More

    ಬಸ್​-ಟ್ರಕ್​ ಡಿಕ್ಕಿಯಾಗಿ ಬೆಂಕಿಗೆ ಆಹುತಿ: 20 ಮಂದಿ ಸಾವು, ಪ್ರಧಾನಿ ಮೋದಿ ಸಂತಾಪ

    ಲಖನೌ: ಶುಕ್ರವಾರ ರಾತ್ರಿ ಉತ್ತರ ಪ್ರದೇಶದ ಕನ್ನೌಜ್​ ಜಿಲ್ಲೆಯ ಘಿನೊಐ ಎಂಬ ಗ್ರಾಮದ ಬಳಿ ಟ್ರಕ್​ ಡಿಕ್ಕಿಯಿಂದ ಬೆಂಕಿ ಹೊತ್ತಿಕೊಂಡು ಬಸ್​ನಲ್ಲಿದ್ದ 20 ಪ್ರಯಾಣಿಕರು ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.

    ಶುಕ್ರವಾರ ರಾತ್ರಿ ಸುಮಾರು 9.30ಕ್ಕೆ ಅವಘಡ ಸಂಭವಿಸಿದೆ ಎಂದು ಅಂದಾಜಿಸಲಾಗಿದ್ದು, ಬಸ್​ನಲ್ಲಿ ಒಟ್ಟು 46 ಪ್ರಯಾಣಿಕರಿದ್ದರು. ಇದರಲ್ಲಿ ನಿನ್ನೆಯೇ 20 ಮಂದಿಯನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಉತ್ತರ ಪ್ರದೇಶ ಪೊಲೀಸರು ಮಾಹಿತಿ ನೀಡಿದ್ದಾರೆ.

    ಜೈಪುರ ಕಡೆ ತೆರಳುತ್ತಿದ್ದ ಖಾಸಗಿ ಸ್ಲೀಪರ್​ ಕೋಚ್​​ ಬಸ್​ ಮತ್ತು ಟ್ರಕ್​ ನಡುವೆ ಡಿಕ್ಕಿ ಉಂಟಾದ ಬೆನ್ನಲ್ಲೇ ಬಸ್​ಗೆ ಬೆಂಕಿ ತಗುಲಿ ದುರ್ಘಟನೆ ಘಟಿಸಿದೆ. ಘಟನೆಯಲ್ಲಿ ಟ್ರಕ್​ಗೂ ಬೆಂಕಿ ತಗುಲಿದೆ.

    ಘಟನೆ ಬಗ್ಗೆ ಟ್ವೀಟ್​ ಮಾಡಿ ಕಳವಳ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ, ಉತ್ತರ ಪ್ರದೇಶದ ಕನೌಜ್ ಎಂಬಲ್ಲಿ ಭೀಕರ ರಸ್ತೆ ಅಪಘಾತ ನಡೆದಿದ್ದನ್ನು ಕೇಳಿ ದುಃಖವಾಯಿತು.​ ಅನೇಕ ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಸಾವಿಗೀಡಾದವರ ಕುಟುಂಬಕ್ಕೆ ಸಂತಾಪ ಸೂಚಿಸುತ್ತಾ, ಗಾಯಗೊಂಡವರು ಬೇಗ ಗುಣಮುಖರಾಗಲು ಬಯಸುತ್ತೇನೆಂದು ಇಂದು ಬೆಳಗ್ಗೆ ಹಿಂದಿಯಲ್ಲಿ ಪ್ರಧಾನಿ ಟ್ವೀಟ್​ ಮಾಡಿದ್ದಾರೆ.

    ಎರಡು ವಾಹನಗಳಲ್ಲಿ ಧಗಧಗನೇ ಉರಿಯುತ್ತಿದ್ದ ಬೆಂಕಿಯ ಜ್ವಾಲೆಯನ್ನು ನಂದಿಸಲು ಮೂರರಿಂದ ನಾಲ್ಕು ಅಗ್ನಿಶಾಮಕ ವಾಹನಗಳು ಸುಮಾರು 30 ರಿಂದ 40 ನಿಮಿಷ ಶ್ರಮಿಸಿವೆ ಎಂದು ತಿಳಿದುಬಂದಿದೆ.

    ಬಸ್​ನಲ್ಲಿದ್ದ ಗಾಯಗೊಂಡ ಪ್ರಯಾಣಿಕ ರಾಮ್​ಸೇನ್​, ಲಾರಿಗೆ ಡಿಕ್ಕಿ ಹೊಡೆದಾಗ ಬಸ್​ನಲ್ಲಿ ಬೆಂಕಿ ಕಾಣಿಸಿತು. ನಾನು ಕಿಟಕಿ ಗಾಜು ಒಡೆದು ಹೊರಬಂದೆ ಎಂದು ನಿನ್ನೆ ಮಾಧ್ಯಮಗಳಿಗೆ ತಿಳಿಸಿದ್ದರು. (ಏಜೆನ್ಸೀಸ್​)

    ಉತ್ತರಪ್ರದೇಶ ಬಸ್​ಗೆ ಬೆಂಕಿ; 21 ಪ್ರಯಾಣಿಕರು ಪಾರು, ಉಳಿದವರ ಬಗ್ಗೆ ಇನ್ನು ಸಿಗಬೇಕಿದೆ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts