ತಾಯಿ ಪಕ್ಕದಲ್ಲಿ ಮಲಗಿದ್ದ ಎರಡು ವರ್ಷದ ಬಾಲಕಿ ಅಪಹರಿಸಿ ಅತ್ಯಾಚಾರ!

ನವದೆಹಲಿ: ಎರಡು ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದು, ನಂತರ ಆ ಬಾಲಕಿಯನ್ನು ಆರೋಪಿ ದೆಹಲಿಯ ರೈಲ್ವೆ ನಿಲ್ದಾಣದ ಟ್ರಾಕ್‌ ಬಳಿ ಎಸೆದು ಹೋಗಿದ್ದಾನೆ.

ಪ್ರಕರಣ ಸಂಬಂಧ ಮಾದಕ ವ್ಯಸನಿಯಾಗಿದ್ದ 24 ವರ್ಷದ ಅನಿಲ್‌ ಎಂಬಾತನ್ನು ಭಾನುವಾರ ಮುಂಜಾನೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದಕ್ಷಿಣ ದೆಹಲಿಯ ಕೋತ್ವಾಲಿ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ಫುಟ್‌ಪಾತ್‌ನಲ್ಲಿ ತನ್ನ ತಾಯಿಯೊಂದಿಗೆ ಮಲಗಿದ್ದ ಬಾಲಕಿಯನ್ನು ಆರೋಪಿ ಅಪಹರಿಸಿದ್ದಾನೆ. ಶನಿವಾರ ಮಧ್ಯಾಹ್ನ ತಾಯಿ ಎಲ್ಲೆಡೆ ಮಗಳನ್ನು ಹುಡುಕಾಡಿದ ಬಳಿಕ ಪೊಲೀಸರಿಗೆ ದೂರನ್ನು ನೀಡಿದ್ದಾಳೆ.

ಹುಡುಕಾಟ ಆರಂಭಿಸಿದಾಗ ಕೇಂದ್ರ ದೆಹಲಿಯ ಆಸ್ಪತ್ರೆಯಲ್ಲಿ ಬಾಲಕಿಯೊಬ್ಬಳು ದಾಖಲಾಗಿರುವ ಕುರಿತು ವಿಷಯ ತಿಳಿಯುತ್ತದೆ. ನಂತರ ಕೋತ್ವಾಲಿಯಿಂದ ಅಪಹರಣಕ್ಕೀಡಾಗಿದ್ದ ಬಾಲಕಿ ಎಂದು ಗುರುತಿಸಲಾಗುತ್ತದೆ. ನಂತರ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಕುರಿತು ತಿಳಿದುಬಂದಿದೆ. ಸದ್ಯ ಬಾಲಕಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಆರೋಗ್ಯ ಸುಧಾರಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಬಳಿಕ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಮೂರು ತಿಂಗಳ ಹಿಂದೆಯಷ್ಟೇ ಆರೋಪಿಯು ಕಳ್ಳತನ ಪ್ರಕರಣವೊಂದರಲ್ಲಿ ಹರಿದ್ವಾರದಲ್ಲಿ ಬಂಧನವಾಗಿದ್ದ ಎನ್ನಲಾಗಿದೆ. (ಏಜೆನ್ಸೀಸ್)

Leave a Reply

Your email address will not be published. Required fields are marked *