡುಗಡೆ ಮುನ್ನವೇ ಗ್ರೇ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ: ಹೂಡಿಕೆದಾರರಿಗೆ ಮೊದಲ ದಿನವೇ 150% ಲಾಭ ಸಾಧ್ಯತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts