ನೋಟು ಅಮಾನ್ಯೀಕರಣದ 2 ವರ್ಷದ ನಂತರ 3.5 ಕೋಟಿ ಮೌಲ್ಯದ ಹಳೆ ನೋಟು ವಶ

ನವ್ಸರಿ(ಗುಜರಾತ್‌): ಸುಮಾರು 3.5 ಕೋಟಿ ರೂ. ಮುಖಬೆಲೆಯುಳ್ಳ ಹಳೆಯ ನೋಟುಗಳನ್ನು ಬಿಲಿಮೋರಾದ ಗ್ರಾಮದಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದು, ನಾಲ್ವರನ್ನು ಬಂಧಿಸಿದ್ದಾರೆ.

ನೋಟು ಅಮಾನ್ಯೀಕರಣವಾಗಿ ಎರಡು ವರ್ಷಗಳೇ ಕಳೆದಿದ್ದು, ಇದೀಗ ಅಮಾನ್ಯೀಕರಣಗೊಂಡಿದ್ದ ನೋಟುಗಳು ಪತ್ತೆಯಾಗಿವೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2016ರ ನ. 8ರಂದು 1000 ಮತ್ತು 500 ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ್ದರು.

ಘಟನೆ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ಆಕ್ಸೆಂಟ್‌ ಕಾರು ಮತ್ತು 3.5 ಕೋಟಿ ನಿಷೇಧಿತ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಹಣದಲ್ಲಿ ಸಾವಿರ ರೂ. ಬೆಲೆಯ 13,432 ನೋಟು ಮತ್ತು 500 ರೂ. ಮುಖಬೆಲೆಯ 43,300 ನೋಟುಗಳಿವೆ ಎಂದು ಸ್ಥಳೀಯ ಅಪರಾಧ ವಿಭಾಗದ ತನಿಖಾಧಿಕಾರಿ ಶೈಲೇಶ್‌ಗಿರಿ ಗೋಸ್ವಾಮಿ ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. (ಏಜೆನ್ಸೀಸ್)